ಸಚಿವ ಡಿ. ಸುಧಾಕರ್ ನೇತೃತ್ವದ ಶಾಸಕರ ನಿಯೋಗ ಬೆಂಗಳೂರಲ್ಲಿ ಬುಧವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೋರಿ ಮನವಿ ಸಲ್ಲಿಸಿತು. ಶಾಸಕರಾದ ಟಿ. ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಇದ್ದಾರೆ.
- ಸಚಿವ ಸುಧಾಕರ್ ನೇತೃತ್ವದಲ್ಲಿ ಡಿಸಿಎಂ ಭೇಟಿ
- ೩೦೦ ಕೋಟಿ ರೂ.ತುರ್ತು ಬಿಡುಗಡೆಗೆ ಆಗ್ರಹ
- ಡಿಸಿಎಂ ಡಿ.ಕೆ. ಶಿವಕುಮಾರ್
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ೫ ಸಾವಿರ ಕೋಟಿ ರೂ.ಅನುದಾನ ಕಾಯ್ದಿರಿಸುವಂತೆ ಹಾಗೂ ತುರ್ತಾಗಿ ೩೦೦ ಕೋಟಿ ರೂ. ಬಿಡುಗಡೆಗೆ ಕೋರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾಂಗ್ರೆಸ್ ಶಾಸಕರು, ಅನುದಾನ ತರುವ ಪ್ರಯತ್ನ ಮುಂದುವರಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಅವರು, ಬುಧವಾರ ಬೆಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿಯಾಗಿ ಯೋಜನೆಗೆ ಅನುದಾನಕ್ಕಾಗಿ ಮನವಿ ಮಾಡಿದ್ದಾರೆ.
ಯೋಜನೆಗೆ ೫ ಸಾವಿರ ಕೋಟಿ ರೂ.ಹಾಗೂ ಚಿತ್ರದುರ್ಗ ತಾಲೂಕು ಗೋನೂರು ಅಕ್ವಾಡೆಕ್ಟ್ವರೆಗೆ ಶೀಘ್ರದಲ್ಲೇ ಪ್ರಾಯೋಗಿ ಕವಾಗಿ ನೀರು ಹರಿಸಲು ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಕ್ಷಣಕ್ಕೆ ೩೦೦ ಕೋಟಿ ರೂ.ಅನುದಾನ ಒದಗಿಸುವಂತೆ ಸಚಿವ ಡಿ. ಸುಧಾಕರ್, ಶಾಸಕರಾದ ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ ಹಾಗೂ ಎನ್.ವೈ. ಗೋಪಾಲಕೃಷ್ಣ, ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೋರಿದರು.
ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ದೊರೆಯುವ ಸೂಕ್ಷ÷್ಮನೀರಾವರಿ ಸೌಲಭ್ಯ, ಅಚ್ಚುಕಟ್ಟು ಪ್ರದೇಶದ ೩೬೭ ಸಣ್ಣ ನೀರಾವರಿ ಇಲಾಖೆ ಕೆರೆ ಗಳಿಗೆ ನೀರು ತುಂಬಿಸುವುದು ಮತ್ತು ವಾಣಿ ವಿಲಾಸ ಸಾಗರಕ್ಕೆ ೨ ಟಿಎಂಸಿ ನೀರು ಹರಿಸುವ ಯೋಜನೆ ಸಮಗ್ರ ಉದ್ದೇಶವನ್ನು ವಿವರಿಸಿದರು. ಯೋಜನೆ ತ್ವರಿತವಾಗಿ ಪೂರ್ಣಗೊಂಡರೆ ಜಿಲ್ಲೆಗಳ ಅಂತರ್ಜಲ ಮಟ್ಟ ಸುಧಾರಿಸಲಿದೆ. ಕೃಷಿ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ತಿಳಿಸಿದೆ.