ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಗೂಂಡಾ ರಾಜ್ಯವಾಗಿ ಪರಿವರ್ತಿಸಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲು ಪ್ರಯತ್ನಿಸಿದ ವೇಳೆ ಪೊಲೀಸರು ತಡೆದರು. ಕೆ.ಎಸ್. ನವೀನ್, ಮಲ್ಲಿಕಾರ್ಜುನ್, ಮಂಜುನಾಥ್, ರೇಖಾ, ವೆಂಕಟೇಶ್ ಯಾದವ್, ದಗ್ಗೆ ಶಿವಪ್ರಕಾಶ್ ಸೇರಿ ಇತರರಿದ್ದರು. 
ಚಿತ್ರದುರ್ಗ

ಕಾಂಗ್ರೆಸ್ ಕಚೇರಿಗೆ ಮುತ್ತಿಗೆಹಾಕಲು ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕರ್ತರನ್ನು ತಡೆದ ಪೊಲೀಸರು
  • ರಾಜ್ಯದಲ್ಲಿ ಗೂಂಡಾ ಸರ್ಕಾರವೆಂದು ಆಕ್ರೋಶ
  • ನೀಟ್ ಪ್ರಶ್ನೆ ಪತ್ರಿಕೆ
ಚಿತ್ರದುರ್ಗ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೋರಾಟದ ನೆಪದಲ್ಲಿ ದೇಶದೊಳಗೆ ಕೈ ನಾಯಕರು ಅರಾಜಕತೆ ಸೃಷ್ಟಿಸುತ್ತಿದ್ದಾ ರೆಂದು ಆರೋಪಿಸಿ ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹರಸಾಹಸಪಟ್ಟರು. ಆದರೆ, ಪೊಲೀಸರು ತಡೆದರು.
ಒಬ್ಬರ ನಂತರ ಮತ್ತೊಬ್ಬರು ನುಗ್ಗಲು ಪ್ರಯತ್ನಿಸಿದರಾದರೂ ಪೊಲೀಸರು ಸುತ್ತುವರಿದಿದ್ದರಿಂದ ಅವಕಾಶ ಸಿಗಲಿಲ್ಲ. ಈ ವೇಳೆ ಕೆಲಕಾಲ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಕಾಂಗ್ರೆಸ್ ಸರ್ಕಾರ ಗೂಂಡಾ ವರ್ತನೆ ಪ್ರದರ್ಶಿಸುತ್ತಿದೆ ಎಂದು ಽಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಕೆಪಿಸಿಸಿ ಕಚೇರಿ ಎದುರು ಪ್ರತಿಭಟಿಸಿದ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಅಶ್ವಥ್ ನಾರಾಯಣ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದಿರುವುದು ಅತ್ಯಂತ ಖಂಡನೀಯ. ನೇರವಾಗಿ ಎದುರಿಸದೆ, ಕದ್ದುಮುಚ್ಚಿ ಬಿಜೆಪಿ ನಾಯಕರ ಮೇಲೆ ಹ¯್ಲೆಗೆ ಪ್ರಯತ್ನಿಸಿದ್ದಾರೆಂದು ದೂರಿದರು.
ಹೊಸದಿಲ್ಲಿಯ ಪ್ರತಿಭಟನೆಯಲ್ಲಿ ಏಕಾಏಕಿ ರಾಹುಲï‌ಗಾಂಽ ಕಾಣಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದು ರು ಧರಣಿ ನಡೆಸಿದ್ದು, ಹೋರಾಟದ ಕೀರ್ತಿ-ಯಶಸ್ಸನ್ನು ಪಡೆಯಲು ಹೊರಟಿರುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದರು.
ಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಮುಂದಾಗಿz್ದÁರೆ.
೩ ರಾಜ್ಯ ಹೊರತುಪಡಿಸಿ ೨೨ ರಾಜ್ಯಗಳಲ್ಲಿ ಬಿಜೆಪಿ, ಎನ್‌ಡಿಎ ನೇತೃತ್ವದ ಸರ್ಕಾರ ಅಽಕಾರದಲ್ಲಿದೆ. ಅಲ್ಲದೆ, ಕೇಂದ್ರದಲ್ಲೂ ೧೩ ವರ್ಷಗಳಿಂದ ಇದ್ದರೂ ವಿರೋಧ ಪಕ್ಷಗಳ ಹೋರಾಟ ಹತ್ತಿಕ್ಕುವ ಕೆಲಸ ಮಾಡಿಲ್ಲ. ವಿದ್ಯಾರ್ಥಿಗಳ ನಿರಶನ ದುರುಪಯೋಗ ಪಡಿಸಿಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ರಾಹುಲ್‌ಗಾಂಽ ಸೇರಿ ಕಾಂಗ್ರೆಸ್ ನಾಯಕರು ಹೊರಟಿz್ದÁರೆ.
ಭಾರತ ವಿಭಜಿಸುವ ಷಡ್ಯಂತ್ರ ಅಡಗಿದೆ ಎಂದು ವಾಗ್ದಾಳಿ ನಡೆಸಿದರು.ಸ್ಥಳದಲ್ಲಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್‌ಕುಮಾರ್ ಇದೇ ವೇಳೆ ಪಿಎಂ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಽಕ್ಕಾರ ಕೂಗಿದರು.
ಬಿಜೆಪಿ ಪದಾಽಕಾರಿಗಳಾದ ವೆಂಕಟೇಶ್ ಯಾದವ್, ರೇಖಾ, ಡಾ. ಮಂಜುನಾಥ್, ರವಿಕುಮಾರ್, ಮಂಜುನಾಥ್, ಮಲ್ಲಿಕಾರ್ಜು ನ್, ನಾಗರಾಜ್, ಅರುಣ್‌ಕುಮಾರ್, ಭಾರ್ಗವಿ ದ್ರಾವಿಡ್, ಪರಶುರಾಮ್, ಪ್ರಸಾದ್‌ಬಾಬು, ಶೈಲಜಾರೆಡ್ಡಿ, ದಗ್ಗೆ ಶಿವಪ್ರಕಾಶ್, ಲೋಕೇಶ್, ಶಂಭು ಇತರರಿದ್ದರು.