ಚಿತ್ರದುರ್ಗದಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಆರ್.ಗೋಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
- ಹಾಸ್ಟೆಲ್‌ಗಳ ಸಮಸ್ಯೆಗಳನ್ನು ಬಗೆಹರಿಸಿ
- ರೈತ ವಿದ್ಯಾರ್ಥಿ ನಿಽ ಕೊಡಿ
- ಎಪಿವಿಪಿ
ಚಿತ್ರದುರ್ಗ: ರಾಜ್ಯದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಸಮರ್ಪಕವಾಗಿ ಬಿಡುಗಡೆ ಮಾಡ ಬೇಕು ಹಾಗೂ ವಿದ್ಯಾರ್ಥಿ ನಿಲಯಗಳ
ಸಮಸ್ಯೆಗಳನ್ನು ತಕ್ಷಣ ನಿವಾರಿಸಬೇಕೆಂದು ಎಬಿವಿಪಿ ವಿಭಾಗ ಸಂಚಾಲಕ ಆರ್.ಗೋಪಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆ ಮಾಡಬೇಕು. ೨೦೨೩-೨೦೨೫ ಸಾಲಿನವರೆಗೆ ಬಾಕಿ ಇರುವ ಎಲ್ಲ ವಿದ್ಯಾರ್ಥಿ ವೇತನದ ಅರ್ಜಿಗಳ ವಿಲೇವಾರಿಗೆ ವಿಶೇಷ ತಂಡ ರಚಿಸಬೇಕು. ಪೋರ್ಟಲ್ ದೋಷ ಸರಿಪಡಿಸಿ, ವಿದ್ಯಾರ್ಥಿಗಳ ಪರಿಶೀಲನೆ ಸರಳೀಕರಣಗೊಳಿಸಬೇಕು.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ವೇತನ ಜಮಾ ಮಾಡಬೇಕು. ವಿದ್ಯಾರ್ಥಿ ವೇ ತನ ಬಿಡುಗಡೆಯಾಗದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬAಽಸಿದ ಇಲಾಖೆ ಅಽ ಕಾರಿಗಳು ಸೂಕ್ತ ಕ್ರಮವಹಿಸಬೇಕು.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ದುಬಾರಿ ದರದ ಪಿ ಜಿ ಗಳಲ್ಲಿದ್ದು ಅಧ್ಯಯನ ಮಾಡುವಂಥ ಸ್ಥಿತಿ ಇದೆ. ಆದ್ದರಿಂದ ಹಾಸ್ಟೆಲ್‌ಗಳಿಗೆ ಸಂಬAಽಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸ ಬೇ ಕು. ರೈತ ವಿದ್ಯಾರ್ಥಿ ನಿಽಯನ್ನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಆರ್.ಚಂದನಾ, ರಘು, ಸಂಜಯ್ ಸುದ್ದಿಗೋ ಷ್ಠಿಯಲ್ಲಿದ್ದರು.