ಚಳ್ಳಕೆರೆ ತಾಲೂಕಿನ ಕೋನಿಗರಹಳ್ಳಿ ಗ್ರಾಮದಲ್ಲಿ ಜರುಗಿದ ಹೊರಬೀಡು ಆಚರಣೆ ವಿರೋಧಿಸಿದ್ದಕ್ಕೆ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆ. ಗೋವಿಂದಪ್ಪ. crime 
ಚಿತ್ರದುರ್ಗ

ಹೊರಬೀಡು ಆಚರಣೆ ವಿರೋಧಿಸಿದ್ದಕ್ಕೆ ಹಲ್ಲೆ crime

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆ ತಾಲೂಕಿನ ಕೋನಿಗರಹಟ್ಟಿಯಲ್ಲಿ ಘಟನೆ
ಚಳ್ಳಕೆರೆ: ತಾಲೂಕಿನ ಕೋನಿಗರಹಟ್ಟಿಯಲ್ಲಿ ಮಂಗಳವಾರ ಗ್ರಾಮೀಣ ಆಚರಣೆಗಳನ್ನು ವಿರೋಧಿಸಿದ ಕಾರಣಕ್ಕೆ ಕೆ. ಗೋವಿಂದಪ್ಪ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಆತ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. crime
ಮಳೆ ಇಲ್ಲದೆ ತಾಲೂಕಿನಲ್ಲಿ ಬರಗಾಲ ಆವರಿಸಿದೆ. ಮಳೆ ಬರುತ್ತದೆ ಎನ್ನುವ ನಂಬಿಕೆ ಮೇಲೆ 300 ಜನರಿರುವ 70 ಕುಟುಂಬಗಳು ಕಳೆದ ಭಾನುವಾರ ಹೊರಬೀಡು ಆಚರಿಸಿದ್ದರು. ಈ ಆಚರಣೆ ವಿರೋಧಿಸಿ ಗೋವಿಂದಪ್ಪ ಹಾಗೂ ಕುಟುಂಬದವರು ಮನೆಯಲ್ಲೇ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಹಲವರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹತ್ತು ವರ್ಷಗಳಿಂದಲೂ ಗ್ರಾಮಸ್ಥರ ಆಚರಣೆ ವಿರೋಧಿಸುತ್ತಿದ್ದ ಗೋವಿಂದಪ್ಪ, ಗ್ರಾಮದ ಮಾರಮ್ಮ ಜಾತ್ರೆ ವೇಳೆ ದೇವಸ್ಥಾನದ ಬಳಿಗೆ ಡಾ. ಅಂಬೇಡ್ಕರ್ ಪೋಟೋ ತಂದಿಟ್ಟು, ಪ್ರಾಣಿ ಬಲಿ ಮಾಡಬಾರದು. ಇದು ಕಾನೂನಿಗೆ ವಿರುದ್ಧ ಎಂದು ತಡೆಯಲು ಪ್ರಯತ್ನಿಸಿದ್ದ.
ನಾಯಕನಹಟ್ಟಿ ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿ ಕೋಡಳಮ್ಮ ಹಬ್ಬ ಆಚರಿಸುವ ಪದ್ಧತಿ ಇದ್ದು, ಮಹಿಳೆಯರು ಸಂಭ್ರಮದಿಂದ ಬೇವಿನಕಟ್ಟೆಗೆ ಪೂಜೆ ಸಲ್ಲಿಸಿ ಹಿಟ್ಟಿನಾರತಿ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರು. ಈ ವೇಳೆ ಬೇವಿನ ಕಟ್ಟೆಗೆ ಅಂಬೇಡ್ಕರ್, ಬುದ್ಧರ ೆಟೋ ಇಟ್ಟು ಹಬ್ಬದ ಆಚರಣೆ ತಡೆಯಲು ಯತ್ನಿಸಿದ್ದನು. ಈತನ ನಡವಳಿಕೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ರಾಮಣ್ಣ, ಆರ್. ಹರೀಶ್, ಬಿ.ಕೆ. ತಿಪ್ಪೇಸ್ವಾಮಿ, ಗುರುಮೂರ್ತಿ, ಜಗನ್ನಾಥ, ಹೊಸಮನೆ ಗೋವಿಂದಪ್ಪ, ಜಯರಾಂ, ಬಲರಾಜ್ ಆರೋಪಿಸಿದ್ದಾರೆ.
ದಾರಿ ತಪ್ಪಿಸುವ ಕೆಲಸ: ಗ್ರಾಮದಲ್ಲಿ ಮೌಢ್ಯಾಚರಣೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನಾನು ಸಂಪೂರ್ಣ ವಿರೋಧ ಇದ್ದೇನೆ. ಕಳೆದ ಭಾನುವಾರ ಗ್ರಾಮದ ಹಟ್ಟಿ ಜನರು ಹೊರಬೀಡು ಹೋಗಿದ್ದರು. ನಮ್ಮ ಕುಟುಂಬ ಸದಸ್ಯರೆಲ್ಲ ಮನೆಯಲ್ಲೇ ಇದ್ದೆವು. ಊರಿನ ಆಚರಣೆಗಳಿಗೆ ಎದುರಾಗಿ ನಡೆದುಕೊಳ್ಳುತ್ತಿಯ. ನಿಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂಬ ಬೆದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಕೆ. ಗೋವಿಂದಪ್ಪ ತಿಳಿಸಿದ್ದಾರೆ.