ಥೈಲ್ಯಾಂಡ್‌ನ ಪಟ್ಟಾಯ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಭಾರತ ಪ್ರತಿನಿಽಸಿದ ಚಿತ್ರದುರ್ಗದ ಕಾಂಚನಾ ಬಂಗಾರ, ಇಶಿತಾ ಬೆಳ್ಳಿ ಪದಕ ಪಡೆದಿರುವುದು. 
ಚಿತ್ರದುರ್ಗ

ಅಂತಾರಾಷ್ಟಿçÃಯ ಟೆಕ್ವಾಂಡೋದಲ್ಲಿ ದುರ್ಗದವರ ಸಾಧನೆ

ಪ್ರಮುಖ ಮುಖ್ಯಾಂಶಗಳು

  • ಥೈಲ್ಯಾಂಡ್‌ನಲ್ಲಿ ಹಾರಿದ ಭಾರತದ ತ್ರಿವರ್ಣ ಧ್ವಜ
  • ಕಾಂಚನಾಗೆ ಬಂಗಾರ, ಇಶಿತಾಗೆ ಬೆಳ್ಳಿಯ ಪದಕ
  • ಸ್ವಯಂ ರಕ್ಷಣೆಗೆ ಕರಾಟೆ, ವುಶು, ಟೆಕ್ವಾಂಡೋ ಕಲಿಕೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಸ್ವಯಂ ರಕ್ಷಣೆಗೆ ಕರಾಟೆ, ವುಶು, ಟೆಕ್ವಾಂಡೋ ಕಲಿಕೆಯತ್ತ ಹೆಣ್ಣು ಮಕ್ಕಳೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿರು ವುದಲ್ಲದೆ ರಾಷ್ಟç, ಅಂತಾರಾಷ್ಟಿçÃಯ ಮಟ್ಟದ ಸ್ಪರ್ಧೆಗಳಲ್ಲೂ ಗಮನ ಸೆಳೆಯುತ್ತಿದ್ದಾರೆ. ಆ ಸಾಲಿಗೀಗ ಕೋಟೆನಗರಿಯ ಕಾಂಚನಾ, ಇಶಿತಾ ಸೇರ್ಪಡೆಯಾಗಿದ್ದಾರೆ...
ಥೈಲ್ಯಾಂಡ್‌ನ ಪ್ರಸಿದ್ಧ ಕಡಲ ತೀರದ ಪ್ರವಾಸಿ ನಗರ ಪಟ್ಟಾಯದಲ್ಲಿ ಜು.೩೧ರಿಂದ ಆ. ೨ರವರೆಗೂ ನಡೆದ ಅಂತಾರಾಷ್ಟಿçÃಯ ಟೆಕ್ವಾಂಡೋ ಸ್ಪರ್ಧೆಯಲ್ಲಿ ಈ ಇಬ್ಬರು ಕ್ರೀಡಾಪಟುಗಳು ವಿಶೇಷ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕರ್ನಾಟಕದಿAದ ಒಟ್ಟು ೩೦ ಮಂದಿ ಆಯ್ಕೆಯಾಗಿದ್ದು, ಚಿತ್ರದುರ್ಗದ ಕಾಂಚನಾ ೧೮ ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಬಂ ಗಾರ, ೧೬ ವರ್ಷದೊಳಗಿನ ಸ್ಪರ್ಧೆಯಲ್ಲಿ ಇಶಿತಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಟೆಕ್ವಾAಡೋದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಕಾಂಚನಾ ೨೦೨೧ರಲ್ಲಿ ಇದರ ಸೆಳೆತಕ್ಕೆ ಮನಸೋತರು. ನಗರದ ಡಿಸಿಪ್ಲಿನ್ ಜ ರ್ನಿ(ಡಿಜೆ) ಟೆಕ್ವಾಂಡೋ ಸೆಂಟರ್‌ಗೆ ಸೇರ್ಪಡೆಯಾಗಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದರು. ನಂತರ ಒಡಿಸ್ಸಾದಲ್ಲಿ ಆಯೋ ಜಿಸಿದ್ದ ಆಲ್ ಇಂಡಿಯಾ ಯೂನಿವರ್ಸಿಟಿ ಲೆವೆಲ್ ಟೆಕ್ವಾಂಡೋದಲ್ಲಿ ದಾವಣಗೆರೆ ವಿವಿ ಪ್ರತಿನಿಽಸಿದ್ದರು.
ಇಲ್ಲಿ ತೋರಿದ ಉತ್ತಮ ಪ್ರದರ್ಶನ, ಸತತ ಅಭ್ಯಾಸದೊಂದಿಗೆ ಮುಂದುವರಿದ ಅವರ ಟೆಕ್ವಾಂಡೋ ಪಯಣ ಅಂತಾರಾಷ್ಟಿçÃಯ ಸ್ಪರ್ಧೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.
ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ೩ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಇಶಿತಾ ಕೂಡ ಕಳೆದ ಐದು ವರ್ಷದಿಂದ ಅಭ್ಯಾಸದಲ್ಲಿ ನಿರತಳಾಗಿದ್ದಾಳೆ. ಭಾರತದ ತ್ರಿವರ್ಣ ಧ್ವಜವನ್ನು ಥೈಲ್ಯಾಂಡ್‌ನಲ್ಲಿ ಹಾರಿಸಿ, ಟೆಕ್ವಾಂಡೋ ಮೂಲಕ ಕೀರ್ತಿ ತಂದುಕೊಟ್ಟಿದ್ದಾರೆ.

ಸಾಧನೆಗೈಯಲು ವಿವಿಧ ಕ್ಷೇತ್ರಗಳಿವೆ

ಇಬ್ಬರೂ ಚಿತ್ರದುರ್ಗದವರೇ ಆಗಿದ್ದು, ಏನಾದರೂ ವಿಶೇಷ ಸಾಧನೆ ಮಾಡುವ ಛಲ ಹೊಂದಿದ್ದಾರೆ. ಕ್ಷೇತ್ರ ಯಾವುದಾದರೂ ಭಾರತಕ್ಕೆ ಹೆಮ್ಮೆ ತಂದುಕೊಡುವ ನಿಟ್ಟಿನಲ್ಲಿ ಸಾಗಬೇಕಿದೆ ಎನ್ನುತ್ತಾರೆ ಕಾಂಚನಾ, ಇಶಿತಾ.

ಗೌರವಿಸಲು ಜಿಲ್ಲಾಡಳಿತ ನಿರ್ಧಾರ

ಅಂತಾರಾಷ್ಟಿçÃಯ ಮಟ್ಟದಲ್ಲಿ ಚಿತ್ರದುರ್ಗದ ಕೀರ್ತಿ ಬೆಳಗಿಸಿದ ಇಬ್ಬರು ಕ್ರೀಡಾಪಟುಗಳನ್ನು ಆ. ೧೫ರ ಸ್ವಾತಂತ್ರ‍್ಯ ದಿನಾ ಚರಣೆ ಅಥವಾ ಅಷ್ಟರೊಳಗೆ ಗೌರವಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂಬ ಮಾಹಿತಿ ಇದೆ.
"

ನಗರದಲ್ಲಿ ಸತತ ೧೦ ವರ್ಷದಿಂದಲೂ ತರಬೇತಿ ನೀಡುತ್ತಿದ್ದೇನೆ. ಸದ್ಯ ೫೫ ಮಂದಿ ನಮ್ಮ ಕೇಂದ್ರದಲ್ಲಿದ್ದು, ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚು ಪಡೆದವರೂ ಇದ್ದಾರೆ.

— | ರುದ್ರೇಶ್, ಚಿತ್ರದುರ್ಗದ ಡಿಜೆ ಟೆಕ್ವಾಂಡೋ ಸೆಂಟರ್‌ನ ತರಬೇತುದಾರ