ಚಿತ್ರದುರ್ಗದಲ್ಲಿ ಸೋಮವಾರ ಜರುಗಿದ ಬಾಬು ಜಗಜೀವನ್‌ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನ ಆಚ ರಣೆ ಪೂರ್ವಭಾವಿ ಸಭೆಯಲ್ಲಿ ಡಿಸಿ.ಟಿ. ವೆಂಕಟೇಶ್, ಶಿವಕುಮಾರ್, ಬಿ.ಟಿ. ಕುಮಾರಸ್ವಾಮಿ, ದಲಿತ ಪರ ಸಂಘಟನೆಗಳ ಪ್ರಮುಖರು, ವಕೀಲರು, ಅಽಕಾರಿಗಳು ಇದ್ದರು. 
ಚಿತ್ರದುರ್ಗ

ಬಾಬೂಜಿ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಸಾಧಕರು, ಪ್ರತಿಭಾವಂಥ ವಿದ್ಯಾರ್ಥಿಗಳಿಗೆ ಸನ್ಮಾನ
  • ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್ ಹೇಳಿಕೆ
  • ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ
ಚಿತ್ರದುರ್ಗ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮ ಎಂದು ನೋಡದೆ ಅತ್ಯಂತ ಅರ್ಥಪೂರ್ಣ, ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಉಭಯ ಮಹನೀಯರ ಜಯಂತಿ ಆಚರಣÉ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏಪ್ರಿ ಲ್ ೫ರಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಡಾ. ಬಾಬು ಜಗಜೀವನ್‌ರಾಮ್, ಏಪ್ರಿಲ್ ೧೪ರಂದು ತರಾ ಸು ರಂಗಮAದಿರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ ಆಚರಿಸಲಾಗುವುದು. ಅಂಬೇಡ್ಕರ್ ಜನ್ಮದಿನಾಚರಣೆ ಸಂದರ್ಭ ದಲ್ಲಿ ನವೀಕೃತ ರಂಗಮAದಿರ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಅವಕಾಶ ವಂಚಿತರಿಗೆ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಈ ಇಬ್ಬರು ಮಹನೀಯರ ಕೊಡುಗೆ ಮಹತ್ವವಾದದು. ಸಮಾಜದ ಪ್ರತಿಯೊಂದು ವರ್ಗದವರೂ ಸಂತಸದಿAದ ಜಯಂತ್ಯುತ್ಸದಲ್ಲಿ ಪಾಲ್ಗೊಳ್ಳಬೇಕು. ಜಯಂತ್ಯುತ್ಸವಗಳAದು ಪೋಲೀಸ್ ಇಲಾಖೆ ಸಲಹೆಯಂತೆ ಮೆರವಣಿಗೆ ಮಾರ್ಗ ನಿಗದಿಗೊಳಿಸಲಾಗುವುದು. ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿರುತ್ತವೆ ಎಂದು ತಿಳಿಸಿದರು.
ಇಬ್ಬರೂ ಮಹನೀಯರ ಜೀವನ ಸಾಧನೆ ಕುರಿತ ಕರ ಪತ್ರಗಳನ್ನು ಜಯಂತಿಗಳAದು ವಿತರಿಸಲಾಗುವುದು. ಉಪನ್ಯಾಸಕ್ಕಾಗಿ ಸಮುದಾಯದ ಮುಖಂಡರು ಸೂಚಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಅಂಬೇಡ್ಕರ್ ಜಯಂತಿಯAದು ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು.
ಕಳೆದ ವರ್ಷದಂತೆ ಈ ಬಾರಿಯೂ ಸಮಾಜಸೇವಕರು, ಸಾಧಕರನ್ನು ಗೌರವಿಸಲಾಗುವುದು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಶೋಷಿತ ವರ್ಗಕ್ಕೆ ಸೀಮಿತಗೊಳಿಸುವ ಮನೋಭಾವ ಬದಲಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಸಮು ದಾಯಗಳ ಮಠಗಳ ಸ್ವಾಮೀಜಿಗಳನ್ನು ಜಯಂತಿಗೆ ಆಹ್ವಾನಿಸಬೇಕು. ಐತಿಹಾಸಿಕ ಕೋಟೆ ಮುಂಭಾಗದಿAದ ಮೆರವಣಿಗೆ ಆಯೋಜಿಸಬೇಕು.
ಸಚಿವರು, ಶಾಸಕರು, ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಜನಪ್ರತಿನಿಽಗಳು, ಜಿಲ್ಲಾ ಮಟ್ಟದ ಅಽಕಾರಿ ಗಳು, ಸರ್ಕಾರಿ ನೌಕರರು ಜಯಂತಿಗಳಲ್ಲಿ ಪಾಲ್ಗೊಳ್ಳಬೇಕು. ವÊತ್ತಿಪರ ಕಲಾ ಸಂಘಗಳ ಕ ಲಾವಿದರನ್ನು ಆಹ್ವಾನಿಸಿ ನಾಡಗೀತೆ ಹಾಗೂ ಗೀತ ಗಾಯನ ಆಯೋಜಿಸಬೇಕು.
ನಗರದ ರಸ್ತೆಗೆ ಡಾ.ಬಾಬು ಜಗಜೀವನ್‌ರಾಮ್ ಅವ ರ ಹೆಸರು ಇಡುವಂತೆ ಮತ್ತು ನಗರದಲ್ಲಿ ಬಾಬು ಜಗಜೀವನರಾಂ ಅವರ ಪುತ್ಥಳಿ ಸ್ಥಾಪಿಸುವಂತೆ ದಲಿತ ಮುಖಂಡರು ಜಿಲ್ಲಾಽಕಾರಿಯನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಽಕಾರಿ ನಿಯಮಗಳ ಚೌಕಟ್ಟಿನಲ್ಲಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಜಿಪಂ ಸಿಇಒ ಡಾ.ಎಸ್. ಆಕಾಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖÉ ಡಿಡಿ ಮಲ್ಲಿಕಾರ್ಜುನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ದಲಿತ ಪರ ಸಂಘಟನೆಗಳ ಮುಖಂಡ ರಾದ ಕೆ. ರಾಜಪ್ಪ, ಹನುಮಂತಪ್ಪ ದುರ್ಗ, ತಿಪ್ಪೇಸ್ವಾಮಿ, ಅವಿನಾಶ್, ಡಿ.ಒ. ಮುರಾರ್ಜಿ, ನರೇನಹಳ್ಳಿ ಅರುಣ್‌ಕುಮಾರ್, ವಿಶ್ವ ನಾರಾಯಣಮೂರ್ತಿ, ಗುರುಮೂರ್ತಿ, ಕೆ.ಟಿ. ಶಿವಕುಮಾರ್ ಸೇರಿ ನಾನಾ ಮುಖಂಡರು, ವಕೀಲರು, ಅಽಕಾರಿಗಳು ಇದ್ದರು.