ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕÀ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಮ ತ್ತು ರೋವರ್ಸ್ ಹಾಗೂ ರೇಂಜರ್ಸ್ ಚಟುವಟಿಕೆಗಳಿಗೆ ಸಾಹಿತಿ ಲೋಕೇಶ್ ಅಗಸಕಟ್ಟೆ ಚಾಲನೆ ನೀಡಿದರು. ಡಾ.ಕರಿಯಪ್ಪ ಜೆ.ಮಾಳಿಗೆ, ಡಾ.ಹನುಮಂತಪ್ಪ, ಡಾ.ಆರ್.ತಾರಿಣಿ ಶುಭದಾಯಿನಿ, ಡಾ.ಬಿ.ಸುರೇಶ, ಡಾ.ಕೆ.ಲೀಲಾವತಿ, ಪ್ರೊ.ಬಿ.ಇ.ಜಗನ್ನಾಥ ಇತರರು ಇದ್ದರು.
- ಸಾಹಿತಿ ಲೋಕೇಶ್ ಅಗಸನಕಟ್ಟೆ ಅಭಿಮತ
- ಸಾಂಸ್ಕೃತಿಕÀ ಚಟುವಟಿಕೆಗಳಿಗೆ ಚಾಲನೆ
- ಸತ್ಯ ಹಾಗೂ ಅಹಿಂಸೆ
ಚಿತ್ರದುರ್ಗ : ಸತ್ಯ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ‍್ಯ ಪಡೆಯಬೇಕೆಂಬ ಮಹಾತ್ಮ ಗಾಂಽÃಜಿ ಅವರ ಹಾಗೂ ಸಮಾಜದಲ್ಲಿ ತುಳಿತಕ್ಕೆ, ಅಸ್ಪ್ಪçಶ್ಯ ತೆಗೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂಕಲ್ಪಗಳು ವಿದ್ಯಾರ್ಥಿಗಳಿಗೆ ಮಾದರಿ ಆಗ ಬೇಕಿದೆ ಎಂದು ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜು ಆವರಣ ದಲ್ಲಿ ಶನಿವಾರ ಏರ್ಪಡಿಸಿದ್ದ, ಸಾಂಸ್ಕೃತಿಕÀ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
\ಪ್ರತಿಭೆ ಎಲ್ಲರಲ್ಲೂ ಅಡಕವಾಗಿರುತ್ತದೆ. ಅದನ್ನು ಗುರುತಿಸಿಕೊಂಡು ಗುರಿ ಹಾಗೂ ಸಂಕಲ್ಪದೊAದಿಗೆ ಮುನ್ನಡೆಯಬೇಕು. ಮಹಾ ತ್ಮ ಗಾಂಽÃಜಿ ಹಾಗೂ ಅಂಬೇಡ್ಕರ್ ಸೇರಿದಂತೆ ಹಲವು ಸಾಧಕರು ಸಂಕಲ್ಪದಿAದಲೇ ಜೀವಿಸಿ, ಸಾಧನೆ ಮಾಡಿದ್ದಾರೆ. ಶಾಂತಿ ಯುತವಾಗಿ ಸ್ವಾ ತಂತ್ರ‍್ಯದ ಸಂಕಲ್ಪ ಗಾಂಽÃಜಿ ಅವರದ್ದಾಗಿತ್ತು. ಇದಕ್ಕಾಗಿ ಸತ್ಯ ಹಾಗೂ ಅಹಿಂಸೆಯನ್ನು ತಮ್ಮ ಹೋರಾಟದ ಅಸöಗಳನ್ನಾಗಿ ಬಳಸಿದರು. ಶತಮಾನಗಳ ಕಾಲ ತುಳಿತಕ್ಕೆ ಒಳಗಾಗಿದ್ದ ಅಸ್ಪÈಶ್ಯರ ವಿಮೋಚನೆಗೆ ಅಂಬೇಡ್ಕರ್ ಸಂಕಲ್ಪ ಮಾಡಿದರು.
ಅಸ್ಪÈಶ್ಯತೆ ತೊಡೆದು ಹಾಕಲು, ಸಂವಿಧಾನದಡಿ ಕಾನೂನು ರಚಿಸಿ, ದಮನಿತರಿಗೆ ಶಾಸನಬದ್ಧ ಅವಕಾಶ ಹಾಗೂ ರಕ್ಷಣೆ ದೊರೆಯುವಂತೆ ಮಾಡಿದರು. ಸಂವಿಧಾನದ ಮೂಲ ಉದ್ದೇಶವೇ ಸಮಾನತೆ ತರುವುದಾಗಿದೆ. ವಿದ್ಯಾರ್ಥಿಗಳು ಸಹ ಸಮಾಜದಲ್ಲಿ ಬದಲಾವಣೆ ತರುವ ಸಂಕಲ್ಪದೊAದಿಗೆ ವಿದ್ಯಾಭ್ಯಾಸ ಮಾಡಬೇಕು ಎಂದರು.
ಜೀವನದ ಹಾದಿಯಲ್ಲಿ ಏನಾದರೂ ಸಾಽಸಲಿಕ್ಕೆ ಹಠ, ಛಲ, ನಿರಂತರ ಅಧ್ಯಯನಶೀಲತೆಗಳ ಅಗತ್ಯವಿದೆ. ಸ್ವಾಭಿಮಾನದೊಂದಿ ಗೆ ಮನೆಯವರು, ನೆರೆ ಹೊರೆಯವರು ಹಾಗೂ ವಿದ್ಯೆ ಸಂಸ್ಕಾರದ ಕಲಿಸಿದ ಗುರು ವÊಂದದವರನ್ನು ಪ್ರೀತಿ, ಸ್ನೇಹ, ಗೌರವ ದಿಂದ ಕಾಣುವುದನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಲಾ ಕಾಲೇಜಿನ ಪ್ರಾಚರ‍್ಯ ಡಾ.ಕರಿಯಪ್ಪ ಜೆ.ಮಾಳಿಗೆ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ವಿಶ್ವ ಪ್ರೀತಿ, ವಿಶ್ವ ಮೈತ್ರಿಯ ಪ್ರಜ್ಞೆಯನ್ನು ಅರಳಿಸುತ್ತವೆ. ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳು ಮುಖ್ಯ. ಇವೆ ರಡನ್ನೂ ಸಮನ್ವಯಗೊಳಿಸಿಕೊಂಡು ಸಾಗಿದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಬರಗಾಲ, ಬಡತನ ಹಿನ್ನೆಲೆ ಇರುವವರಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯುವ ಪ್ರಯತ್ನವೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ದೇಶವಾಗಿದೆ ಎಂದು ಹೇಳಿದರು.
ಕಾಲೇಜು ಅಧ್ಯಾಪಕರ ಸಂಘದ ಕರ‍್ಯದರ್ಶಿ ಡಾ.ಹನುಮಂತಪ್ಪ ಮಾತನಾಡಿ, ಶಿಕ್ಷಣದ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡೆ ಪಠ್ಯೇ ತರ ಚಟುವಟಿಕೆಗಳು ಅಭಿವÊದ್ಧಿ ವ್ಯಕ್ತಿಗಳನ್ನಾಗಿ ಮಾಡುತ್ತವೆ. ಉತ್ತಮ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೆ ಸಾಧಕರ ಪಟ್ಟಿಯಲ್ಲಿ ಸೇರುತ್ತಿರಿ ಎಂದರು.
ಪ್ರಾಧ್ಯಾಪಕಿ ಡಾ.ಆರ್.ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣಾಽಕಾರಿ ಡಾ.ಬಿ.ಸುರೇಶ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಬಿ.ಇ.ಜಗನ್ನಾಥ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಡಿನ್ ಸ್ಯಾಮುಯೆಲ್ ಡಬ್ಲ್ಯೂ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಡಿ.ಆರ್. ಪ್ರ ಸನ್ನಕುಮಾರ, ಯುವ ರೆಡ್‌ಕ್ರಾಸ್ ಸಂಚಾಲಕ ಡಾ.ಜಿ.ಎಂ.ಪ್ರದೀಪಕುಮಾರ, ರೋವರ್ಸ್ ಲೀಡರ್ ಪ್ರೊ.ಬಿ.ಮುರುಳೀಧರ, ರಾ ಷ್ಟಿçà ಯ ಯೋಜನಾಽಕಾರಿ ಡಾ.ವಿ.ಪ್ರಸಾದ್, ರೇಂಜರ್ಸ್ ಲೀಡರ್ ಡಾ.ಕೆ.ಲೀಲಾವತಿ ಇತರರು ಇದ್ದರು.