ಚಿತ್ರದುರ್ಗದ ವಿವಿಧ ಕಾಲೇಜುಗಳ ಬಳಿ ಪೊಲೀಸ್ ಬೀಟ್ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಒತ್ತಾಯಿಸಿ ನಗರ ಠಾಣೆ ಪಿಎಸ್‌ಐ ರಘು ಅವರಿಗೆ ಎಬಿವಿಪಿ ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು. ಪರಿಷತ್ ಪ್ರಾಂತ ಸಮಿತಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ಟಿ. ತರುಣ್‌ಕುಮಾರ್, ಕುಬೇರ, ಚರಣ್, ರಾಜು, ಮಧು,ನವೀನ್ ಗುರು, ಕಿರಣ್, ಅಮಿತ್ ಇತರರು ಇದ್ದರು.
- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
- ಪೊಲೀಸ್ ಬೀಟ್
- ಸಿ.ಸಿ. ಕ್ಯಾಮರಾ
ಚಿತ್ರದುರ್ಗ: ಸರ್ಕಾರಿ ಕಲಾ, ವಿಜ್ಞಾನ, ಪಾಲಿಟೆಕ್ನಿಕ್, ಐಟಿಐ, ಎಸ್‌ಜೆಎಂ ಕಾನೂನು ಕಾಲೇಜುಗಳ ಸುತ್ತ-ಮುತ್ತ ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು. ಈ ಕಾಲೇಜುಗಳ ಆವರಣದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪೊಲೀಸರಿಗೆ ಮನವಿ ಮಾಡಿದರು.
ಅನಽಕೃತ ತಿರುಗಾಟ, ಬೈಕ್ ಸ್ಟಂಟ್, ಹಲ್ಲೆ, ಜಗಳ, ಕಾಲೇಜುಗಳ ಬಳಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಅನಗತ್ಯವಾಗಿ ಗುಂಪು ಗೂಡುವುದು ಹಾಗೂ ಕೆಲವೊಮ್ಮೆ ಅಸಭ್ಯ ವರ್ತನೆಗಳು ಕಂಡು ಬರುತ್ತಿವೆ. ಪ್ರಮುಖವಾಗಿ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ವಿವಿಧ ಇಲಾಖೆ ಹಾಸ್ಟೆಲ್‌ಗಳಿದ್ದು, ವಿದ್ಯಾರ್ಥಿಗಳ ಪಾಲಕರು, ಹಾಸ್ಟೆಲ್ ಸಿಬ್ಬಂದಿ ಆತಂಕಕೊಳ್ಳುವAಥ ಪರಿಸ್ಥಿತಿ ಇದೆ. ಪೊಲೀಸ್ ಬೀಟ್ ಬಿಗಿಗೊಳಿಸಬೇಕು. ಸ್ವಾಮಿ ವಿವೇಕಾನಂದ ರಸ್ತೆ, ಜಿಪಂ ರಸ್ತೆ, ಟೀಚರ್ ಕಾಲನಿ ರಸ್ತೆ, ಎಸ್‌ಸಿ, ಎಸ್‌ಟಿ ಬಾಲಕಿಯರ ಹಾಸ್ಟೆಲ್ ರಸ್ತೆ ಸಹಿತ ಈ ಭಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಆಗ್ರಹಿಸಿ ಪಿಎಸ್‌ಐ ರಘು ಅವರಿಗೆ ಮನವಿ ಸಲ್ಲಿಸಿದರು.
ಪರಿಷತ್ ಪ್ರಾಂತ ಸಮಿತಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ಟಿ. ತರುಣ್‌ಕುಮಾರ್, ಕುಬೇರ, ಚರಣ್, ರಾಜು, ಮಧು, ನವೀನ್ ಗುರು, ಕಿರಣï, ಅಮಿತ್ ಇತರರು ಇದ್ದರು.