ಅಂತಾರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಬಾಪೂಜಿ ಪಬ್ಲಿಕ್ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಭಾನುವಾರ ಸಾಮೂಹಿಕ ಯೋಗಭ್ಯಾಸ ಮಾಡಿದರು. 
ಚಿತ್ರದುರ್ಗ

ಸರ್ವತೋಮುಖ ಬೆಳವಣಿಗೆ ಯೋಗಭ್ಯಾಸ ಸಹಕಾರಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್
  • ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ನಿತ್ಯ ಯೋಗಭ್ಯಾಸ
  • ೧೨ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ
ಚಿತ್ರದುರ್ಗ: ವಯಸ್ಸಿನ ಭೇದವಿಲ್ಲದೆ ಎಲ್ಲರ ಸರ್ವತೋಮುಖ ಬೆಳವಣಿಗೆಗೆ ಯೋಗಭ್ಯಾಸ ಸಹಕಾರಿಯಾಗಿದೆ ಎಂದು ನಗರದ ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಹೇಳಿದರು.
ನಗರದ ಬಾಪೂಜಿ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ೧೨ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ನಿತ್ಯ ಯೋಗಭ್ಯಾಸ ಅಗತ್ಯ. ಅದರಲ್ಲೂ ಶಾಲಾ ದಿನಗಳಲ್ಲಿ ವಿ ದ್ಯಾರ್ಥಿಗಳು ದೈನಂದಿನ ಆಚರಣೆಯನ್ನಾಗಿ ರೂಢಿಸಿಕೊಳ್ಳಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಜಯಶೀಲ್‌ರೆಡ್ಡಿ ಮಾತನಾಡಿ, ಪ್ರಾತ್ಯಕ್ಷಿಕೆ ಮೂಲಕ ಯೋಗದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿಸಿದರು. ಸಂಸ್ಥೆ ನಿರ್ದೇಶಕ ಕೆ.ಎಂ. ಚೇತನ್ ಮಾತನಾಡಿ, ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವಾಗದೆ ವರ್ಷವಡೀ ನಿರಂತರವಾಗಿರಬೇಕು ಎಂದರು.
ಶಿಕ್ಷಣ ಸಂಯೋಜಕ ಮೂರ್ತಾಚಾರ್, ಸಿಆರ್‌ಪಿ ಶಿವರುದ್ರಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಂ. ಮಲ್ಲಿಕಾರ್ಜುನ್, ಯೋಗಪಟು ಡಿ.ಜೆ. ಸುನೀಲ್‌ಕುಮಾರ್, ಜಗದೀಶ್ ಇತರರು ಇದ್ದರು.
ಮಹಿಳೆಯರಿಗೆ ಯೋಗಾಸನ ಸ್ಪರ್ಧೆ
ಚಿತ್ರದುರ್ಗದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿAದ ೧೨ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ನಗರದ ಶ್ರೀ ವೆಂ ಕಟರಮಣ ದೇವಾಲಯ ಆವರಣದಲ್ಲಿ ಭಾನುವಾರ ಮಹಿಳೆಯರಿಗೆ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿತ್ತು.
೧೮ರಿಂದ ೪೫ ವರ್ಷದೊಳಗಿನ ವಿಭಾಗದಲ್ಲಿ ಅನಿತಾ(ಪ್ರ), ಅರುಣಾ(ದ್ವಿ), ರಮಾ(ತೃ), ೪೫ ರಿಂದ ೭೦ ವರ್ಷದೊಳಗಿನ ವಿಭಾಗದಲ್ಲಿ ವನಜಾಕ್ಷಮ್ಮ(ಪ್ರ), ತಿಪ್ಪಮ್ಮ(ದ್ವಿ) ಹಾಗೂ ಸುಧಾ ತೃತೀಯ ಬಹುಮಾನ ಪಡೆದರು.
ತೀರ್ಪುಗಾರ, ಯೋಗಪಟು ತಿಪ್ಪೇಸ್ವಾಮಿ ಭರಮಸಾಗರ ಅವರು ಮಾತನಾಡಿ ಈ ಸ್ಪರ್ಧೆ ಗೆಲುವಿಗೆ ಸೀಮಿತವಾಗಿರದೆ, ವ್ಯಕ್ತಿತ್ವ ವಿಕಸನ ಮತ್ತು ಯೋಗದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸAಸ್ಥೆ ಅಧ್ಯಕ್ಷ ರವಿ ಕೆ. ಅಂಬೇಕರ್ ಮಾತನಾಡಿ, ಪ್ರತಿ ವರ್ಷ ವಿಶ್ವ ಯೋಗ ದಿನಾಚರಣÉ ಸಂದರ್ಭ ಯೋಗ ಪ್ರಚಾರಕ್ಕಾಗಿ ನಮ್ಮ ಸಂಸ್ಥೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.