ಆರೋಪಿತ ನೌಕರರಾದ ಮೆಹಬೂಬ್ ಬಾಷಾ, ವಿಜಯಕುಮಾರ್, ವಿನಯಶರ್ಮಾ, ಬಸವರಾಜ್,ವೆಂಕಟೇಶ್
- ಹೊರಗುತ್ತಿಗೆ ನೌಕರರ ವೇತನ ಪಾವತಿಗೆ ವಾಮಮಾರ್ಗ
- ಆರು ಜನರ ವಿರುದ್ದ ದೂರು, ಐವರ ಬಂಧನ| ನಾಲ್ವರ ವಜಾ
- ಸಕಾಲಿಕ ಪರಿಶೀಲನೆ
ಚಿತ್ರದುರ್ಗ:ಜಿಲ್ಲಾಽಕಾರಿ ಹಾಗೂ ಅಪರ ಜಿಲ್ಲಾಽಕಾರಿಯ ಸಹಿ ಪೋರ್ಜರಿ ಮಾಡಿ ಹೊರಗುತ್ತಿಗೆ ನೌಕರರ ೧೫ ಲಕ್ಷ ರೂ.ವೇತ ನದ ಮೊತ್ತವನ್ನು ಬಿಡಿಸಿಕೊಳ್ಳಲು ಮುಂದಾಗಿದ್ದ ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲಾ ಖಜಾನೆ ಅಽಕಾರಿಗಳ ಸಕಾಲಿಕ ಪರಿಶೀಲನೆಯಿಂದ ೧೫ ಲಕ್ಷ ರೂ.ಮೊತ್ತದ ವಂಚನೆ ಪ್ರಕರಣವೊಂದು ತಪ್ಪಿದ್ದು ಜಿಲ್ಲಾಡ ಳಿತ ನಿಟ್ಟುಸಿರು ಬಿಟ್ಟಿದೆ. ಈ ಸಂಬAಧ ಆರು ಜನರ ವಿರುದ್ದ ದೂರು ದಾಖಲಿಸಿದ್ದು ಈಗಾಗಲೇ ಐವರನ್ನು ಬಂಽಸಲಾಗಿದೆ.
ಎ-ïಡಿಎ ಮೆಹಬೂಬ್ ಬಾಷಾ,ಹೊರಗುತ್ತಿಗೆ ನೌಕರರಾದ ವಿಜಯಕುಮಾರ್,ವಿನಯ ಶರ್ಮಾ, ಬಸವರಾಜ್ ಹಾಗೂ ಹೊರ ಗು ತ್ತಿಗೆಗೆ ನಕಲಿ ದಾಖೆಲ ನೀಡಿದ್ದ ವಿಎಂ ಎಚ್ ಎಂಟರ್‌ಪರೈಸಸ್ ಮಾಲೀಕ ವೆಂಕಟೇಶ್ ಬಂಽತರು. ಸೈಯದ್ ಸಾದಿಕ್ ಎಂಬಾತ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಆರೋಪಿತ ಸೈಯದ್‌ಸಾದಿಕ್ ಕಳೆದ ಗುರುವಾರ ಬೆಳಗ್ಗೆ ೬.೧೫ರ ಸಮಯದಲ್ಲಿ ಜಿಲ್ಲಾಽಕಾರಿ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಕಳವು ಮಾಡಿದ್ದ `ಡಿಎಸ್‌ಸಿ ಕೀ' ಹಾಗೂ ಸೀಲುಗಳನ್ನು ಬಳಸಿಕೊಂಡು ಜಿಲ್ಲಾಽಕಾರಿ, ಅಪರ ಜಿಲ್ಲಾಽಕಾರಿ ಅವರ ಪೋರ್ಜರಿ ಸಹಿ ಯೊಂದಿಗೆ ನಕಲಿ ಬಿಲ್‌ನ್ನು ಖಜಾನೆಗೆ ಕಳುಸಿದ್ದರು.
ಆದರೆ ಡಿಸಿ ಹಾಗೂ ಎಡಿಸಿ ಅವರ ಸಹಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಜಿಲ್ಲಾ ಖಜಾನೆ ಉಪ ನಿರ್ದೇಶಕರು ಈ ಕುರಿತು ಕೂಡ ಲೇ ಜಿಲ್ಲಾಽಕಾರಿ ಗಮನಕ್ಕೆ ತಂದರು. ಆಗ ಬಿಲ್‌ಮತ್ತು ಡಿಸಿ ಕಚೇರಿಯಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆ ರೋಪಿಗಳ ಕೃತ್ಯ ಬಯಲಾಗಿತ್ತು.
ಹೊರಗುತ್ತಿಗೆ ಏಜೆನ್ಸಿಯಿಂದ ಸೇವೆ ಪಡೆದಿರುವ ಕುರಿತಂತೆ ಯಾವುದೇ ದಾಖಲೆಗಳಿಲ್ಲವೆಂದು ಹೇಳಿ ೨೦೨೩ ಏಪ್ರಿಲ್‌ನಿಂದ ೨೦ ೨೪ ಮಾರ್ಚ್ವರೆಗೆ ವೇತನ ಪಾವತಿಗೆ ಡಿಯುಡಿಸಿ ನಿರಾಕರಿಸಿದ್ದರು. ಆದರೆ ಆರೋಪಿತರು ನಕಲಿ ಸಹಿ ಮಾಡಿ ಬಿಲ್‌ನ್ನು ಖಜಾನೆ ಗೆ ಕಳುಹಿಸಿದ್ದರು.
ಈ ಸಂಬAಧ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ನಗರಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
*ಎ-ïಡಿಎ ಅಮಾನತು, ಹೊರಗೊತ್ತಿಗೆ ನೌಕರರ ವಜಾ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಽಕಾರಿ ಟಿ.ವೆಂಕಟೇಶ್ ಅವರು ಆರೋಪಿತ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಎಫ್‌ಡಿಎ ಮೆಹಬೂಬ್ ಬಾಷಾ ಅವರನ್ನು ಅಮಾನತು ಮಾಡಿದ್ದಾರೆ ಎಂದು ಅಪರ ಜಿಲ್ಲಾಽಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.