Ambedkar: ಹಿರಿಯೂರಿನಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
- ನಮ್ಮೆಲ್ಲರನ್ನು ರಕ್ಷಿಸುವ ಬಹು ದೊಡ್ಡ ಕಾನೂನು
- ಹಿರಿಯೂರಲ್ಲಿ ಸಂವಿಧಾನ ದಿನಾಚರಣೆ
- ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಬೇಕಿದೆ
ಹಿರಿಯೂರು: ದೇಶದ ಏಕತೆ-ಸಾಮಾಜಿಕ ನ್ಯಾಯಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮೆಲ್ಲರನ್ನು ರಕ್ಷಿಸುವ ಬಹು ದೊಡ್ಡ ಕಾನೂನು ಎಂದು ತಹಸೀಲ್ದಾರ್ ಎಂ. ಸಿದ್ಧೇಶ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿ, ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಹೊಸ ಶಕೆ ಆರಂಭವಾಯಿತು ಎಂದರು.
ಇಂದಿನ ಯುವಜನರಲ್ಲಿ ಸಂವಿಧಾನದ ಆಶಯ, ಅವರ ಸಾಧನೆ ಕುರಿತು ಅರಿವು ಮೂಡಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಬೇಕಿದೆ. ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ-ದೊಡ್ಡ ಸಂವಿಧಾನ ಎಂಬ ಹಿರಿಮೆ ಹೊಂದಿದೆ ಎಂದು ಬಣ್ಣಿಸಿದರು.
ನಗರಸಭೆ ಪೌರಾಯುಕ್ತ ಎ. ವಾಸೀಂ ಮಾತನಾಡಿ, ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವದ ಶ್ರೇಷ್ಠ ಮಾನವತವಾದಿಯಾಗಿದ್ದು, ಅವರ ಚಿಂತನೆ, ಆಶಯಗಳನ್ನು ಯುವ ಜನತೆ ಅರಿತು ಸಶಕ್ತ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪದವಿ ಕಾಲೇಜು, ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಂವಿಧಾನ ಕುರಿತ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
ಸಮಾಜ ಕಲ್ಯಾಣಾಧಿಕಾರಿ ದಿನೇಶ್, ಡಿವೈಎಸ್ಪಿ ಶಿವಕುಮಾರ್, ಪ್ರಾಚಾರ್ಯ ಡಾ. ಮಹೇಶ್, ಸಿಡಿಪಿಒ ರಾಘವೇಂದ್ರ, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ದಲಿತ ಮುಖಂಡರಾದ ದಯಾನಂದ್, ಜೀವೇಶ್, ಪ್ರದೀಪ್, ಬಸವರಾಜ್, ಜಿ.ಎಲ್. ಮೂರ್ತಿ, ಕಲ್ಲಹಟ್ಟಿ ಹರೀಶ್, ಜ್ಞಾನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಇತರರಿದ್ದರು.