ಆರೋಪಿ ಭಾಸ್ಕರ್  
ಚಿತ್ರದುರ್ಗ

೨೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಆರೋಪಿ ಬಂಧನ

ಕೋರ್ಟ್ ಆರೋಪಿ ವಿರುದ್ಧ ವಾರೆಂಟ್ ಹೊರಡಿಸಿತ್ತು.

ಚಿತ್ರದುರ್ಗ: ದರೋಡೆ ಪ್ರಕರಣದಲ್ಲಿ ಕಳೆದ ೨೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಭಾಸ್ಕರ್ ಅಲಿಯಾಸ್ ರ‍್ರಿಸ್ವಾಮಿ ಎಂಬಾತನನ್ನು ಪೊಲೀಸರು ಬಂಽಸಿದ್ದಾರೆ.

ಬಂಽತನ ಸಹಿತ 7 ಆರೋಪಿಗಳು ಮೊಳಕಾಲ್ಮೂರು ತಾಲೂಕು ತುಮಕೂರ್ಲಹಳ್ಳಿ ಗೇಟ್ ಬಳಿ ಮಚ್ಚು, ಚಾಕುಗಳನ್ನು ತೋರಿಸಿ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಂದ ಚಿನ್ನ, ಕೈಗಡಿಯಾರ, ವಿಸಿಪಿ ಪ್ಲೇಯರ್‌ಗಳನ್ನು ದರೋಡೆ ಮಾಡಿದ್ದರು.

ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾದ ದಿನದಿಂದ ಆರೋಪಿ ತಲೆಮರೆಸಿಕೊಂಡಿದ್ದ. ಮೊಳಕಾಲ್ಮೂರು ಸಿಜೆ ಮತ್ತು ಜೆಎಂಎ-ï‌ಸಿ ಕೋರ್ಟ್ಗೆ ವಿಚಾರಣೆಗೂ ಹಾಜರಾಗದೆ ಅಂದಾಜು ೨೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೋರ್ಟ್ ಆರೋಪಿ ವಿರುದ್ಧ ವಾರೆಂಟ್ ಹೊರಡಿಸಿ, ಎಲ್‌ಪಿಆರ್ ಪ್ರಕರಣವೆಂದು ಪರಿಗಣಿಸಿತ್ತು.

ಈತನ ಪತ್ತೆಗೆ ಚಳ್ಳಕೆರೆ ಡಿವೈಎಸ್‌ಪಿ ಸತ್ಯನಾರಾಯಣರಾವ್, ಮೊಳಕಾಲ್ಮೂರು ಸಿಪಿಐ ಆರ್. ನಾಗರಾಜ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹೇಶ ಲಕ್ಷ÷್ಮಣ ಹೊಸಪೇಟೆ ಮತ್ತವರ ಸಿಬ್ಬಂದಿ ಆರ್.ಓಬಣ್ಣ ಮತ್ತು ಗೋವಿಂದ ಅವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು.

ಈ ತಂಡ ಆಂಧ್ರಪ್ರದೇಶದ ಅನಂತರಪುರ ಜಿಲ್ಲೆ ನಿಂಬಗಲ್ ಗ್ರಾಮದ ಆರೋಪಿ ಭಾಸ್ಕರ್‌ನನ್ನು ತಿರುಪತಿಯ ಪದ್ಮಾವತಿ ನಗರದಲ್ಲಿ ಅ.೨೫ರಂದು ಬಂಽಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ಎಸ್‌ಪಿ ಕುಶಲ್ ಚೌಕ್ಸೆ ತಿಳಿಸಿದ್ದಾರೆ.

ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಽಸುವಲ್ಲಿ ಯಶಸ್ವಿಯಾಗಿರುವ ತನಿಖಾ ತಂಡದ ಕಾರ್ಯ ಶ್ಲಾಘನೀಯ ಎಂದು ಎಸ್‌ಪಿ ತಿಳಿಸಿದ್ದಾರೆ.