ಹಿರಿಯೂರಿನ ಗುರು ಭನವದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯ ಶಿಕ್ಷಕರು.
- ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಸಲಹೆ
- ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಮುಖ್ಯ ಶಿಕ್ಷಕರ ಸಭೆ
ಹಿರಿಯೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜತೆ ಶಿಕ್ಷಕರು ಸಮಯ ಪಾಲನೆ ವಾಡಬೇಕು ಎಂದು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.
ನಗರದ ಗುರು ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಮುಖ್ಯ ಶಿಕ್ಷಕರ ಸಭೆಯಲ್ಲಿ ವಾತನಾಡಿದರು.
ಶುಕ್ರವಾರದಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಾಲೆಯ ಸ್ವಚ್ಛತೆ, ಅಡುಗೆ ಕೋಣೆ, ಆಹಾರ ದಾಸ್ತನು ಶುಚಿಗೊಳಿಸಬೇಕು. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂದರು.
ಇಲಾಖೆ ನಿಯಮ ಪಾಲಿಸಿ ಪಠ್ಯ ಬೋಧನೆ, ವಿದ್ಯಾರ್ಥಿಗಳ ಸುರಕ್ಷತೆ, ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ ವಿತರಣೆ, ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆಯಲು ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ವಾಡಿದರು.
ಬಿಆರ್‌ಸಿ ಶ್ರೀನಿವಾಸ್ ವಾತನಾಡಿ, ಈ ಶೈಕ್ಷಣಿಕ ವರ್ಷದಿಂದ ತಾಲೂಕಿನಲ್ಲಿ 39 ದ್ವಿಭಾಷಾ ವಾಧ್ಯಮ ಶಾಲೆ ಆರಂಭವಾಗುತ್ತಿದ್ದು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದರು.
ಇಸಿಒಗಳಾದ ಪುಟ್ಟಸ್ವಾಮಿ, ಜಾಫರ್, ಶಿವಾನಂದ್, ಬಿಆರ್‌ಪಿ ನಾಗರಾಜ್, ಸಿ. ಕರಿಯಪ್ಪ, ಸುನಂದಮ್ಮ, ಕೋಟಿಲಿಂಗಯ್ಯ, ದೇವರತ್ನಮ್ಮ, ನಾಗೇಶ್, ದಿವ್ಯ, ದಾದಾಪೀರ್, ನವೀನ್, ಹನುಮಂತರೆಡ್ಡಿ, ರಮೇಶ್ ನಾಯಕ್, ರಾಜಪ್ಪ, ಸುದರ್ಶನ್ ಇತರರು ಇದ್ದರು.