ಪ್ರಜಾಸೇವಾ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುವಾರ್ ಚಾಲನೆ ನೀಡಿದರು. ಟಿ.ರುಮೂರ್ತಿ, ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್, ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಕೆ.ಸಿ. ವೀರೇಂದ್ರಪಪ್ಪಿ, ಜಿ.ಎಸ್.ಮಂಜುನಾಥ್, ಪೂರ್ಣಿವಾ, ಸುಹಾಸ್ ಸುಧಾಕರ್ ಇತರರು ಇದ್ದರು. Prajaseve
ಚಿತ್ರದುರ್ಗ

ಸಾರ್ವಜನಿಕರ ಬದುಕಲ್ಲಿ ಬದಲಾವಣೆಯ ಸಂಕಲ್ಪ

ಹಿರಿಯೂರು ನೆಹರು ಮೈದಾನದಲ್ಲಿ ಪ್ರಜಾಸೇವಾ ಆಂದೋಲನ

ಹಿರಿಯೂರು: ಜನರ ಮನೆ ಬಾಗಿಲಿಗೆ ತೆರಳಿ ಆವರ ಕಷ್ಟಗಳನ್ನು ಕೇಳಿ ಪರಿಹರಿಸುವುದು ಪ್ರಜಾಸೇವೆಯ ಧ್ಯೇಯವಾಗಿದೆ. ಈ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಸಂಕಲ್ಪದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ನೆಹರು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.

ನಾನು ನಿಮ್ಮ ಪ್ರಜಾಸೇವಕ, ಜನರ ಬದುಕಿನಲ್ಲಿ ಬಡಲಾವಣೆಗೆ ತರುವ ಕೆಲಸ ವಾಡಲಿದ್ದೇವೆ. ಸುಳ್ಳು ಭರವಸೆ ನೀಡುವುದಿಲ್ಲ. ಜನ ಸೇವೆಯೇ ಇದರ ಪ್ರಮುಖ ಧ್ಯೇಯ. ನಿಮ್ಮ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು, ಸಕಾಲದಲ್ಲಿ ಸೇವೆ ಒದಗಿಸುವುದು ನಮ್ಮ ಆಲೋಚನೆಯಾಗಿದೆ ಎಂದು ತಿಳಿಸಿದರು. ಸಚಿವ ಎಚ್.ಸಿ. ಬಾಲಕಷ್ಣ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ಡಿ.ಟಿ. ಶ್ರೀನಿವಾಶ್, ಡಾ. ರಂಗನಾಥ್, ನಿಗಮ ಮಂಡಳಿ ಅಧ್ಯಕ್ಷರಾದ ಜಿ.ಎಸ್. ಮಂಜು ನಾಥ್, ಪಿ. ರು, ಡಾ. ಯೋಗೇಶ್ ಬಾಬು, ಡಿಸಿ ರವ್ಯಾ, ಜಿಪಂ ಸಿಇಒ ಡಾ. ಆಕಾಶ್ ಇತರರಿದ್ದರು.

ಅಹವಾಲುಗಳ ಮಹಾಪೂರ

ಖಾತೆ ವಾಡಿಕೊಡಲು ಅಧಿಕಾರಿಯೊಬ್ಬ ಲಂಚ ಕೇಳಿದ್ದು ನಿಜವಾದರೆ ಅದರ ಬಗ್ಗೆ ಪರಿಶೀಲನೆ ನಡೆಸಿ ಆತನ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗೆ ಸಿಎಂ ಖಡಕ್ ಸೂಚನೆ ನೀಡಿದರು. ತಾಲೂಕಿನ ಕೆ.ಎಂ. ಕೊಟ್ಟಿಗೆ ದಲಿತ ಕಾಲನಿಯ ಕೆ. ಚಂದ್ರು ಅವರು ಖಾತೆ ಮಾಡಿಕೊಡಲು ಲಂಚ ಕೇಳಿರುವ ಕುರಿತು ದೂರು ನೀಡಿದಾಗ ಸಿಎಂ ಕಿಡಿಕಿಡಿಯಾದರು. ಜಿಲ್ಲಾಧಿಕಾರಿಗಳೇ ಹಾಗೂ ಉಪವಿಭಾಗಾಧಿಕಾರಿಗಳೇ, ಇವತ್ತೇ ಈ ಬಗ್ಗೆ ತೀರ್ವಾನ ಆಗಬೇಕು. ಲಂಚ ಕೇಳಿರುವುದು ನಿಜವೆಂದು ಗೊತ್ತಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಅವಾನತು ವಾಡಬೇಕು. ಇಂತಹವರನ್ನು ಬಿಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ದಾರಿಯಿಲ್ಲದೆ ತಮ್ಮ ಹೊಲಗಳಿಗೆ ತೆರಳಲು ಪರದಾಡುತ್ತಿದ್ದೇವೆ. ಗರ್ಭಿಣಿಯರು ಹೆದ್ದಾರಿ ಬೈಪಾಸ್ ಬಳಿ ಕಾಯುತ್ತಿದ್ದರೂ ಬಸ್ ನಿಲ್ಲಿಸುತ್ತಿಲ್ಲ. ಸ್ವಾಮಿ ನನಗೆ 85 ವರ್ಷ. ತುಂಡು ಭೂಮಿ ಕೊಡಿ. ಶಾಲಾ ಕಟ್ಟಡವಿಲ್ಲ... ಹೀಗೆ ಹತ್ತಾರು ಜನರು ತಮ್ಮ ಸಂಕಷ್ಟಗಳನ್ನು ಸಿಎಂ ಮುಂದಿಟ್ಟರು. ಅಮ್ಮ ನನಗೆ ಕೈ ಮುಗೀಬೇಡಿ. ನಾವು ನಿಮಗೆ ಕೈ ಮುಗಿಯಬೇಕು. ಸಮಸ್ಯೆ ಏನು ಅಂತ ಹೇಳಿ ಎಂದು ಹಿರಿಯ ಜೀವಗಳ ಬಳಿ ಸಿಎಂ ಪ್ರಾರ್ಥಿಸಿದರು.

ಹೈಟೆನ್ಷನ್ ಟೆನ್ಷನ್

ಸ್ವಾಮಿ ನಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ವಾರ್ಗ ಹೋಗುವುದು ಬೇಡ. ನಮಗೆ ಜಮೀನು ಕಳೆದುಕೊಳ್ಳುವ ಭಯ ಎದುರಾಗಿದೆ ಎಂದು ಯರಿಚಿಕ್ಕನಹಳ್ಳಿಯ ವಾನಸ ಹಾಗೂ ರವಿ ಸಿಎಂ ಎದುರಿನ ಮೇಜಿನ ಮೇಲೆ ತಲೆಯಿಟ್ಟು ಬೇಡಿಕೊಂಡರು. ತಾಲೂಕಿನ 22 ಗ್ರಾಮಗಳ ಮೇಲೆ ಹಾದುಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಗಳಿಂದ ಅಡಿಕೆ ತೋಟಗಳಿಗೆ ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ತಾಯಿ, ಹೈಟೆನ್ಷನ್ ವಿದ್ಯುತ್ ವಾರ್ಗ ಹೋಗುತ್ತೆ ಎಂದು ಟೆನ್ಷನ್ ವಾಡಿಕೊಳ್ಳಬೇಡಿ. ನಾನು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು. ಎರಡು ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ವಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಡದ ಕೊರತೆ

ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕೊರತೆಯಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು, ಎಲ್‌ಕೆಜಿ ಆರಂಭಿಸಲು ಅವಕಾಶ ಕಲ್ಪಿಸಬೇಕು. ಈ ಕುರಿತು ಡಿಡಿಪಿಐ ಎರಡು ಬಾರಿ ಭೇಟಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರಸನ್ನ ಎಂಬುವರು ದೂರಿದರು. ಸಿಎಂ ಡಿಡಿಪಿಐ ಅವರನ್ನು ಕರೆದು ಅರ್ಜಿ ಪಡೆದು ಮೊದಲು ಕೆಲಸ ವಾಡಿಕೊಡಿ ಎಂದು ಸೂಚಿಸಿದರು. ಹಿರಿಯೂರಿನಲ್ಲಿ 250 ಕ್ಕೂ ಹೆಚ್ಚು ವಕೀಲರಿದ್ದು, ವಕೀಲರ ಭವನ ಹಾಗೂ ಮೂಲಸೌಕರ್ಯ ಕೊರತೆ ಇದೆ. ಭವನ ನಿರ್ವಾಣಕ್ಕೆ 3 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ವಾಡಬೇಕು ಎಂದು ವಕೀಲರ ಸಂಘದ ಪ್ರತಿನಿಧಿಗಳು ಮನವಿ ವಾಡಿದರು.

ಬಸ್ ಏಕೆ ನಿಲ್ಲಿಸುವುದಿಲ್ಲ?

ಪತ್ರಿಕಾ ವಿತರಕ ಏಕಾಂತಪ್ಪ ಅವರು, ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣದ ಒಳಗಡೆ ಬರದೇ ಬೈಪಾಸ್‌ನಲ್ಲೇ ನಿಲ್ಲಿಸುತ್ತಿವೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ದೂರಿದರು. ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸೋದಿಲ್ಲ? ವಾನವೀಯತೆ ಇಲ್ಲವೆ? ಕೂಡಲೇ ಈ ಸಮಸ್ಯೆ ಬಗೆಹರಿಸಿ ನನಗೆ ವಿಚಾರ ತಿಳಿಸಬೇಕು. ಏಕೆ ಬಸ್ ನಿಲ್ಲಿಸೋದಿಲ್ಲ. ಈ ಸಮಸ್ಯೆ ಮತ್ತೆ ಪುನರಾವರ್ತನೆ ಆಗಬಾರದು ಎಂದು ಕೆಎಸ್‌ಆರ್‌ಟಿಸಿ ವಿಭಾಗ ಅಧಿಕಾರಿಗೆ ಸಿಎಂ ಸೂಚಿಸಿದರು. ನನಗೆ ಭೂಮಿ ಇಲ್ಲ. ಏನಾದರೂ ದಾರಿ ವಾಡಿಕೊಡಿ ಎಂದು ಕಸವನಹಳ್ಳಿಯ 85 ವಷದ ಲಕ್ಷ್ಮಮ್ಮ ಸಿಎಂ ಕೈ ಹಿಡಿದು ಕೇಳಿದಾಗ, ಅಜ್ಜಿ ನಿಮಗೆ ಭೂಮಿ ಮಂಜೂರು ವಾಡಿ ಕೊಡುತ್ತೇವೆ. ಉಳುವವನಿಗೆ ಭೂಮಿ ನೀಡಿದ ಪಕ್ಷ ನಮ್ಮದು ಎಂದಾಗ ಅಜ್ಜಿ ಲಕ್ಷ್ಮಮ್ಮ ಅವರ ಮುಖದಲ್ಲಿ ನಗು ಮೂಡಿತು.

3733 ಅರ್ಜಿಗಳು ಸಲ್ಲಿಕೆ

ಪ್ರಜಾಸೇವಾ ಅಭಿಯಾನಕ್ಕೆ ಇಲ್ಲಿನ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ಪ್ರಜಾಸೇವೆ ಮೂಲಕ ಜನರ ಸಮಸ್ಯೆ ಪರಿಹಾರಕ್ಕೆ ಪ್ರಾವಾಣಿಕ ಪ್ರಯತ್ನ ವಾಡಲಾಗುವದು. ವಿವಿಧ ಸಮಸ್ಯೆ ಪರಿಹಾರಕ್ಕೆ 3733 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ತಿಳಿಸಿದರು.

ರಘುಮೂರ್ತಿ ಕಳವಳ

ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ನಾಲೆ ಅಭಿವೃದ್ಧಿಗೆ 3500 ಕೋಟಿ ರೂ. ಅನುದಾನ ನೀಡಿ, ಜಿಲ್ಲೆಯ ಕೆರೆಗಳಿಗೆ 3 ಟಿಎಂಸಿ ಅಡಿ ನೀರು ಹರಿಸಿದೆ. ಮತ್ತೆ 1 ಟಿಎಂಸಿ ನೀರು ಹರಿಸಲು ಆದೇಶ ವಾಡಲಾಗಿದೆ. ಇದಕ್ಕೆ ಪಕ್ಕದ ಜಿಲ್ಲೆಯಲ್ಲಿ ಪ್ರತಿರೋಧ ವ್ಯಕ್ತವಾಗಿದೆ ಎಂದು ಜಿಲ್ಲಾ ಸಚಿವ ಟಿ.ರುಮೂರ್ತಿ ಕಳವಳ ವ್ಯಕ್ತಪಡಿಸಿದರು. ಭದ್ರಾ ಜಲಾಶಯದ 72 ಟಿಎಂಸಿ ಅಡಿ ನೀರಿನಲ್ಲಿ 12.5 ಟಿಎಂಸಿ ನಮ್ಮ ಪಾಲು ಇದೆ. ಪ್ರಸ್ತುತ 55 ಟಿಎಂಸಿ ನೀರಿನ ಸಂಗ್ರಹ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರ, ಮಳೆ ಕೊರತೆಯಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಹಿರಿಯೂರಿನಲ್ಲಿ 39 ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವಾಡಲಾಗುತ್ತಿದೆ. ನೀರಿಗಾಗಿ ಹಳ್ಳಿಗಳಲ್ಲಿ ಪ್ರತಿಭಟನೆ ವಾಡುತ್ತಿದ್ದಾರೆ. ವಿವಿ ಸಾಗರಕ್ಕೆ ತಕ್ಷಣ 2 ಟಿಎಂಸಿ ಅಡಿ ನೀರು ಹರಿಸಬೇಕು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 2.5 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.

ಹಿರಿಯೂರಿಗೆ ನಾನೇ ಅಭ್ಯರ್ಥಿ

ಹಿರಿಯೂರು ವಿಧಾನ ಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ಖಾಲಿ ಕೈಯಲ್ಲಿ ಇಲ್ಲಿಗೆ ಬಂದಿಲ್ಲ. ಅಭಿವೃದ್ಧಿಯ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದು, ತಾಲೂಕಿಗೆ 2500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ದಿ. ಕೆ.ಎಚ್.ರಂಗನಾಥ್ ಅವರು ಹಿರಿಯೂರಿನಲ್ಲಿ ಶ್ರೀಗಂಧ ಬೆಳೆಯುವ ಕನಸು ಕಂಡಿದ್ದರು. ಸುಧಾಕರ್ ನನ್ನ ಆತ್ಮೀಯ ಗೆಳೆಯ. ಆತನಿಗೆ ಜಾತಿ ಬಲ ಇಲ್ಲದಿದ್ದರೂ ಜನ ಬೆಂಬಲ ಇತ್ತು. ಜಾತ್ಯತೀತವಾಗಿ ಎಲ್ಲರನ್ನೂ ಪ್ರೀತಿಸಿ ರಾಜಕೀಯವಾಗಿ ಬೆಳೆದಿದ್ದ. ಅವನ ಕನಸು ಸಾಕಾರಗೊಳಿಸುವುದು ನಮ್ಮ ಸಂಕಲ್ಪವಾಗಿದೆ ಎಂದರು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ವಾತನಾಡಿ, ಪ್ರಜಾಸೇವೆ ದೇಶಕ್ಕೆ ವಾದರಿಯಾಗಿದೆ. ಜನರ ಸಮಸ್ಯೆ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಡುಗೊಲ್ಲರ ಎಸ್ಟಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳಿದೆ. ರಾಜ್ಯ ಸರ್ಕಾರ ಕಾಡುಗೊಲ್ಲರಿಗೆ ನ್ಯಾಯ ಒದಗಿಸಲಿದೆ ಎಂದರು.

ಬಿಜೆಪಿ-ಜೆಡಿಎಸ್ ಖಾಲಿ ಡಬ್ಬ

ಸಂಸದ ಗೋವಿಂದ ಕಾರಜೋಳ ಅವರು ಜಿಲ್ಲೆಯ ನೀರಾವರಿ ಸಮಸ್ಯೆ ಕುರಿತು ಧ್ವನಿ ಎತ್ತಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಭರವಸೆ ನೀಡಿದರು. ಇಲ್ಲಿಯವರೆಗೆ ಈಡೇರಿಲ್ಲ, ಸಚಿವ ಸಂಪುಟದಲ್ಲಿ ಅನಮೋದನೆ ನೀಡಿ, ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ವಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ಬಗ್ಗೆ ಎಚ್ಚರವಿರಲಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸಂವಿಧಾನ ಬದಲಿಸುವ ಹುನ್ನಾರವಿದೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು. ಮತದಾರರು ದಿ. ಸುಧಾಕರ್ ಅವರನ್ನು 5 ವರ್ಷಕ್ಕೆ ಆಯ್ಕೆ ವಾಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲು ಕಾಂಗ್ರೆಸ್ ಬೆಂಬಲಿಸಬೇಕು. ರಾಜ್ಯದಲ್ಲಿ 80 ಸಾವಿರ ಮನೆ ಹಂಚಿಕೆ ಮಾಡಲಾಗುವುದು ಎಂದರು.

ಮಾತು ಕೊಟ್ಟಂತೆ ನಡೆದಿದ್ದೇವೆ

ಭದ್ರಾ ಮೇಲ್ದಂಡೆ ಯೋಜನೆ ನಿಜಲಿಂಗಪ್ಪ ಅವರ ಕನಸು. ಈ ಯೋಜನೆ ಜಾರಿಗೆ ರಾಮಕೃಷ್ಣ ಹೆಗಡೆ ಅವರ ಮುಂದೆ ಕೈಚಾಚಿ ಕುಳಿತಿದ್ದರು. ಚಿತ್ರದುರ್ಗ ಜಿಲ್ಲೆಯ ಬರ ಪರಿಸ್ಥಿತಿ, ನೀರಿನ ಸಮಸ್ಯೆ ಕುರಿತು ಅರಿವಿದೆ. ಕೋಲಾರ, ಚಿತ್ರದುರ್ಗ ಜಿಲ್ಲೆಯ ಜನರ ಸಮಗ್ರ ನೀರಾವರಿ ಕನಸು ನನಸಾಗಿಸುವಂತೆ ಹೇಳಿ ನನಗೆ ನೀರಾವರಿ ಇಲಾಖೆ ಜವಾಬ್ದಾರಿಯನ್ನು ಸಿಎಂ ನೀಡಿದ್ದಾರೆ. ಕೊಟ್ಟ ವಾತಿನಂತೆ ಚಿತ್ರದುರ್ಗ ಶಾಖಾ ಕಾಲುವೆಗೆ 3 ಟಿಎಂಸಿ ಅಡಿ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಂಚಿವ ಎನ್.ಚಲವರಾಯಸ್ವಾಮಿ ಹೇಳಿದರು. ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾಧ್ಯವಿಲ್ಲ ಎಂದವರು ಉಪ ಚುನಾವಣೆಯಲ್ಲಿ ನಿಮ್ಮ ಮುಂದೆ ಮತ ಕೇಳಲು ಬರುತ್ತಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು. ಯಾವುದೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿಲ್ಲ. ರಾಜ್ಯದಲ್ಲಿ ಶೇ. 80ರಷ್ಟು ಜನರಿಗೆ ಗ್ಯಾರಂಟಿ ಲಾಭ ತಲುಪಿದೆ ಎಂದರು. ಡಿಸೆಂಬರ್ ಒಳಗೆ ತುಂಗಾದಿಂದ ಭದ್ರಾಕ್ಕೆ 17 ಟಿಎಂಸಿ ನೀರು ಲ್‌ಟಿ ವಾಡಲಾಗುವುದು. ಮುಂದಿನ ವರ್ಷದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 29 ಟಿಎಂಸಿ ಅಡಿ ನೀರು ಹರಿಸಲಾಗುವುದು. ವಿವಿ ಸಾಗರ ನಾಲೆ ಅಭಿವೃದ್ಧಿ/ಆಧುನೀಕರಣಕ್ಕೆ 1500 ಕೋಟಿ ಅನುದಾನ ನೀಡಲಾಗಿದೆ ಎಂದರು.

ಪೂರ್ಣಿವಾ ನನ್ನ ಸಹೋದರಿ

ಮಾಜಿ ಶಾಸಕಿ ಕೆ. ಪೂರ್ಣಿವಾ ಅವರಿಗೆ ರಾಜಕೀಯ ಪ್ರಜ್ಞೆ, ನಾಯಕತ್ವದ ಗುಣ, ಜನ ಸೇವೆ ವಾಡುವ ಸಂಕಲ್ಪ ಇದೆ. ಕಾಂಗ್ರೆಸ್ ತತ್ವ ಸಿದ್ಧಾಂತ ಮೆಚ್ಚಿ ಕಮಲ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ. ಕ್ಷೇತ್ರದ ಜನರ ಸೇವೆ ವಾಡುವ ಸಂಕಲ್ಪ ಅವರದ್ದಾಗಿದೆ ಎಂದರು. 2023ರ ಸಾರ್ವತ್ರಿಕ ಚುನಾವಣೆ ಯಲ್ಲಿ ನನ್ನ ಆತ್ಮೀಯ ಗೆಳೆಯ ಸುಧಾಕರ್ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು, ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸುವಂತೆ ಸಿಎಂ ಮನವಿ ವಾಡಿದರು.

ಹಳ್ಳಿಗಳಿಗೆ ಬಿಟ್ಟುಕೊಳ್ಳಬೇಡಿ

ರಾಜ್ಯದಲ್ಲಿ ನಡೆದ 5 ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಬ್ಬರು ಸಿಎಂ ಮಕ್ಕಳು ಸೋತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳಬೇಡಿ. ಪಂಚ ಗ್ಯಾರಂಟಿ ಜತೆ ಹಿರಿಯೂರಿನ ಜನರ ಬದುಕಿನಲ್ಲಿ ಬದಲಾವಣೆ ತರಲಾಗುವುದು. ಜನರ ಆಶೀರ್ವಾದ, ನಂಬಿಕೆಗಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ ಎಂದರು. ಭದ್ರಾ ಮೇಲ್ದಂಡೆ ಯೋಜನೆಯಡಿ 4 ಜಿಲ್ಲೆಯ 366 ಕೆರೆಗಳಿಗೆ ನೀರು ಹರಿಸಲಾಗುವುದು. ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಗುರಿ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಜನರ ಋಣ ತೀರಿಸುವ ಹೊಣೆ

ಕಾಂಗ್ರೆಸ್ ಸರ್ಕಾರ ಸೀ ಶಕ್ತಿ ಸಂಘ ಸ್ಥಾಪನೆ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಅನುಷ್ಠಾನದ ಮೂಲಕ ಮಹಿಳೆಯರ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ. 2018 ರಲ್ಲಿ ತಾಲೂಕಿನ ಜನತೆ ನನ್ನ ಬೆಂಬಲಿಸಿದ್ದರು. ತಾಲೂಕಿನ ಜನರ ಋಣ ತೀರಿಸುವ ಹೊಣೆ ನಮ್ಮ ಮೇಲಿದೆ ಎಂದು ಮಾಜಿ ಶಾಸಕ ಪೂರ್ಣಿಮಾ ಹೇಳಿದರು.

ಯಾರ್ಯಾರು ಇದ್ದರು

ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಡಾ. ರಂಗನಾಥ್, ಕೆ.ಸಿ. ವಿರೇಂದ್ರಪಪ್ಪಿ, ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ. ಯೋಗೇಶ್ ಬಾಬು, ರಾಜ್ಯಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರು, ರಾಜ್ಯ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಆರೊಗೆರೆ, ವಾಜಿ ಸಚಿವ ಎಚ್. ಆಂಜನೇಯ, ವಾಜಿ ಸಂಸದ ಬಿ.ಎನ್. ಚಂದ್ರಪ್ಪ, ಸುಹಾಸ್ ಸುಧಾಕರ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ಪ್ರಜಾ ಸೇವಾ ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ, ಕಾರ್ಮಿಕ ಇಲಾಖೆ ಆಯುಕ್ತ ಆವ್ಲಾನ್ ಆದಿತ್ಯ ಬಿಸ್ವಾಸ್, ಬೆಂಗಳೂರು ಆರ್‌ಸಿ ಡಾ. ಕ್ಯಾಪ್ಟನ್‌ರಾಜೇಂದ್ರ, ಡಿಸಿ ಎಸ್. ರವ್ಯಾ, ಜಿಪಂ ಸಿಇಒ ಡಾ.ಎಸ್. ಆಕಾಶ್, ಐಜಿಪಿ ಎನ್. ಸತೀಶ್‌ಕುಮಾರ್, ಎಸ್‌ಪಿ ಕುಶಲ್‌ಚೌಕ್ಸೆ ಮತ್ತಿತರ ಅಧಿಕಾರಿಗಳು, ಕಾಂಗ್ರೆಸ್ ಪ್ರಮುಖರು ಇದ್ದರು.