ಚಿತ್ರದುರ್ಗ ಜೈಲಿನಲ್ಲಿ ಉತ್ಪಾದಿಸಿರುವ ಅಗರಬತ್ತಿ. ಧೂಪ ಇತ್ಯಾದಿ.  
ಚಿತ್ರದುರ್ಗ

ರಾಜ್ಯದ ಕಾರಾಗೃಹಗಳಿಗೆ ತಲುಪದ ಆಂಬುಲೆನ್ಸ್ ?

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒಗಳಿಗೆ ಆಯುಕ್ತರ ನಿರ್ದೇಶನ
  • ಡಿಜಿಪಿ ಅವರಿಂದಲೂ ಜ್ಞಾಪನಾ ಪತ್ರ
  • ಜಿಲ್ಲಾ ಕಾರಾಗೃಹ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿ ಜಿಲ್ಲಾ, ತಾಲೂಕು ಕಾರಾಗೃಹಗಳಿಗೆ ಚಾಲಕರ ಸಹಿತ ೫೮ ಆಂಬುಲೆನ್ಸ್ಗಳನ್ನು ತಕ್ಷಣ ಒದಗಿಸಬೇಕೆಂಬ ಆರೋಗ್ಯ ಇಲಾಖೆ ಆಯುಕ್ತರ ಆದೇಶ ಜಾರಿಗೆ ಇನ್ನೂ ಮುಹೂರ್ತ ಕೂಡಿ ಬಂದAತಿಲ್ಲ.
ರಾಜ್ಯದ ಕಾರಾಗೃಹಗಳಲ್ಲಿ ಔಷಧ ಕೊರತೆಯಿದೆ ಎಂಬ ದೂರಿನ ಬೆನ್ನಲ್ಲೇ ಒಂದೂವರೆ ತಿಂಗಳ ಹಿಂದೆ ಆಂಬುಲೆನ್ಸ್ ಒದಗಿಸಲು ಆದೇಶಿಸಲಾಗಿತ್ತು. ಆದರೆ ಇನ್ನೂ ಹಲವು ಕಾರಾಗೃಹಗಳಿಗೆ ಈವರೆಗೆ ಅವುಗಳ ನಿಯೋಜನೆ ಆಗಿಲ್ಲ.
ಆಯುಕ್ತರು ಕಳೆದ ಮೇ ೨೭ರಂದು ಸಂಬAಽಸಿದ ಆಯಾ ಡಿಎಚ್‌ಒಗಳಿಗೆ ಆದೇಶ ಹೊರಡಿಸಿದ್ದು, ಆಯಾ ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿರುವ ರಾಜ್ಯ ವಲಯಕ್ಕೆ ಸೇರಿದ ಇಂಥದ್ದೇ ನೋಂದಣಿ ಸಂಖ್ಯೆ ವಾಹನ ನೀಡಲು ಸೂಚಿಸಿದ್ದಾರೆ.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ಕುಮಾರ್ ಜೂನ್ ೪ರಂದು ಆರೋಗ್ಯ ಇಲಾಖೆಗೆ ಜ್ಞಾಪನಾ ಪತ್ರ ಸಹ ಬರೆದಿದ್ದಾರೆ. ಕಾ ರಾಗೃಹ ಇಲಾಖೆ ಪ್ರತ್ಯೇಕವಾಗಿ ಆಂಬುಲೆನ್ಸ್ ಖರೀದಿಸಲು ಯೋಚಿಸಿದೆ. ಅಲ್ಲಿಯವರೆಗೂ ತುರ್ತು ಸನ್ನಿವೇಶಕ್ಕಾಗಿ ಕಾರಾಗೃಹ ಗಳಿಗೆ ಇವುಗಳ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವೈದ್ಯರ ಕೊರತೆ:
ಈ ಮೊದಲು ಕಾರಾಗೃಹಗಳಲ್ಲಿ ವೈದ್ಯ ಮತ್ತು ವೈದ್ಯ ಸಿಬ್ಬಂದಿ ಹುದ್ದೆಗಳಿದ್ದವು. ಅವುಗಳನ್ನು ಆರೋಗ್ಯ ಇಲಾಖೆಗೆ ಹಿಂತಿರುಗಿಸಿದ ಬಳಿಕ ಔಷಧ ಕೊರತೆ ಸಹಿತ ಕೈದಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುತ್ತಿವೆ. ಸದ್ಯ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಚಿಕಿತ್ಸಾಲಯಕ್ಕೆ ವಾರದಲ್ಲಿ ೩ ದಿನ ಜಿಲ್ಲಾಸ್ಪತ್ರೆ ವೈದ್ಯರು ಭೇಟಿ ನೀಡಿ ಕೈದಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡುತ್ತಿದ್ದಾರೆ. ಇಲ್ಲಿಗೆ ವಾರದ ಏಳು ದಿನಗಳ ಕಾಲವೂ ವೈದ್ಯರು ಅಗತ್ಯವಿದೆ ಎಂಬ ಕೋರಿಕೆ ಇದೆ.
ಫ್ರೀ ಬರ್ಡ್ ಬ್ರ‍್ಯಾಂಡ್
ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ರುಡ್‌ಸೆಟ್ ಸಂಸ್ಥೆಯೊAದಿಗೆ ವೃತ್ತಿ ಕೌಶಲ ತರಬೇತಿಗೆ ಒತ್ತು ಕೊಡಲಾಗುತ್ತಿದೆ. ಅಗರಬತ್ತಿ ಹಾಗೂ ಫಿನಾಯಿಲ್ ಉತ್ಪಾದನೆಗೆ ಜೈಲು ಅಽಕಾರಿಗಳು ಮುಂದಾಗಿದ್ದಾರೆ. ೩೦ ಕೈದಿಗಳಿಗೆ ೧೫ ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ. ೧೮ ಬಗೆಯ ಅಗರಬತ್ತಿ ಉತ್ಪಾದಿಸಲು ಯೋಜಿಸಲಾಗಿದೆ. ಸದ್ಯ ೧೦ ಬಗೆಯ ಅಗರಬತ್ತಿ ಸ್ಯಾಂಪಲ್ ಆಗಿ ಉತ್ಪಾದಿಸಲಾಗುತ್ತಿದೆ. ಮಧ್ಯಾಹ್ನ ಒಂದು ಗಂಟೆ ವಿರಾಮ ಹೊರತುಪಡಿಸಿ ಒಬ್ಬ ಕೈದಿ ಬೆಳಗ್ಗೆ ೧೦.೩೦ರಿಂದ ಸಂಜೆ ೫.೩೦ ರವರೆಗೆ ೨೦೦ರಿಂದ ೫೦೦ ಅಗರಬತ್ತಿಗಳನ್ನು ತಯಾರಿಸುತ್ತಿದ್ದಾರೆ. ನಿತ್ಯ ಅಂದಾಜು ೨೦೦ ಲೀಟರ್ ಫಿನಾಯಿಲ್ ತಯಾರಿಕೆ ಗುರಿ ಇದೆ.
ಯಾವ ಊರಿಗೆ ಎಷ್ಟು ವಾಹನ?
ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ೫, ಮೈಸೂರು, ಬೆಳಗಾವಿ,ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿ, ಶಿವಮೊಗ್ಗ ಕೇಂ ದ್ರ ಕಾರಾಗೃಹ, ಮಹಿಳಾ ಕೇಂದ್ರ ಕಾರಾಗೃಹಗಳಿಗೆ ತಲಾ ಒಂದೊAದು, ದೇವನಹಳ್ಳಿ ಬಯಲು ಬಂದೀಖಾನೆ, ಬೆಂಗಳೂರು ದಕ್ಷಿಣ, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು, ಯಾದಗಿರಿ, ಬೀದರ್, ಚಾಮರಾಜನಗರ, ಹಾವೇರಿ, ಮಂಡ್ಯ, ಹಾಸನ, ಮಡಿಕೇರಿ, ಉಡುಪಿ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಕಾರವಾರ, ಬಾಗಲಕೋಟೆ ಜಿಲ್ಲಾ ಕಾರಾಗೃಹಗಳಿಗೆ ತಲಾ ಒಂದು ಆಂಬುಲೆನ್ಸ್ ಒದಗಿಸಬೇಕು.
ಹಳಿಯಾಳ, ಗೋಕಾಕ್, ಬೈಲಹೊಂಗಲ, ಜಮಖಂಡಿ,ದೇವದುರ್ಗ, ಚಿಂತಾಮಣಿ, ಕೆಜಿಎಫ್, ತಿಪಟೂರು, ಕೆ.ಆರ್.ನಗರ, ನಂಜನಗೂಡು, ಸಕಲೇಶಪುರ, ಸಾಗರ, ಶಹಾಪುರ, ಔರಾದ್, ಹುಮ್ನಾಬಾದ್, ಹೊಸಪೇಟೆ, ಹರಪನಹಳ್ಳಿ, ಹಡಗಲಿ, ದೇವ ದುರ್ಗ, ಮಧುಗಿರಿ, ಲಿಂಗಸೂಗೂರು, ಸೇಡಂ, ಹುಬ್ಬಳ್ಳಿ ತಾಲೂಕು ಕಾರಾಗೃಹಗಳಿಗೆ ತಲಾ ಒಂದು ಆಂಬುಲೆನ್ಸ್ ಒದಗಿಸಬೇಕಿದೆ.