ಚಿತ್ರದುರ್ಗ ಶನಿವಾರ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಽಕಾರಿ ಎಸ್.ರಮ್ಯಾ ಚಾಲನೆ ನೀಡಿದರು. ಬೆಂಗಳೂರು ಸೇನಾ ನೇಮಕಾತಿ ಕಚೇರಿಯ ಬ್ರಿಗೇಡಿಯರ್ ಎಸ್.ಕೆ. ಸಿಂಗ್, ಕರ್ನಲ್ ಪುಷ್ಪರಾಜ್ ಮತ್ತಿತರ ಅಽಕಾರಿಗಳಿದ್ದರು. 
ಚಿತ್ರದುರ್ಗ

ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

ನ.೩ರವರೆಗೆ ನಡೆಯಲಿರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಗ್ನಿವೀರ್ ಸೇನಾ ನೇಮಕಾತಿಯ ರ‍್ಯಾಲಿ ಆರಂಭವಾಯಿತು. ಈಗಾಗಲೇ ಆನ್‌ಲೈನ್‌ನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಇ) ಅರ್ಹತೆ ಪಡೆದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ ೧೪ ಜಿಲ್ಲೆಗಳಿಂದ ೯೫೭ ಅಭ್ಯರ್ಥಿಗಳು ನ.೩ರ ವರೆಗೆ ನಡೆಯಲಿರುವ ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಸೇನಾ ನೇಮಕಾತಿ ಕಚೇರಿಯ ಬ್ರಿಗೇಡಿಯರ್ ಎಸ್.ಕೆ. ಸಿಂಗ್, ಕರ್ನಲ್ ಪುಷ್ಪರಾಜ್, ಜಿಲ್ಲಾಽಕಾರಿ ಎಸ್. ರಮ್ಯಾ, ಎಸ್‌ಪಿ ಕುಶಲ್‌ಚೌಕ್ಸೆ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಡಾ.ಕೆ.ಜೆ. ಕಾಂತರಾಜ್ ಹಾಗೂ ದೈಹಿಕ ಕ್ಷಮತೆ ಪರೀಕ್ಷೆಗಳ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.

ನೇಮಕಾತಿ ರ‍್ಯಾಲಿಗೆ ಸಂಬAಽಸಿದAತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಗತ್ಯ ಸಿದ್ಧತೆಗಳಾಗಿದ್ದು, ಸೇನಾ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸಿಸಿ ಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು. ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸೇನೆ ಹಲವು ಅಽಕಾರಿಗಳು ಬಾಡಿ ಕ್ಯಾಮರಾದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಅಭ್ಯರ್ಥಿಗಳ ಆನ್‌ಲೈನ್ ಪರೀಕ್ಷೆ -Àಲಿತಾಂಶ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳಿಗೆ ಊಟೋಪಚಾರ ಸಹಿತ ನಾನಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.

ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಅಗ್ನಿವೀರ್ ಸಾಮಾನ್ಯ ಕರ್ತವ್ಯ, ತಾಂತ್ರಿಕ ಹಾಗೂ ಟ್ರೇಡ್ಸ್ ವರ್ಗಗಳ ಹುದ್ದೆಗಳ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳ ದೈಹಿಕ ಕ್ಷಮತೆ, ವೈದ್ಯಕೀಯ ಪರೀಕ್ಷೆ ಹಾಗೂ ವ್ಯಾಸಂಗ ಸೇರಿದಂತೆ ಇತರೆ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಮುಂಜಾನೆ ೫.೩೦ರಿಂದಲೇ ಅಭ್ಯರ್ಥಿಗಳಿಗೆ ದೈಹಿಕ, ವೈದ್ಯಕೀಯ ಪರೀಕ್ಷೆಗಳು ನಡೆದಿವೆ. ೧೨೦ಕ್ಕೂ ಹೆಚ್ಚು ಸೇನಾ ಅಽಕಾರಿಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಽಸಲಾಗಿದೆ.