ಚೌಳೂರು ಗೇಟ್ ಬಳಿ ಜಾನುವಾರುಗಳಿಗೆ ಅಕ್ಕಿ ಬೆಲ್ಲ ಮತ್ತು ಮೇವು ತಿನ್ನಿಸುವ ಮೂಲಕ ಸಚಿವ ಟಿ. ರುಮೂರ್ತಿ ಗೋಶಾಲೆಗೆ ಚಾಲನೆ ನೀಡಿದರು. ಕಾಂತರಾಜು, ರೆಹಾನ್‌ಪಾಷಾ, ಡಾ. ಶ್ರೀನಿವಾಸಬಾಬು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. Visit
ಚಿತ್ರದುರ್ಗ

ಬರಪೀಡಿತ ಪ್ರದೇಶಗಳಲ್ಲಿ ಮೇವು, ನೀರಿನ ವ್ಯವಸ್ಥೆ

ಚೌಳೂರು ಗೇಟ್ ಬಳಿಯ ಗೋಶಾಲೆಗೆ ಸಚಿವರ ಭೇಟಿ

ಪರಶುರಾಮಪುರ: ಸರ್ಕಾರದ ನಿರ್ದೇಶನದಂತೆ ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ಮೇವು, ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರುಮೂರ್ತಿ ಹೇಳಿದರು.

ಸಮೀಪದ ಚೌಳೂರು ಗೇಟ್ ಬಳಿ ಜಿಲ್ಲಾಡಳಿತದ ವತಿಯಂದ ತೆರೆಯಲಾಗಿರುವ ಗೋಶಾಲೆಗೆ ಬುಧವಾರ ಜಾನುವಾರುಗಳಿಗೆ ಮೇವು, ಅಕ್ಕಿ, ಬೆಲ್ಲ ತಿನ್ನಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು, ನೀರು ನೆರಳಿನ ವ್ಯವಸ್ಥೆ ಮಾಡುತ್ತಿದೆ. ಜನರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದೆ ಎಂದು ತಿಳಿಸಿದರು.

ಗೋಶಾಲೆಯಲ್ಲಿ ಜಾನುವಾರುಗಳಿಗೆ ಗುಣಮಟ್ಟದ ಮೇವು ಒದಗಿಸುವ ಹೊಣೆ ತಾಲೂಕು ಆಡಳಿತದ್ದಾಗಿದೆ. ಕಂದಾಯ, ಪಶುವೈದ್ಯಕೀಯ, ಪಂಚಾಯತ್‌ರಾಜ್ ಇಲಾಖೆಗಳ ಅನುಷ್ಠಾನಾಧಿಕಾರಿಗಳು ನಿತ್ಯ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಲೋಪಗಳಾದರೆ ಅಧಿಕಾರಿಗಳನ್ನೇ ಹೊಣೆ ವಾಡಿ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಚಳ್ಳಕೆರೆ ತಾಲೂಕು ಪಶು ನಿಲಾಖೆ ಎಡಿಎ ಡಾ. ಶ್ರೀನಿವಾಸಬಾಬು ವಾತನಾಡಿ, ನಿತ್ಯ ಗೋಶಾಲೆಗೆ ಪಶುವೈದ್ಯರು ಭೇಟಿ ನೀಡಿ ಮೇವು, ನೀರು ಪರಿಶೀಲಿಸಿ ವರದಿ ವಾಡಬೇಕು. ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಹೋಬಳಿ ವ್ಯಾಪ್ತಿಯ ರೈತರು ಜಾನುವಾರು ಹೊಡೆದುಕೊಂಡು ಬಂದು ಗೋಶಾಲೆಯಲ್ಲಿ ವಿತರಿಸುವ ಮೇವು ನೀರು ಪಡೆದುಕೊಂಡು ರಾಸುಗಳನ್ನು ಸಂರಕ್ಷಣೆ ವಾಡಿಕೊಳ್ಳಬೇಕು ಎಂದರು.

ನಾಡಕಚೇರಿ ಡಿಟಿ ಅನ್ನಪೂರ್ಣ, ಆರ್‌ಐ ರಾಜೇಶ, ವಿಎ ಶರಣಬಸವ, ರೈತರಾದ ನವೀನ್‌ಗೌಡ, ಮಲ್ಲಪ್ಪ, ಈರಣ್ಣ, ಸ್ವಾಮಿ, ವೀರಭದ್ರಪ್ಪ, ಲೋಕೇಶ, ಈರಣ್ಣ, ರಾಮಣ್ಣ, ದೇವರಾಜು, ನಾಗರಾಜು, ತಿಮ್ಮಯ್ಯ, ರಾಜು, ಈರಣ್ಣ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕಂದಾಯ ಅಧಿಕಾರಿಗಳು ಇದ್ದರು.

ವೈದ್ಯಕೀಯ ತಪಾಸಣೆ ಕಡ್ಡಾಯ

ಗೋಶಾಲೆಯ ರಾಸುಗಳು ರೋಗ ರುಜಿನಗಳಿಂದ ಬಳಲಬಾರದು. ತಕ್ಷಣ ಪಶು ವೈದ್ಯರು ರಾಸುಗಳ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಸರ್ಕಾರದ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ತಹಸೀಲ್ದಾರ್ ರೆಹಾನ್‌ಪಾಷಾ ತಿಳಿಸಿದರು.

ಕೊರತೆಗಳಾಗದಂತೆ ಕ್ರಮ

ಸರ್ಕಾರದ ನಿರ್ದೇಶನದಂತೆ ಗೋಶಾಲೆಯಲ್ಲಿ ನೋಂದಣಿಯಾದ ಜಾನುವಾರುಗಳಿಗೆ ಮೇವು ಒದಗಿಸಿ ಯಾವುದೇ ಕೊರತೆ ಗಳಾಗದಂತೆ ಕ್ರಮ ವಹಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಕಾಂತರಾಜು ತಿಳಿಸಿದರು.