ಚಿತ್ರದುರ್ಗದ ಎಸ್‌ಜೆಎಂಐಟಿಯಲ್ಲಿ ಬುಧವಾರ ಆಯೋಜಿಸಿದ್ದ `ಟೆಕ್ನೋವಿಷನ್ ಪ್ರಾಜೆಕ್ಟ್ ಎಕ್ಸ್ಪೋ-೨ಕೆ ೨೫'ರಲ್ಲಿ ಪ್ರಾಚಾರ್ಯ ಡಾ. ಕೆ.ಬಿ. ಭರತ್, ಪ್ರೊ. ಬಿ.ಎಂ. ಹಾಲಸ್ವಾಮಿ, ಡಾ. ಕೆ.ಬಿ. ಸಿದ್ದೇಶ್, ಡಾ.ಕೆ.ಆರ್. ಕÊಷ್ಣಾರೆಡ್ಡಿ, ಡಾ.ಎ.ಎಂ. ರಾಜೇಶ್, ಪ್ರೊ.ಟಿ. ತನುಜಾ, ಪ್ರೊ. ಜಿ.ಆರ್. ನಂದಿನಿ ಇತರರು ಇದ್ದರು. 
ಚಿತ್ರದುರ್ಗ

ಕÊತಕ ಬುದ್ಧಿಮತ್ತೆ ಆಧಾರಿತ ಪ್ರಾಜೆಕ್ಟ್ಗಳು ಬಹುಪಯೋಗಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಪಠ್ಯಕ್ರಮ
  • ಟೆಕ್ನೋವಿಷನ್ ಪ್ರಾಜೆಕ್ಟ್ ಎಕ್ಸ್ಪೋ
  • ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ
ಚಿತ್ರದುರ್ಗ: ಪಠ್ಯಕ್ರಮವನ್ನೊಂದೇ ಗಮನದಲ್ಲಿಟ್ಟುಕೊಳ್ಳದೆ ವಿದ್ಯಾರ್ಥಿಗಳ ಆಲೋಚನೆಯ ಪ್ರಬುದ್ಧತೆ ಅನಾವರಣಕ್ಕೆ ಪ್ರದರ್ಶನ ಸಹಕಾರಿ ಆಗಿದೆ ಎಂದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.
ನಗರದ ಎಸ್‌ಜೆಎಂಐಟಿ ಎಲೆಕ್ಟಾçನಿಕ್ಸ್-ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಪ್ರಾಜೆಕ್ಟ್ಗಳ ಪ್ರದರ್ಶನ `ಟೆಕ್ನೋವಿಷನ್ ಪ್ರಾಜೆಕ್ಟ್ ಎಕ್ಸ್ಪೋ-೨ಕೆ ೨೫'ನ್ನು ಬುಧವಾರ ಉದ್ಘಾಟಿಸಿ ಮಾತನಾ ಡಿದರು.
ಸಮಾಜ, ರಕ್ಷಣೆ ಹಾಗೂ ರೋಗಿಗಳ ಉಪಚಾರಕ್ಕೆ ಅನುಕೂಲವಾಗುವಂತಹ ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸಿರುವುದು ಶ್ಲಾಘನೀಯ. ಕÊತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಈ ಪ್ರಾಜೆಕ್ಟ್ಗಳು ಬಹುಪಯೋಗಿಯಾಗಿವೆ ಎಂದರು.
ರೋಬೋಟ್ ಸ್ಮಾರ್ಟ್ ಕ್ಯಾಂಪಸ್ -Áರ್ ನ್ಯಾವಿಗೇಷನ್-ಇನ್-ರ‍್ಮೇಶನ್ ಶೇರಿಂಗ್ ಥ್ರೋ ಎಐ, ಗ್ರಾಮೀಣ ಪ್ರದೇಶದ ಜನರ ಔಷದೋಪಚಾರಕ್ಕೆ ನೆರವಾಗುವ ಎಐ ಅಸಿಸ್ಟೆಡ್ ಟೆಲಿಮೆಡಿಸಿನ್, ನಿರ್ಜನ ಪ್ರದೇಶದಲ್ಲಿ ಸಿಲುಕಿರುವವರನ್ನು ಹುಡುಕುವ ಎಐ ಪವರ್‌ಡ್ ಸರ್ಚ್-ರೆಸ್ಕ್ಯೂ ಡ್ರೋಣ್, ಭೂ ಕುಸಿತ ತಡೆಯುವ ಯೂಸಿಂಗ್ ತ್ರೀ ಸ್ಟೇಜ್ ವಾರ್ನಿಂಗ್ ಸಿಸ್ಟಂ ಇನ್‌ಡಬ್ಲಯೂ ಎಸ್‌ಎನ್ ಇತ್ಯಾದಿ ೨೩ ಮಾದರಿಗಳು ಪ್ರದರ್ಶನದಲ್ಲಿದ್ದವು.
ಸರ್ಕಾರಿ ಪಾಲಿಟೆಕ್ನಿಕ್ ಹಿರಿಯ ಉಪನ್ಯಾಸಕ ಪ್ರೊ.ಬಿ.ಎಂ. ಹಾಲಸ್ವಾಮಿ, ಎಲೆಕ್ಟಾನಿಕ್ಸ್ -ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ. ಸಿದ್ದೇಶ್, ಡಾ.ಕೆ.ಆರ್. ಕೃಷ್ಣಾರೆಡ್ಡಿ, ಐಕ್ಯುಎಸಿ ಸಂಚಾಲಕ ಡಾ.ಎ.ಎಂ. ರಾಜೇಶ್, ಪ್ರೊ.ಟಿ. ತನುಜಾ, ಕಾರ್ಯಕ್ರಮ ಸಂಚಾಲಕರಾದ ಪ್ರೊ.ಜಿ.ಆರ್. ನಂದಿನಿ ಮತ್ತಿತರರು ಇದ್ದರು. ಪ್ರದರ್ಶನದಲ್ಲಿ ಡಿ.ಕೆ. ರುಚಿತಾ ತಂಡದ ವಿದ್ಯಾರ್ಥಿಗಳು ಪ್ರಥಮ, ಆರ್. ರಕ್ಷಿತಾ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.