ಶಿರಸಿಯಿಂದ ಚಿತ್ರದುರ್ಗಕ್ಕೆ ಗುರುವಾರ ಆಗಮಿಸಿದ ಎಸ್‌ಐಆರ್ ವಿರೋಽ ಜನಜಾಗೃತಿ ಜಾಥಾವನ್ನುದ್ದೇಶಿಸಿ ವಕೀಲ ಅನಿಸ್ ಪಾಷ ಮಾತನಾಡಿದರು. ಜೆ. ಯಾದವರೆಡ್ಡಿ, ಹೊರಕೇರಪ್ಪ, ಸುರೇಶ್‌ನಾಯ್ಕ, ರಾಘವೇಂದ್ರ, ಶಿವಕುಮಾರ್, ಪುರುಷೋತ್ತಮ ತೋರಣಗಲ್, ಸಾಲೊಮನ್ ರಾಜ್‌ಕುಮಾರ್, ಅಶೋಕ, ಪವಿತ್ರಾ ಇತರರು ಇದ್ದರು. 
ಚಿತ್ರದುರ್ಗ

ಬಿಜೆಪಿಯಿಂದ ಅಽಕಾರ ದುರುಪಯೋಗ ಆರೋಪ

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಮೂಲಕ ಅಽಕಾರದಲ್ಲಿ ಮುಂದುವರಿಯುವ ತಂತ್ರ
  • ವಕೀಲ ಅನಿಸ್‌ಪಾಷ ಆರೋಪ
  • ಜೂ.೨೦ ರಂದು ಸಮಾವೇಶ
ಚಿತ್ರದುರ್ಗ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಸರ್ಕಾರ ಇನ್ನೂ ೫೦ ವರ್ಷಗಳ ಕಾಲ ಅಽಕಾ ರದಲ್ಲಿ ಇರಲು ತಂತ್ರಗಾರಿಕೆ ನಡೆಸುತ್ತಿದೆ ಎಂದು ವಕೀಲ ದಾವಣಗೆರೆ ಅನಿಲ್‌ಪಾಷ ಆರೋಪಿಸಿದರು.
ಶಿರಸಿಯಿಂದ ಚಿತ್ರದುರ್ಗಕ್ಕೆ ಗುರುವಾರ ಆಗಮಿಸಿದ್ದ ಎಸ್‌ಐಆರ್ ವಿರೋಽ ಜನ ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದ ಅವ ರು, ಕೇಂದ್ರ ಚುನಾವಣಾ ಆಯೋಗವನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿ ಅಽಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಎಸ್‌ಐಆರ್ ಮೂಲಕ ಲಕ್ಷಾಂತರ ಮತದಾರರ ಹೆಸರು ಮತಪಟ್ಟಿಯಿಂದ ತೆಗೆದು ಹಾಕ ಲಾಗಿದೆ. ೪೦ ಇವಿಎಂಗಳನ್ನು ನಾಶಪಡಿಸಲಾಗಿದೆ ಎಂದು ದೂರಿದ ಅವರು, ನಿಜಕ್ಕೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ. ನೈಜ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮತಪಟ್ಟಿಯಲ್ಲಿ ಎರಡು ಕಡೆ ಇರುವವರ, ಮÊತಪಟ್ಟವರ ಹೆಸರು ಡಿಲಿಟ್ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ.ದುರುದ್ದೇಶ ದಿಂದ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರು, ಸಂ ಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ. ಯಾದವರೆಡ್ಡಿ ಮಾತನಾಡಿ, ನುಸುಳುಕೋರರನ್ನು ಪತ್ತೆ ಹಚ್ಚುವ ನೆಪದಲ್ಲಿ ಅರ್ಹ ಮ ತದಾರರಿಗೆ ಅನ್ಯಾಯ ಮಾಡಬಾರದು. ಸಾರ್ವಜನಿಕರನ್ನು ಎಚ್ಚರಿಸುವ ಉದ್ದೇಶದಿಂದ ಹೊರಟಿರುವ ಜಾಥಾ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜೂ.೨೦ ರಂದು ಸಮಾವೇಶ ನಡೆಸಲಿದೆ ಎಂದು ಹೇಳಿದರು.
ರೈತ ಮುಖಂಡ ಹೊರಕೇರಪ್ಪ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದರು. ಸುರೇಶ್‌ನಾಯ್ಕ, ರಾಘವೇಂದ್ರ, ಶಿವಕುಮಾರ್, ಪುರುಷೋತ್ತಮ ತೋರಣಗಲ್, ಸಾಲೊಮನ್ ರಾಜ್‌ಕುಮಾರ್, ಅಶೋಕ, ಪವಿತ್ರಾ, ಬೈಲಮ್ಮ, ಪ್ರಭಾವತಿ ಮತ್ತಿತರರು ಇದ್ದರು.