ಚಿತ್ರದುರ್ಗದ ಇಂಗಳದಾಳ್ ಬಳಿಯ ಡಿಸಿ ಕಚೇರಿ ಹೊಸ ಕಟ್ಟಡ ಚಿತ್ರ --- 
ಚಿತ್ರದುರ್ಗ

ಅಲೈಡ್ ಸೈನ್ಸಸ್ ಕೋರ್ಸ್ಗಳ ಆರಂಭಕ್ಕೆ ಮೀನಮೇಷ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕು
  • ಸ್ಥಳಾವಕಾಶದ ಕೊರತೆ ನೆಪ
  • ಮೆಡಿಕಲ್ ಸುಪರ್ದಿಗೆ ಬಾರದ ಡಿಸಿ ಕಚೇರಿ ಹೊಸ ಕಟ್ಟಡ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಮಂಜೂರಾಗಿದ್ದ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ಗ ಳ ಪ್ರವೇಶ ಪ್ರಕ್ರಿಯೆ ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೂ ಕರ‍್ಯಾರಂಭ ಮಾಡುವ ಕುರಿತು ಅನುಮಾನ ವ್ಯಕ್ತವಾಗಿದೆ.
ಈ ಕಾಲೇಜಿಗೆ ೨೦೨೫ ಆಗಸ್ಟ್ ೧೦ ರಂದು ೭ ಕೋರ್ಸ್ಗಳನ್ನು ಮಂಜೂರು ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದರೆ ಸ್ಥಳಾವಕಾಶದ ಕೊರತೆಯಿಂದ ಕಳೆದ ಶೈಕ್ಷಣಿಕ ವರ್ಷದಿಂದ ಕೋರ್ಸ್ಗಳ ಆರಂಭವಾಗಿರಲಿಲ್ಲ.
ಈಗ ಇನ್ನೊಂದು ತಿಂಗಳ ಒಳಗೆ ಪ್ರವೇಶ ಪ್ರಕ್ರಿಯೆ ಆರಂಭಿಸದಿದ್ದರೆ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಲಿದೆ. ಕೆಇಎ ಸೀಟು ಮ್ಯಾಟ್ರಿಕ್ಸ್ನಲ್ಲಿ ಈ ಕಾಲೇಜಿನಲ್ಲಿ ಪ್ರವೇಶ ಲಭ್ಯತೆ ಮಾಹಿತಿ ಪ್ರಕಟವಾಗದಿದ್ದರೆ ಏನೂ ಪ್ರಯೋಜನವಾಗದು.
ನಗರದ ಹೊರವಲಯ ಇಂಗಳದಾಳ್ ಬಳಿ ನಿರ್ಮಾಣವಾಗಿರುವ ಡಿಸಿ ಕಚೇರಿ ನೂತನ ಕಟ್ಟಡವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವ ಕುರಿತಂತೆ ಕಳೆದ ಆಗಸ್ಟ್ನಲ್ಲಿ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆಯಲ್ಲಿ ತೀರ್ಮಾನಿ ಸಲಾಗಿತ್ತು.
ನಂತರ ಬೆಂಗಳೂರಲ್ಲೂ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕಟ್ಟಡ ಹಸ್ತಾಂತರಕ್ಕೆ ಸಮ್ಮತಿಸಲಾಗಿತ್ತು. ತಾಂತ್ರಿಕ ಸಮಿತಿ ಸ್ಥಳ ಪರಿಶೀಲಿಸಿದ ಬಳಿಕ ಸರ್ಕಾರ ಕಟ್ಟಡ ಹಸ್ತಾಂತರಕ್ಕೆ ಆದೇಶಿಸಿತ್ತು. ಆದ್ದರಿಂದ ಇಲ್ಲಿ ಅಲೈಡ್ ಸೈನ್ಸ್ಸ ಕೋರ್ಸ್ಗಳನ್ನು ಆರಂಭಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿತ್ತು.
ಆದರೆ ಲೋಕೋಪಯೋಗಿ ಇಲಾಖೆಯಿಂದ ಇನ್ನೂ ಕಟ್ಟಡ ಹಸ್ತಾಂತರಿಸಿಲ್ಲ ಎಂಬ ಕಾರಣಕ್ಕೆ ಕಂದಾಯ ಇಲಾಖೆ ಕಾಲೇಜಿಗೆ ಕಟ್ಟಡ ಕೊಟ್ಟಿಲ್ಲ ಎನ್ನಲಾಗಿದೆ. ೨೧೦ ಸೀಟು ಸಾಮರ್ಥ್ಯದ ಅಲೈಡ್ ಸೈನ್ಸಸ್‌ನ ೭ ಕೋರ್ಸ್ಗಳು, ೪೦ ಬ್ಯಾಚುಲರ್ ಆ-ï ಫಿಸಿಯೋಥೆರಪಿ ಕೋರ್ಸ್ನೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಇರುವಂಥ ನೂರು ಸೀಟು ಸಾಮರ್ಥ್ಯದ ಬಿಎಸ್ಸಿ ನರ್ಸಿಂಗ್ ಕೋರ್ಸ್ನ್ನು ಹೊಸ ಕಟ್ಟಡದಲ್ಲಿ ಆರಂಭಿಸಲು ಕಾಲೇಜು ಸಿದ್ಧವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲಿದ್ದ ಬಿಎಸ್ಸಿ ನರ್ಸಿಂಗ್ ಕೋರ್ಸ್ ೬೦ ಸೀಟುಗಳ ಸಂಖ್ಯೆಯನ್ನು ಹಾಲಿ ೧೦೦ಕ್ಕೆ ಹೆಚ್ಚಿಸಲಾಗಿದ್ದು, ೨೦೦ಕ್ಕೆ ಹೆಚ್ಚಿಸುವ ಉದ್ದೇಶವೂ ಇದೆ. ಜಿಲ್ಲಾಡಳಿತ ತಕ್ಷಣ ಹೊಸ ಕಟ್ಟಡವನ್ನು ಬಿಟ್ಟುಕೊಟ್ಟಿದ್ದೇ ಆದರೆ ೨೨೦ ಸೀಟುಗಳ ಅಲೈಡ್ ಸೈನ್ಸ್ಸ ಕೋರ್ಸ್ಗಳಿಗೆ, ೪೦ ಬಿಪಿಟಿ ಹಾಗೂ ೧೦೦ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಸೆಕೆಂಡ್ ಪಿಯುಸಿ ಸೈನ್ಸ್ ಉತ್ತೀರ್ಣರಾಗಿರುವ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಶೇ.೫೦ ಪ್ರಮಾಣದಲ್ಲಾದರೂ ೪ ವರ್ಷ ಅವಽಯ ಅಲೈಡ್ ಸೈನ್ಸಸ್ ಕೋರ್ಸ್ಗಳಿಗೆ ಪ್ರವೇಶಾವಕಾಶ ಸಿಗಲಿದೆ.
ಆಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ಗಳು
ಬಿಎಸ್ಸಿ ಅನಸ್ತೇಶಿಯಾ ಆ್ಯಂಡ್ ಆಪರೇಷನ್ ಥಿಯೇಟರ್ ಟೆಕ್ನಾಲಜಿಗೆ ೩೦ ಸೀಟು, ಬಿಎಸ್ಸಿ ಎಮರ್ಜೆನ್ಸಿ ಆ್ಯಂಡ್ ಟ್ರಾಮಾಕೇರ್-೩೦, ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್-೩೦, ಬಿಎಸ್ಸಿ ಮೆಡಿಕಲ್ ಇಮೇಜಿಂಗ್-೪೦, ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ-೪೦, ಬಿಎಸ್ಸಿ ಆಪ್ಟೋಮೆಟ್ರಿ-೩೦ ಹಾಗೂ ಬಿಎಸ್ಸಿ ರೆನಾಲ್ ಡಯಾಲಿಸಿಸ್ ಕೋರ್ಸ್ಗೆ ೨೦ ಸೀಟುಗಳನ್ನು ನಿಗದಿಪಡಿಸಲಾಗಿದೆ.
ಎಂಡಿ, ಎಂಎಸ್
೨೦೨೬-೨೭ನೇ ಶೈಕ್ಷಣಿಕ ಸಾಲಿನಿಂದ ಈ ಕಾಲೇಜಿನಲ್ಲಿ ಸ್ನಾತಕೋತ್ತರ ಎಂಡಿ, ಎಂಎಸ್ ಕೋರ್ಸ್ಗಳ ಆರಂಭಕ್ಕೆ ಸಂಬAಽಸಿ ದAತೆ ತಜ್ಞರ ಸಮಿತಿ ಪರಿಶೀಲಿಸಿದೆ. ಎಂಡಿ ಅನಸ್ತೇಶಿಯಾ, ಜನರಲ್ ಮೆಡಿಸಿನ್, ಪಿಡಿಯಾಟ್ರಿಕ್ಸ್, ಕಮ್ಯೂನಿಟಿ ಮೆಡಿಸಿನ್ ಹಾ ಗೂ ಎಂಎಸ್ ಅರ್ಥೋ, ಒಬಿಜಿ, ಫೋರೆನ್ಸಿಕ್ ಮೆಡಿಸಿನ್, ಜನರಲ್ ಸರ್ಜರಿ ಕೋರ್ಸ್ ಆರಂಭಕ್ಕೆ ಎನ್‌ಎಂಸಿಯ ಅನುಮತಿಗೆ ಕಾಯಲಾಗುತ್ತಿದೆ. ಪ್ರಸ್ತುತ ಕಾಲೇಜಿನಲ್ಲಿ ೪೫೦ ಎಂಬಿಎAಸ್ ವಿದ್ಯಾರ್ಥಿಗಳಿದ್ದಾರೆ.
"

ಸ್ಥಳಾವಕಾಶ ದೊರೆತರೆ ಇದೇ ಶೈಕ್ಷಣಿಕ ವರ್ಷದಿಂದ ಕಾಲೇಜಿನಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಆರಂಭಿಸಲಾಗುವುದು. ಜಿಲ್ಲಾಽಕಾರಿ ಕಚೇರಿ ನೂತನ ಕಟ್ಟಡವಿನ್ನೂ ಕಾಲೇಜಿಗೆ ಹಸ್ತಾಂತರವಾಗಿಲ್ಲ. ಕಟ್ಟಡ ದೊರೆತರೆ ಇಲ್ಲಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ.

— | ಡಾ.ಬಿ.ವೈ. ಯುವರಾಜ್, ನಿರ್ದೇಶಕ, ಡೀನ್, ಸರ್ಕಾರಿ ವೈದ್ಯಕೀಯ ಕಾಲೇಜು, ಚಿತ್ರದುರ್ಗ.