ಚಿತ್ರದುರ್ಗದಲ್ಲಿ ಬುಧವಾರ ನೀಟ್ ಮರು ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಎಂ. ಬಾಬು, ಎಂ.ಆರ್.ಎಸ್. ನಾಗಭೂಷಣ್, ರೇಷ್ಮಾಹಾನಗಲ್, ಅರುಣ್ ನಾಗೇಗೌಡ, ಡಾ.ಎನ್. ಕಾಶಿ, ಎಚ್. ದಿವಾಕರ್ ಇತರರು ಇದ್ದರು. 
ಚಿತ್ರದುರ್ಗ

೨೧ರಂದು ನೀಟ್ ಮರು ಪರೀಕ್ಷೆಗೆ ಸೂಕ್ತ ಭದ್ರತೆ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ಪೊಲೀಸರಿಗೆ ಜಿಲ್ಲಾಽಕಾರಿ ಟಿ.ವೆಂಕಟೇಶ್ ಸೂಚನೆ|
  • ಆರು ಕೇಂದ್ರಗಳಲ್ಲಿ ೩೦೮೬ ವಿದ್ಯಾರ್ಥಿಗಳು ಹಾಜರಿ
  • ನೀಟ್ ಮರು ಪರೀಕ್ಷೆ ಪೂರ್ವಸಿದ್ಧತಾ ಸಭೆ
ಚಿತ್ರದುರ್ಗ: ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಜೂನ್೨೧ರಂದು ರಾಷ್ಟೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಮರು ಪರೀಕ್ಷೆ ನಡೆಯಲಿದ್ದು,ಪರೀಕ್ಷಾ ಕೇಂದ್ರಗಳಗೆ ಸೂಕ್ತ ಭದ್ರತೆ ಕಲ್ಪಿಸಲು ಜಿಲ್ಲಾಽಕಾರಿ ಟಿ. ವೆಂಕಟೇಶ್ ಪೊಲೀಸ್ ಅಽಕಾರಿಗಳಿಗೆ ಸೂಚಿಸಿ ದರು.
ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ನೀಟ್ ಮರು ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷೆ ಕಾರ್ಯಕ್ಕೆ ನಿಯೋಜಿಸಿದ ಅಽಕಾರಿ, ಸಿಬ್ಬಂದಿ, ಸಮನ್ವಯತೆಯೊಂದಿಗೆ ಪರೀಕ್ಷೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
ಅಂದು ಮಧ್ಯಾಹ್ನ ೨ರಿಂದ ಸಂಜೆ ೫.೧೫ ರವರೆಗೆ ಪರೀಕ್ಷೆ ನಡೆಯಲಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚು ವರಿ ೧೫ ನಿಮಿಷ ಕಾಲಾವಕಾಶ ನೀಡಲಾಗಿದೆ. ಅಂಗವಿಕಲರ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಒಂದು ಗಂಟೆ ಹೆಚ್ಚುವರಿ ಸಮವಿರಲಿದೆ. ಈ ಪರೀಕ್ಷೆ ದೇಶದಾದ್ಯಂತ ತೀವ್ರ ಕುತೂಹಲ ಮತ್ತು ಸೂಕ್ಷ÷್ಮತೆ ಪಡೆದುಕೊಂಡಿದೆ.
ಯಾವುದೇ ರೀತಿಯ ಗೊಂದಲವಾಗದAತೆ ನಿರಾಳವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಾತಾವರಣವಿರಬೇಕು. ಸಣ್ಣ ಲೋಪಕ್ಕೂ ಅವಕಾಶ ನೀಡದಂತೆ ಅಽಕಾರಿಗಳು ಹೆಚ್ಚು ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು. ಪರೀಕ್ಷಾ ದಿನದಂದು ನಿಷೇಧಾಜ್ಞೆ ಜಾರಿ ಗೊಳಿಸಲಾಗುವುದು.
ಆರೋಗ್ಯ ಇಲಾಖೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿ ಮೂಲ ಸೌಕರ್ಯಗಳು ವ್ಯವಸ್ಥಿತವಾಗಿರಬೇಕು ಎಂದು ಸೂಚಿಸಿದರು.
೬ ಪರೀಕ್ಷಾ ಕೇಂದ್ರ, ೩೦೮೬ ವಿದ್ಯಾರ್ಥಿಗಳು: ನೋಡಲ್ ಅಽಕಾರಿ ಎಸ್.ನಾಗಭೂಷಣ್ ಮಾತನಾಡಿ, ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು, ಚಳ್ಳಕೆರೆ ಎಚ್‌ಪಿಪಿಸಿ ಡಿಗ್ರಿ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಮರು ಪರೀಕ್ಷೆ ನಡೆಯಲಿದೆ.
ಒಟ್ಟು ೬ ಪರೀಕ್ಷಾ ಕೇಂದ್ರಗಳಲ್ಲಿ ೩೦೮೬ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಷ್ಟೀಯ ಪರೀಕ್ಷಾ ಸಂಸ್ಥೆಯಿAದ ಮೆಟಲ್ ಡಿಟೆ ಕ್ಟರ್ ಅಳವಡಿಸಲಾಗುತ್ತದೆ. ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕ ತಪಾಸಣೆ ಇರುತ್ತದೆ. ಬಯೋಮೆಟ್ರಿಕ್ ದÊಢೀಕರಣ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶವಿರುತ್ತದೆ ಎಂದರು.
ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳು ನಗರದ ರಾಷ್ಟಿçÃಕೃ ಬ್ಯಾಂಕ್‌ಗೆ ಬರಲಿವೆ. ಪೊಲೀಸ್ ಬೆಂಗಾವಲಿನಲ್ಲಿ ಪತ್ರಿಕೆಗ ಳನ್ನು ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಪರೀಕ್ಷೆ ನಂತರ ಒಎಂಆರ್ ಶೀಟ್‌ಗಳನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವು ದು. ಜಿಲ್ಲಾಡಳಿತ ದಿಂದ ವೀಕ್ಷಕರ ನೇಮಕವಾಗಿದೆ. ರಾಷ್ಟಿçÃಯ ಪರೀಕ್ಷಾ ಸಂಸ್ಥೆಯಿAದಲೂ ಪ್ರತ್ಯೇಕ ವೀಕ್ಷಕರು ಆಗಮಿಸಲಿ ದ್ದಾರೆ ಎಂದರು.
ಜಿಪA ಉಪ ಕಾರ್ಯದರ್ಶಿ ಎಂ.ಬಾಬು, ಡಿಡಿಪಿಐ ಎಂ.ಆರ್. ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಡಿವೈಎಸ್‌ಪಿ ಅರುಣ್ ನಾಗೇಗೌಡ, ಡಿಎಚ್‌ಒ ಡಾ.ಎನ್.ಕಾಶಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ಎಚ್.ದಿವಾಕರ್ ಮತ್ತಿತರ ಅಽಕಾರಿಗಳು ಇದ್ದರು.