ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಡಿ. ಸುಧಾಕರ್ ಮಾತನಾಡಿದರು. ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಕೆ.ಎಸ್. ನವೀನ್, ಡಿ.ಟಿ. ಶ್ರೀನಿವಾಸ್, ಶಿವಣ್ಣ, ಅಮ್ಲನ್ ಆದಿತ್ಯ ಬಿಸ್ವಾಸ್ ಇತರರಿದ್ದರು.
- ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಡಿ.ಸುಧಾಕರ್ ಸೂಚನೆ
- ತಪ್ಪಿತಸ್ಥರ ವಿರುದ್ಧ ಚಾರ್ಜ್ಶೀಟ್‌ಗೆ ಸಲಹೆ
- ವೈದ್ಯಕೀಯ ಸಾಮಗ್ರಿ
ಚಿತ್ರದುರ್ಗ: ಕೋವಿಡ್ ಅವಽಯಲ್ಲಿ ಆರೋಗ್ಯ ಇಲಾಖೆಯಲ್ಲಿ ಜಿಲ್ಲೆಯಲ್ಲೂ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾ. ಮೈಕಲï ಕುನ್ಹಾ ಆಯೋಗ ಸಲ್ಲಿಸಿರುವ ವರದಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ¯್ಲÁ ಉಸ್ತುವಾರಿ ಸಚಿವ ಡಿ. ಸುಧಾಕರ್ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಜಿ¯್ಲೆ ಯಲ್ಲಿ ಎಸ್‌ಡಿಆರ್‌ಎ-ï-೩೦ ಕೋಟಿ ರೂ., ಡಿಎಂಎ-ï-೪೬ ಕೋಟಿ ರೂ., ಸಿಎಸ್‌ಆರ್ ನಿಽಯಡಿ ೩೦ ಕೋಟಿ ರೂ.ಗೂ ಅಽಕ ಅನುದಾನ ಒದಗಿಸಿದ್ದು, ಈ ಪೈಕಿ ೩೮.೪೬ ಕೋಟಿ ರೂ. ಮೊತ್ತದ ಕಿಟ್, ಔಷಽ ಮತ್ತಿತರೆ ಸಾಮಗ್ರಿಗಳ ಖರೀದಿ ಸಂಬAಧ ಸಮರ್ಪಕ ದಾಖಲೆ ಇಲ್ಲವೆಂದು ಆಯೋಗ ವರದಿ ನೀಡಿದೆ. ಕೂಲಂಕಶವಾಗಿ ಮತ್ತೊಮ್ಮೆ ಪರಿಶೀಲಿಸಿ ಕ್ರಮವಹಿಸುವಂತೆ ಡಿಸಿಗೆ ಸೂಚಿಸಿದರು.
ಜಿ¯್ಲÁ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ವೈದ್ಯಕೀಯ ಸಾಮಗ್ರಿಗಳ ನೈಜ ದರವನ್ನು ಸಂ ಬAಧಪಟ್ಟ ಅಽಕೃತ -Áರ್ಮಸಿ¸್ಟï ಮೂಲಕ ಪಡೆದು, ಪರಿಶೀಲಿಸಿ, ಬಳಿಕ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂ ದಲ್ಲಿ, ತಪ್ಪಿತಸ್ಥರ ವಿರುದ್ಧ ಚಾರ್ಜ್ಶೀಟ್ ತಯಾರಿಸುವಂತೆ ತಾಕೀತು ಮಾಡಿದರು.
ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಸಾಂಕ್ರಾಮಿಕ ರೋಗ ಉಲ್ಬಣ ವೇಳೆ ಜನ ಸಾಯುವ ಪರಿಸ್ಥಿತಿಯಲ್ಲೂ ಔಷಧ ಮತ್ತಿತರೆ ಸಾಮಗ್ರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಲ್ಲಿ ಅದು ಅಕ್ಷಮ್ಯ ಅಪರಾಧ. ಹೀಗಾಗಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದನಿಗೂಡಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಯಾರು ತಪ್ಪಿತಸ್ಥರಿz್ದÁರೆ, ಅವರ ಮೇಲೆ ಕ್ರಮವಾಗಲೇಬೇಕು. ಇಲ್ಲದಿದ್ದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದು ಎಂದರು.
ಜೆಜೆಎಂ ೩೦೦ಕ್ಕೂ ಹೆಚ್ಚು ಕಾಮಗಾರಿ ಕಳಪೆ: ಸಚಿವರ ಸೂಚನೆ ಸಂಬAಧ ಮನೆ-ಮನೆಗೂ ಶುದ್ಧ ಕುಡಿಯುವ ನೀರು ಪೂರೈ ಸುವ ಜಲಜೀವನ್ ಮಿಷನ್ ಯೋಜನೆ ಕುರಿತು ಜಿ¯್ಲÉಯ ೧೮೯ ಗ್ರಾಪಂ ವ್ಯಾಪ್ತಿಯಲ್ಲಿ ತಹಸೀಲ್ದಾರ್, ತಾಪಂ ಇಒ ಹಾಗೂ ಇಂಜಿನಿಯರ್ ನೇತೃತ್ವದಲ್ಲಿ ಒಟ್ಟು ೪೯೦ ಕಾಮಗಾರಿ ಪರಿಶೀಲಿಸಿದ್ದು, ಈ ಪೈಕಿ ೩೦೦ಕ್ಕೂ ಹೆಚ್ಚು ಜೆಜೆಎಂ ಕಾಮಗಾರಿ ಕಳಪೆ ಎಂಬ ವರದಿ ಬಂದಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಸಭೆಯ ಗಮನಕ್ಕೆ ತಂದರು.
ಕೆಲವೆಡೆ ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟ ಕಳಪೆಯಾಗಿದೆ. ಇನ್ನು ಹಲವೆಡೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಅಗೆದಿರುವ ರಸ್ತೆಗಳನ್ನು ಮುಚ್ಚದೆ ಹಾಳುಗೆಡವಿರುವುದು ಕಂಡುಬAದಿದೆ. ೧೪ ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿ ಕಳಪೆಯಾಗಿವೆ ಎಂದು ಮಾಹಿತಿ ನೀಡಿದರು.
ಜೆಜೆಎಂ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಕೋಶದಿಂದ ಕಾಮಗಾರಿಯ ಎಂಬಿ ಪರಿಶೀಲನಾ ವರದಿ ಪಡೆಯಬೇಕು. ಗುತ್ತಿಗೆದಾರರಿಗೆ ದಂಡ ವಿಽಸುವುದಲ್ಲದೆ, ಕಾಮಗಾರಿಗಳನ್ನು ಸರಿಪಡಿಸುವಂತೆ ಸೂಚಿಸಲು ಅವಕಾಶವಿದೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಿ, ಇನ್ನೊಮ್ಮೆ ಪರಿಶೀಲನೆಗೆ ಒಳಪಡಿಸಬಹುದೆಂದು ಬಿಸ್ವಾಸ್ ಸಲಹೆ ನೀಡಿದರು.
ಜಿ¯್ಲÉಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಸ್ಟೆಲïಗಳಲ್ಲಿ ಮೂಲಸೌಕರ್ಯ ಕೊರತೆ, ಶೌಚಗೃಹಗಳ ಸ್ಥಿತಿಗತಿ ಶೋಚನೀಯವಾಗಿವೆ. ಹೀಗಾಗಿ ಅಽಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. -Àಲಿತಾಂಶ ಸುಧಾರಣೆ ನಿಟ್ಟಿನಲ್ಲೂ ಸೂಕ್ತ ಕ್ರಮವಹಿಸಬೇಕೆಂದು ಟಿ. ರಘುಮೂರ್ತಿ ಸೂಚಿಸಿದರು.
ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಎಂಎಲ್‌ಸಿಗಳಾದ ಡಿ.ಟಿ. ಶ್ರೀನಿವಾಸ್, ಕೆ.ಎಸ್. ನವೀನ್, ಡಿಸಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಜಿ¯್ಲÁಧ್ಯಕ್ಷ ಶಿವಣ್ಣ ಇತರರಿದ್ದರು.
ಸರ್ಕಾರಿ ಕಾಮಗಾರಿಗಳಿಗೆ ತಡೆ ಬೇಡ
ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ, ಮರಳು, ಕಾಂಕ್ರಿಟ್ ಮತ್ತಿತರೆ ಸಾಮಗ್ರಿ ಸಾಗಿಸುವ ಲಾರಿಗಳನ್ನು ತಡೆದು, ವಿವಿಧ ಕಾರಣಗಳನ್ನು ಒಡ್ಡಿ ಪ್ರಾದೇಶಿಕ ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್‌ಗಳು ದಂಡ ವಿಽಸುವುದು ಸೇರಿ ಅಡೆ-ತಡೆ ಉಂಟು ಮಾಡುತ್ತಿz್ದÁರೆ. ಇದರಿಂದ ಕಾಮಗಾರಿಗಳ ಪ್ರಗತಿ ಕುಂಠಿತವಾಗುತ್ತ್ತಿದೆ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಆರೋಪಿಸಿದರು.
ಜಿ¯್ಲÉಯಲ್ಲಿ ಶೇ. ೮೦ಕ್ಕೂ ಹೆಚ್ಚು ಸಿಸೇರಿಯನ್
ಜಿ¯್ಲÉಯಲ್ಲಿ ೨೦೨೫ರ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಜಿ¯್ಲÁಸ್ಪತ್ರೆಯಲ್ಲಿ ಒಟ್ಟು ೪,೯೪೮ ಹೆರಿಗೆಗಳಾಗಿವೆ. ಇದರಲ್ಲಿ ೩,೪೯೯ ಸಿಸೇರಿಯನ್ ಆಗಿವೆ. ಖಾಸಗಿ ಆಸ್ಪತ್ರೆಗಳಲ್ಲಂತೂ ಶೇ. ೮೦ ಕ್ಕಿಂತಲೂ ಹೆಚ್ಚಿನದಾಗಿ ಸಿಸೇರಿಯನ್ ಮಾಡಲಾಗುತ್ತಿದೆ ಎಂದು ಡಾ.ಆಕಾಶ್ ಮಾಹಿತಿ ನೀಡಿದರು.
ಇಡೀ ರಾಜ್ಯದಲ್ಲೇ ಚಿತ್ರದುರ್ಗ ಜಿ¯್ಲÉಯಲ್ಲಿ ಅತ್ಯಽಕ ಪ್ರಮಾಣದಲ್ಲಿ ಸಿಸೇರಿಯನ್ ಆಗುತ್ತಿವೆ ಎಂಬ ಕುರಿತು ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಈ ಸಂಬAಧ ಸೂಕ್ತ ತನಿಖೆ ನಡೆಸಿ ವರದಿ ಪಡೆಯಲು ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ೩ ಸಾವಿರ ಅನಽಕೃತ ಆಟೋರಿಕ್ಷಾ
ಜಿಲ್ಲಾದ್ಯಂತ ೩ ಸಾವಿರ ಆಟೋರಿಕ್ಷಾಗಳು ಅನಽಕೃತವಾಗಿ ಸಂಚರಿಸುತ್ತಿವೆ. ಅವುಗಳಿಂದಲೇ ನಗರ ಸೇರಿ ಪಟ್ಟಣಗಳಲ್ಲಿ ಸಂಚಾರ ಸಮಸ್ಯೆ ಹೆಚ್ಚುತ್ತಿದೆ ಎಂಬ ಅಂಶ ಸಭೆಯಲ್ಲಿ ಬೆಳಕಿಗೆ ಬಂತು. ಒಟ್ಟು ೧೦,೮೦೦ ಆಟೋರಿಕ್ಷಾಗಳಿದ್ದ, ಈ ಪೈಕಿ ೭,೮೦೦ ಆಟೋಗಳು ರಸ್ತೆಗಿಳಿಯಲು ಅನುಮತಿ ಪಡೆದಿವೆ. ಇನ್ನುಳಿದ ೩ ಸಾವಿರ ಆಟೋಗಳ ಮಾಲೀಕರು ಉಪ ಗುತ್ತಿಗೆ ನೀಡಿರುವ ಕಾರಣ ಅನಽಕೃತವಾಗಿ ಸಂಚರಿಸುತ್ತಿವೆ ಎಂದು ಆರ್‌ಟಿಒ ಭರತ್ ಕಾಳಸಿಂಘೆ ಸಭೆಗೆ ಮಾಹಿತಿ ನೀಡಿದರು.