ಮಂಡ್ಯದ ಸದ್ವಿದ್ಯಾರಂಗ ತಂಡದ ಕಲಾವಿದರು ಚಿತ್ರದುರ್ಗದಲ್ಲಿ ಗುರುವಾರ ಪ್ರದರ್ಶಿಸಿದ `ಅತ್ತಲಾ ಕಿಷ್ಕಿಂಧೆಯೊಳ್' ನಾಟಕದ ದೃಶ್ಯ.  
ಚಿತ್ರದುರ್ಗ

ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸಬೇಕಿದೆ

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ ಅಭಿಮತ

ಚಿತ್ರದುರ್ಗ: ಜಡ್ಡುಗಟ್ಟಿದ ವಾತಾವರಣ ಎಲ್ಲೆಡೆ ಕಂಡು ಬರುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಬೆಳೆಸಬೇಕಿದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ಹೇಳಿದರು.

ಮಂಡ್ಯ ಕರ್ನಾಟಕ ಸಂಘದ ಸಹಯೋಗದಲ್ಲಿ ಅಲ್ಲಿಯ ಸದ್ವಿದ್ಯಾರಂಗ ತಂಡದ ಕಲಾವಿದರು ನಗರದ ತರಾಸು ರಂಗಮAದಿರದಲ್ಲಿ ಗುರುವಾರ ರಾಷ್ಟçಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕಿಷ್ಕಿಂಧಾ ಸಂಪುಟದ ಆಯ್ದ ಭಾಗಗಳ ರಂಗಪ್ರಸ್ತುತಿ `ಅತ್ತಲಾ ಕಿಷ್ಕಿಂಧೆಯೊಳ್' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಜನರ ಆದ್ಯತೆಗಳೇ ಬೇರೆ ಆಗುತ್ತಿವೆ. ನಾಟಕಗಳೆಡೆ ಪ್ರೇಕ್ಷಕರ ಆಸಕ್ತಿ ಅಪರೂಪವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲಿಕೆಯ ಭಾಗವಾಗಿರುವ ರಂಗ ಚಟುವಟಿಕೆಗಳ ಕಡೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಬೇಕಿದೆ ಎಂದರು.

ನಾಟಕ, ಸಂಗೀತದ ಪರಿಚಯವಾದರೆ ಮಕ್ಕಳ ವ್ಯಕ್ತಿತ್ವದ ವಿಕಾಸವಾಗುತ್ತದೆ. ಸುಲಲಿತವಾಗಿ ಹಳಗನ್ನಡ ಪದಗಳ ನಂಟು ಬೆಳೆಸಿಕೊಂಡವರಿAದು ವೈದ್ಯರು, ಇಂಜಿನಿಯರ್‌ಗಳಾಗಿದ್ದಾರೆ. ಲಲಿತ ಕಲೆಗಳಿಂದ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ ಎಂದರು.

ಸಾಹಿತ್ಯ ದಿಗ್ಗಜರ ಜತೆ ಸ್ಥಳೀಯವಾಗಿ ನಾಡು, ನುಡಿಗೆ ನೀಡಿದ ಸಾಹಿತ್ಯ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳಬೇಕಿದೆ. ಸಾಂಸ್ಕೃತಿಕ ಸಂಘಟನೆ ಗಟ್ಟಿಯಾಗಿ ನೆಲೆಯೂರಿದರೆ ಸ್ಥಳಿಯ ವೈವಿಧ್ಯತೆ ದಾಖಲಾಗುತ್ತದೆ. ಕನ್ನಡ ಕೆಲಸಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಸ್ಕೃತಿ ಇಲಾಖೆ ಜತೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು. ಎಲ್ಲ ಕಾರ್ಯಕ್ರಮಗಳೂ ಬೆಂಗಳೂರAಥ ದೊಡ್ಡ ನಗರಗಳಲ್ಲಿ ಆಗಬೇಕು ಎಂದಾದರೆ ಹೇಗೆ? ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಇಂಥ ಕಾರ್ಯಕ್ರಮಗಳು ನಾನಾ ಕಡೆ ನಡೆಯಬೇಕೆಂದು ಜಯಪ್ರಕಾಶ ಗೌಡ ಅಭಿಪ್ರಾಯಪಟ್ಟರು.

ಸಾಹಿತಿಗಳಾದ ಎಂ.ಜಿ. ರಂಗಸ್ವಾಮಿ, ಲೋಕೇಶ್‌ಅಗಸನಕಟ್ಟೆ, ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ದುರ್ಗದ ಸಿರಿ ಕಲಾ ಸಂಘದ ಮಹಾಂತರೆಡ್ಡಿ, ಮಂಡ್ಯ ಸದ್ವಿದ್ಯಾಶಿಕ್ಷಣ ಸಂಸ್ಥೆ ಮುಖ್ಯಸ್ಥ ಹರೀಶ್‌ಕುಮಾರ್ ಇದ್ದರು.

ಕನ್ನಡ ಸಂಸÊ್ಕತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಮಂಜುನಾಥ್ ಎಲ್. ಬಡಿಗೇರ ಅವರ ರಂಗಪಠ್ಯ, ಸಂಗೀತ, ವಿನ್ಯಾಸ ಹಾಗೂ ನಿರ್ದೇಶನ, ಎಚ್.ಡಿ. ಸೋಮಶೇಖರ್ ಅವರ ಬೆಳಕು ಮತ್ತು ಪ್ರಸಾದನ, ಗುರುಮೂರ್ತಿ ವರದಾಮೂಲ ಅವರ ರಂಗಸಜ್ಜಿಕೆ ಹಾಗೂ ಪರಿಕರ, ಕೃಷ್ಣ ಚೈತನ್ಯ ಅವರು ಸಂಗೀತದೊAದಿಗೆ ನಾಟಕ ಮೂಡಿ ಬಂದಿತು.