ಹಿರಿಯೂರು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಅವರು ಅನುವಾದಿಸಿರುವÀ ಗುರುವಾಗ್ವಿಮಲಾವಳಿ ನಾಮ ಕೃತಿಯನ್ನು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಅವರು ಚಿತ್ರದುರ್ಗದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು. ಎಂ. ನಾಸೀರುದ್ದೀನ್, ಡಾ.ಬಿ. ರಾಜಶೇಖರಪ್ಪ, ಎನ್.ಆರ್. ತಿಪ್ಪೇಸ್ವಾಮಿ, ವೆಂಕಟೇಶ್, ಸಿ.ಎಂ. ತಿಪ್ಪೇಸ್ವಾಮಿ ಇತರರು ಇದ್ದರು. 
ಚಿತ್ರದುರ್ಗ

ಗುರುವಾಗ್ವಿಮಲಾವಳಿ ನಾಮ ಕೃತಿ ಪ್ರವಾಸ ಕಥನವುಳ್ಳ ಅಪರೂಪದ ಗ್ರಂಥ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮಲ್ಲೇಪುರA ಜಿ.ವೆಂಕಟೇಶ್ ಅಭಿಮತ
  • ಸಿ.ಎಂ. ತಿಪ್ಪೇಸ್ವಾಮಿ ಅನುವಾದಿತ ಕೃತಿ
  • ಹದಿಮೂರನೇ ಶತಮಾನದ ಟಿಬೆಟ್ ಪ್ರವಾಸಿ
ಚಿತ್ರದುರ್ಗ: ಹದಿಮೂರನೇ ಶತಮಾನದ ಟಿಬೆಟ್ ಪ್ರವಾಸಿ ಬೌದ್ಧ ಭಿಕ್ಷು ಧರ್ಮಸ್ವಾಮಿ ಅವರ ಜೀವನ ಚರಿತ್ರೆ `ಗುರುವಾಗ್ವಿಮ ಲಾವಳಿ ನಾಮ' ಅನುವಾದಿತ ಕೃತಿ ಪ್ರವಾಸ ಕಥನವುಳ್ಳ ಅಪರೂಪದ ಗ್ರಂಥವಾಗಿದೆ ಎಂದು ಬೆಂಗಳೂರು ಸಂಸ್ಕೃತ ವಿವಿ ವಿ ಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.
ನಗರದ ಸಿದ್ಧ ಪ್ರಕಾಶನ ಸಂಸ್ಥೆ ಡಯಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯೂರು ಕ್ಷೇತ್ರ ಶಿಕ್ಷಣಾಽಕಾರಿ ಸಿ. ಎಂ.ತಿಪ್ಪೇಸ್ವಾಮಿ ಅವರು ಅನುವಾದಿಸಿರುವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಗುರುವಾಗ್ವಿಮಲಾವಳಿ ನಾಮ ಓದಲು ಎಲ್ಲ ಚೊಕ್ಕವಾದ ಪುಸ್ತಕವಾಗಿದೆ ಎಂದರು.
ಟಿಬೆಟ್‌ನಿಂದ ನೇಪಾಳಕ್ಕೆ ಬಂದು ಅಲ್ಲಿಂದ ಭಾರತದ ಬಿಹಾರ ಪ್ರಾಂತ್ಯದಲ್ಲಿ ಓಡಾಟ ನಡೆಸಿದ ಅಧ್ಯಯನದ ವಿವರ ಈ ಕೃತಿಯ ಲ್ಲಿದೆ. ಪರಕೀಯರ ಆಳ್ವಿಕೆಯಿಂದ ಭಾರತ ಜರ್ಜರಿತವಾಗಿದ್ದ ಕಾಲದಲ್ಲಿ ಧರ್ಮಸ್ವಾಮಿ ನಮ್ಮ ದೇಶಕ್ಕೆ ಬಂದು ಅಧ್ಯಯನ ನಡೆಸಿ ಸಂಸ್ಕೃತದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಡಯಟ್ ಉಪ ನಿರ್ದೇಶಕ ಎಂ. ನಾಸಿರುದ್ದೀನ್ ಮಾತನಾಡಿ, ಕೆಲಸದ ಒತ್ತಡದ ನಡುವೆ ಗುರುವಾಗ್ವಿಮಲಾವಳಿಯನ್ನು ಕನ್ನಡಕ್ಕೆ ತಿಪ್ಪೇಸ್ವಾಮಿ ತರ್ಜುಮೆ ಮಾಡಿದ್ದಾರೆ. ಕಚೇರಿ ಕೆಲಸದ ನಡುವೆಯೂ ಅವರು ಹೊರತಂದಿರುವ ಈ ಪುಸ್ತಕವನ್ನು ಎಲ್ಲರೂ ಓದ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಧರ್ಮ ಸಂಘರ್ಷ, ಕಾಡು ಪ್ರಾಣಿಗಳ ಕಾಟ, ದ ರೋಡೆಕೋರರ ಭಯ ಇಂತಹ ಪರಿಸ್ಥಿತಿಯಲ್ಲಿ ಧರ್ಮಸ್ವಾಮಿ ಭಾರತದಲ್ಲಿ ಬೌದ್ಧ ಭಿಕ್ಷುವಾಗಿ ಓಡಾಡಿದರು. ಯಾವ್ಯಾವ ನಾಡು, ಊರು ಸುತ್ತಿ ಅಧ್ಯಯನ ನಡೆಸಿದ್ದಾರೆ ಎನ್ನುವುದನ್ನು ಗುರುವಾಗ್ವಿಮಲಾವಳಿ ಪುಸ್ತಕದಲ್ಲಿ ಬರೆದಿದ್ದಾರೆ ಎಂದರು.
ಕೃತಿಕಾರ ತಿಪ್ಪೇ ಸ್ವಾಮಿ ಮಾತನಾಡಿ, ಅನುವಾದದ ವೇಳೆ ಎದುರಾದ ಸವಾಲು, ಅನುಭವಗಳನ್ನು ಹಂಚಿಕೊA ಡ ರು.ಶಿಕ್ಷಣಾಽ ಕಾರಿ ಎನ್.ಆರ್. ತಿಪ್ಪೇಸ್ವಾಮಿ, ಡಿವೈಪಿಸಿ ವೆಂಕಟೇಶ್ ಮಾತನಾಡಿದರು.