ಭರಮಸಾಗರದ ಖಾಲಿ ನಿವೇಶನವೊಂದರಲ್ಲಿ ಅಡಿಕೆ ಮೊಳಕೆಗಳನ್ನು ಪಾಲಿಥಿನ್ ಚೀಲಗಳಿಗೆ ವರ್ಗಾಯಿಸಿ ಸಸಿ ತಯಾರಿಕೆ ಕೆಲಸ ಮಾಡುತ್ತಿರುವುದು.seedling
- ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ
- ಸ್ವಯಂ ಉದ್ಯೋಗದ ಹಾದಿ
- ಮಳೆಯ ಆಗಮನ ಎದುರು ನೋಡುತ್ತಿರುವ ರೈತರು
ಮುಂಗಾರು ಮಳೆಯ ನಿರೀಕ್ಷೆ ಹೆಚ್ಚಾಗುತ್ತಿದ್ದಂತೆ ರೈತರು ಹಾಗೂ ಯುವಕರು ಅಡಿಕೆ ಸಸಿ ತಯಾರಿಕೆಯಲ್ಲಿ ತೊಡಗಿರುವುದು ಗ್ರಾಮೀಣ ಪ್ರದೇಶದಲ್ಲಿ ಹೊಸ ಚೈತನ್ಯ ಮೂಡಿಸಿದೆ. ಮಳೆಯ ಆಗಮನವನ್ನು ಎದುರು ನೋಡುತ್ತಿರುವ ರೈತರು ಈಗಾಗಲೇ ಅಡಿಕೆ ತೋಟಗಳ ಅಭಿವೃದ್ಧಿಗೆ ಅಗತ್ಯವಿರುವ ಗುಣಮಟ್ಟದ ಸಸಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. seedling
ಭರಮಸಾಗರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿಯೊಂದಿಗೆ ಪೂರಕ ಆದಾಯದ ಮಾರ್ಗ ಹುಡುಕುತ್ತಿರುವ ಯುವಕರು ಅಡಿಕೆ ಸಸಿ ತಯಾರಿಕೆಯನ್ನು ಸ್ವಯಂ ಉದ್ಯೋಗದ ಪ್ರಮುಖ ಸಾಧನವಾಗಿಸಿಕೊಂಡಿದ್ದಾರೆ. ಉತ್ತಮ ತಳಿಯ ಅಡಿಕೆ ಬೀಜಗಳನ್ನು ಆಯ್ದು, ಕೆಂಪು ಹಾಗೂ ಕಪ್ಪು ಮಣ್ಣಿನ ಸಮತೋಲನ ಮಿಶ್ರಣ, ಸಾವಯವ ಗೊಬ್ಬರ ಮತ್ತು ಸೂಕ್ತ ಆರೈಕೆಯ ಮೂಲಕ ಸಾವಿರಾರು ಸಸಿಗಳನ್ನು ಪಾಲಿಥಿನ್ ಕವರ್‌ಗಳಲ್ಲಿ ಬೆಳೆಸಲಾಗುತ್ತಿದೆ. ಮುಂಗಾರು ಮಳೆ ಆರಂಭವಾದ ತಕ್ಷಣ ಈ ಸಸಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಗ್ರಾಮೀಣ ಭಾಗದ ಮಹಿಳೆಯರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೆ ಬೆನ್ನೆಲು ಬಾಗುತ್ತಿದ್ದಾರೆ. ಮಣ್ಣು ತುಂಬುವುದು, ಬೀಜ ಬಿತ್ತನೆ, ನೀರು ಹಾಯಿಸುವುದು, ಸಸಿಗಳ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ನೀಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆ ಲಾಭದಾಯಕ ಕೃಷಿಯಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅನೇಕ ರೈತರು ಅಡಿಕೆ ತೋಟಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಅಡಿಕೆ ಸಸಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ನಿರ್ಮಾಣವಾಗಿದ್ದು, ಸಸಿ ತಯಾರಿಕೆ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಮಟ್ಟದ ಉದ್ಯಮವಾಗಿ ರೂಪುಗೊಳ್ಳುತ್ತಿದೆ.
ಸ್ಥಳೀಯ ರೈತರ ಅಭಿಪ್ರಾಯದಂತೆ, ಈ ಬಾರಿ ಮುಂಗಾರು ಉತ್ತಮವಾಗಿ ಬಂದರೆ ಅಡಿಕೆ ಸಸಿಗಳಿಗೆ ಇನ್ನಷ್ಟು ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಕೃಷಿಯನ್ನು ನಂಬಿಕೊಂಡಿರುವ ಯುವಕರು ಮಳೆಯ ಆಶಾಕಿರಣದೊಂದಿಗೆ ತಮ್ಮ ಶ್ರಮ ಮತ್ತು ಸಮಯವನ್ನು ಹೂಡಿಕೆ ಮಾಡಿಕೊಂಡಿದ್ದು, ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
"
ಕಳೆದ ಆರು ವರ್ಷಗಳಿಂದ ಚನ್ನಗಿರಿ ಹಾಗೂ ಮಲೆನಾಡು ಭಾಗಗಳಿಂದ ಉತ್ತಮ ತಳಿಯ ಹಾಗೂ ಹಳೆಯ ಕೆಂಪು ಗೋಟುಗಳನ್ನು ತರಿಸಿ ಕೊಳೆಹಾಕಿ, ಮೊಳಕೆ ಬಂದ ಬಳಿಕ ಎರಡು ಕೆಜಿ ಪಾಲಿಥಿನ್ ಕವರ್‌ಗಳಲ್ಲಿ ಕೆಂಪು-ಕಪ್ಪು ಮಣ್ಣಿನ ಮಿಶ್ರಣದಲ್ಲಿ ಸಸಿಗಳನ್ನು ಬೆಳೆಸುತ್ತಿದ್ದೇನೆ.
— ಚಂದ್ರಶೇಖರ್