ಚಿತ್ರದುರ್ಗ ತಾಲೂಕು ತಮಟಕಲ್ಲು ಗ್ರಾಮದಲ್ಲಿ ಶುಕ್ರವಾರ ವಿಶ್ವ ಶೌಚಗೃಹ ದಿನಾಚರಣೆ ಪ್ರಯುಕ್ತ `ನಮ್ಮ ಶೌಚಗೃಹ,ನಮ್ಮ ಭವಿಷ್ಯ'ಅಭಿಯಾನಕ್ಕೆ ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ ಚಾಲನೆ ನೀಡಿದರು. ರುದ್ರಮ್ಮ, ಸಣ್ಣ ಹನುಮಂತಪ್ಪ, ಸುರೇಶ್, ಸಾಕಮ್ಮ, ಆನಂದ್, ಮಾರುತಿ, ಮಂಜುನಾಥ್, ಜಯಸಿಂಹ, ಸುಮಾ, ಬಿ.ಸಿ. ನಾಗರಾಜ್, ಪ್ರಮೀಳಾ, ವಿನಯ್, ಶಶಿಧರ್, ಎಚ್. ಯರ‍್ರಿಸ್ವಾಮಿ ಇತರರು ಇದ್ದರು.
- `ನಮ್ಮ ಶೌಚಗೃಹ, ನಮ್ಮ ಭವಿಷ್ಯ'ಅಭಿಯಾನ
- ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ ಚಾಲನೆ
- ವಿಶ್ವ ಶೌಚಗೃಹ ದಿನಾಚರಣೆ
ಚಿತ್ರದುರ್ಗ: ಎಲ್ಲರೂ ಶೌಚಗೃಹ ಬಳಸಿ, ನೈರ್ಮಲ್ಯಕ್ಕೆ ಆದ್ಯತೆ ನೀಡ ಬೇಕು ಎಂದು ಜಿಪಂ ಯೋಜನಾ ನಿರ್ದೇಶಕಿ ಜಯ ಲಕ್ಷಿ÷್ಮÃ ಹೇಳಿದರು. ಚಿತ್ರದುರ್ಗ ತಾಲೂಕು ಗುಡ್ಡದರಂಗವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ತಮಟಕಲ್ಲು ಗ್ರಾಮದಲ್ಲಿ ಶುಕ್ರವಾರ ವಿಶ್ವ ಶೌಚಗೃಹ ದಿನಾಚರಣೆ ಪ್ರಯುಕ್ತ `ನಮ್ಮ ಶೌಚಗೃಹ,ನಮ್ಮ ಭವಿಷ್ಯ'ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುರಕ್ಷಿತ ನೈರ್ಮಲ್ಯಕ್ಕಾಗಿ ನ.೧೯ರಂದು ವಿಶ್ವ ಶೌಚಗೃಹ ದಿನ ಆಚರಿಸಲಾಗುತ್ತಿದೆ. ಅಂದು ಆರಂಭವಾಗಿರುವ ಅಭಿಯಾನ ಡಿ. ೧೦ರವರೆಗೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಆರೋಗ್ಯ, ಘನತೆ ಮತ್ತು ಸಾಮಾಜಿಕ ಸಮೃದ್ಧಿಗಾಗಿ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಸಮುದಾಯ ಮತ್ತು ವೈಯಕ್ತಿಕ ಶೌಚಗೃಹ ದುರಸ್ತಿ, ನಿರ್ವಹಣೆಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಶಾಲೆಗಳಲ್ಲಿ ವೈಯಕ್ತಿಕ, ಸಮುದಾಯ ನೈರ್ಮಲ್ಯ ಮತ್ತು ಸ್ವಚ್ಛತೆ ಪ್ರಾಮುಖ್ಯತೆ ಕುರಿತು ಜಾಗÊತಿ, ಮಲ ತ್ಯಾಜ್ಯದ ಸುರಕ್ಷಿತ ನಿರ್ವಹಣÉ ಕುರಿತು ಅರಿವು ಮೂಡಿಸಲಾಗುವುದು. ಗ್ರಾಪಂ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವಚ್ಛ,
ಸುಂದರ ವೈಯಕ್ತಿಕ ಶೌಚಗೃಹ ಸ್ಪರ್ಧೆ ಆಯೋಜಿಸಲಾಗುವುದು ಎಂದರು.
ತಾಪಂ ಸಹಾಯಕ ನಿರ್ದೇಶಕ ಜಯಸಿಂಹ ಸ್ವಚ್ಛತಾ ಪ್ರತಿಜ್ಞಾವಿಽ ಬೋಽಸಿದರು. ಜಿಪಂ ಸಹಾಯಕ ಯೋಜನಾಽಕಾರಿ ಸುಮಾ, ಜಿಲ್ಲಾ ಸಮಾಲೋಚಕರಾದ ಬಿ.ಸಿ.ನಾಗರಾಜ್,ಪ್ರಮೀಳಾ, ವಿನಯ್, ಶಶಿಧರ್, ತಾಪಂ ಸಹಾಯಕ ನಿರ್ದೇಶಕ ಎಚ್.ಯರ್ರಿ ಸ್ವಾ ಮಿ,ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಸದಸ್ಯರಾದ ಸಣ್ಣ ಹನುಮಂತಪ್ಪ, ಸುರೇಶ್, ಸಾಕಮ್ಮ, ಪಿಡಿಒ ಆನಂದ್, ಮುಖಂಡರಾದ ಮಾರುತಿ, ಮಂಜುನಾಥ್ ಇತರರು ಇದ್ದರು.