ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣÉ, ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಎನ್. ದೀಪಿಕಾ, ಡಾ.ಎಲ್. ಈಶ್ವರಪ್ಪ, ಜಿ.ಎಸ್. ನಾಗರಾಜ್, ಎಂ.ಎಸ್. ಪರಮೇಶ್ವರ, ಡಾ.ಸಿ.ಟಿ. ಜಯಣ್ಣ ಇತರರು ಇದ್ದರು.
- ಸ್ತನ ಕ್ಯಾನ್ಸರ್
- ಗರ್ಭಕಂಠ ಕ್ಯಾನ್ಸರ್
- ಉಚಿತ ಅರೋಗ್ಯ ತಪಾಸಣೆ,
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಗರ್ಭಕಂಠ ಕ್ಯಾನ್ಸರ್ ವ್ಯಾಪಾಕವಾಗಿ ಹರಡುತ್ತಿದೆ ಎಂದು ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಔಷಧ ವಿಭಾಗದ ಡಾ.ಎನ್. ದೀಪಿಕಾ ಆತಂಕ ವ್ಯಕ್ತಪಡಿಸಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣೆ, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಸಿಯಾಗುವ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಸೂಕ್ತ ಜಾಗೃತಿ ಮೂಡಿಸಬೇಕಿದೆ.
ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು, ಸ್ವಯಂ ಪರೀಕ್ಷೆ ಮೂಲಕ ಪತ್ತೆ ಹಚ್ಚಬಹುದು ಎಂಬು ದರ ಕುರಿತು ವಿವರಿಸಿದರು.
ಅಧ್ಯP್ಷÀತೆ ವಹಿಸಿದ್ದ ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ಮಾತನಾಡಿ, ಈ ಕಾಯಿಲೆಗಳ ಕುರಿತಂತೆ ವಿದ್ಯಾರ್ಥಿಗಳಲ್ಲೂ ಅರಿವು ಮೂಡಿಸಬೇಕಿದೆ ಎಂದರು.
ಜಿ.ಎಸ್.ನಾಗರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.ಎಂ.ಎಸ್. ಪರಮೇಶ್ವರ, ಡಾ.ಸಿ.ಟಿ. ಜಯಣ್ಣ, ಕೆ.ಎಚ್. ಶಿವಕುಮಾರ್, ಡಾ. ಸುಧಾರಾಣಿ, ಡಾ.ಬಿ.ವೈ. ಶ್ವೇತಾ, ಡಾ.ಕೆ. ರಮೇಶ ,ಮಿಸ್ಬಾಖಾನುಂ, ಕೆ. ವಿಶ್ವನಾಥ್, ಡಿ. ಸುಜಾತ, ಎಂ. ಸೌಮ್ಯ ಜಿ. ಕುಮಾರ್ ಇತರರು ಇದ್ದರು.
ಕೆ.ಅನುಷಾ ಸಂಗಡಿಗರು ಪ್ರಾರ್ಥಿಸಿದರು. ಬಿಂಧುಶ್ರೀ ಸ್ವಾಗತಿಸಿ, ಸೌಂದರ್ಯ ವಂದಿಸಿದರು. ಬೇಬಿ ನಿರೂಪಿಸಿದರು. ಎಸ್.ಬಿ. ತೇಜಸ್ವಿನಿ ವ್ಯಕ್ತಿಪರಿಚಯ ಮಾಡಿಕೊಟ್ಟರು.