ಚಿತ್ರದುರ್ಗದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಡೇಟಾ ಸೈನ್ಸ್ ಮತ್ತು ಜೆನ್ ಎಐ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಅವರು ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಸ್. ಉಮಾ, ಡಾ.ವಿ.ಪದ್ಮಪ್ರಿಯಾ ಅವರನ್ನು ಗೌರವಿಸಿದರು. 
ಚಿತ್ರದುರ್ಗ

ಭವಿಷ್ಯಕ್ಕೆ ನೆರವಾಗಲಿದೆ ಕೃತಕ ಬುದ್ಧಿಮತ್ತೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬಿ.ಎ. ಲಿಂಗಾರೆಡ್ಡಿ ಅನಿಸಿಕೆ
  • ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ
  • ಕೌಶಲಾಭಿವೃದ್ಧಿ ಕಾರ್ಯಾಗಾರ
ಚಿತ್ರದುರ್ಗ: ಪಠ್ಯದ ಜತೆ ಕುಶಲತೆ ಕಲಿಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಲಿದೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.
ಸಂಸ್ಥೆಯಲ್ಲಿ ಮಂಗಳವಾರದಿAದ ಆಯೋಜಿಸಿರುವ ಎರಡು ದಿನಗಳ ಡೇಟಾ ಸೈನ್ಸ್ ಮತ್ತು ಜೆನ್ ಎ ಐ ಕುರಿತ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿ, ಎಐನಂಥ ಹಲವು ತತ್ರಾಂಶಗಳ ಅರಿವು, ಕಲಿಕೆ ಇವತ್ತಿನ ಅವಶ್ಯಕತೆಯಾಗಿದೆ. ಈ ಕಾರ್ಯಾ ಗಾರದಲ್ಲಿ ಪ್ರಮುಖ ತಂತ್ರಾAಶÀ ಹಾಗೂ ಕಲಿಕಾ ಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಂಗಳೂರು ಬಿಎಂಎಸ್ ಇಂಜಿನಿಯರಿAಗ್ ಕಾಲೇಜು ಎಂಸಿಎ ವಿಭಾಗದ ಮುಖ್ಯಸ್ಥೆ ಡಾ.ಎಸ್.ಉಮಾ ಅವರು ದ್ವಿತೀಯ ಬಿಸಿಎ ಡೇಟಾ ಸೈನ್ಸ್ ಮೂಲ ತತ್ವಗಳು, ಪೈಥಾನ್ ಬಳಕೆ, ಪಾಂಡಾಸ್ ಮತ್ತು ಮ್ಯಾಟ್‌ಪ್ಲಾಟ್‌ಲಿಬ್ ಉಪಯೋಗಗಳ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು.
ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ವಿ. ಪದ್ಮಪ್ರಿಯಾ ಮಾತನಾಡಿ, ಪ್ರಸ್ತುತ ವಿದ್ಯಾಮಾನಕ್ಕೆ ಅವಶ್ಯವೆನಿಸಿರುವ ಕೃತಕ ಬುದ್ಧಿಮತ್ತೆ(ಎಐ)ಬಳಸಿಕೊಂಡು ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಇದರಿಂದ ಉದ್ಯೋಗಾ ವಕಾಶಗಳು ಹೆಚ್ಚಾಗಲಿವೆ ಎಂದರು. ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಅವರು ಸಂಪನ್ಮೂಲ ವ್ಯಕ್ತಿಗಳ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಡಳಿತಾಽಕಾರಿ ಡಾ.ಟಿ.ಎಸ್. ರವಿ ಮಾತನಾಡಿ, ಇಂಥ ಕಾರ್ಯಾಗಾರಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ಅಧ್ಯಯನಕ್ಕೆ ಸಹಕಾರಿಯಾಗುತ್ತವೆ ಎಂದರು. ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಜಿ.ಪಿ. ನಂದನ್ ಮಾತನಾಡಿದರು. ಪ್ರೊ.ಬಿ. ಮಾಧುರಿ, ಪ್ರೊ.ಇ.ಎಸ್. ನಿಖಿಲ್, ಪ್ರಾಧ್ಯಾಪಕರಾದ ಪ್ರೊ.ಟಿ.ವಿ. ಸುದರ್ಶನ್, ಪ್ರೊ.ಟಿ. ಅನುಷಾ, ಪ್ರೊ. ಚನ್ನವೀರಸ್ವಾಮಿ ಹಾಗೂ ಪ್ರೊ. ಕವನಾ ಇತರರು ಇದ್ದರು.