ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಬಸವೇಶ್ವರರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಡಾ. ಬಸವಪ್ರಭು ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಎಚ್. ಬಿಲ್ಲಪ್ಪ, ಗೋವಿಂದ ಎಂ. ಕಾರಜೋಳ, ಶಿವಯೋಗಿ ಸಿ. ಕಳಸದ, ಕೆ.ಎಸ್. ನವೀನ್, ಶಿವರಶ್ಮಿ ಅಕ್ಕ, ಎಂ.ಕೆ. ತಾಜ್‌ಪೀರ್ ಇತರರಿದ್ದರು. 
ಚಿತ್ರದುರ್ಗ

ಮನುಷ್ಯ ಮಹಾದೇವ ಆಗಬಲ್ಲ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ನ್ಯಾಯ ಸಂವಿಧಾನದಿAದ ಸಾಧ್ಯ
  • ವಿಶ್ರಾಂತ ನ್ಯಾ.ಎಚ್. ಬಿಲ್ಲಪ್ಪ ಹೇಳಿಕೆ
  • ವಿಚಾರ ಗೋಷ್ಠಿ
ಚಿತ್ರದುರ್ಗ: ಮನುಷ್ಯ ಮಹಾದೇವನಾಗಿ ಬದುಕಬಹುದೆಂಬ ಅತ್ಯುತ್ತಮ ಸಂದೇಶವನ್ನು ಬಸವಾದಿ ಶರಣರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ಬಸವ ಜಯಂತಿ ಅಂಗವಾಗಿ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ಸ್ಥಲದ ನೆಲೆಯಲ್ಲಿ ಬಸವಣ್ಣನ ವಚನ ಸಾಹಿತ್ಯ, ಭಾರತೀಯ ಸಂವಿಧಾನ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ಮನುಷ್ಯರನ್ನು ಮನುಷ್ಯರನ್ನಾಗಿ, ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ದೃಷ್ಟಿಕೋನ ಶರಣರದ್ದಾಗಿತ್ತು. ಶರಣರ ಜೀವನ ವಿಧಾನವೇ ಸಾಮಾಜಿಕ ನ್ಯಾಯದ ಪರವಾಗಿದೆ. ಸಂವಿಧಾನದ ಬಹುದೊಡ್ಡ ಆಶಯವೂ ಇದೇ ಆಗಿದೆ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನವು ಸಮಾನತೆ, ಸಾಮಾಜಿಕ ನ್ಯಾಯ ಕೊಡು ವಂತಹದ್ದಾಗಿದೆ ಎಂದ ಅವರು, ಆಧುನಿಕ ಜಗತ್ತಿನಲ್ಲಿ ವಿಪರೀತ ಆಸೆಗಳು ಮಾನವನ ದುಃಖಕ್ಕೆ ಕಾರಣವಾಗಿವೆ. ಈ ಸಂದೇಶ ಸಾರಿದ ಬುದ್ಧನ ವಿಚಾರಕ್ಕೂ ವಚನಕಾರರ ಬದುಕಿಗೂ ಅತ್ಯಂತ ಸಾಮ್ಯತೆ ಇದೆ ಎಂದು ಹೇಳಿದರು.
ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣ ಶೋಷಣೆರಹಿತ ಸಮಾಜ ನಿರ್ಮಾಣ ಕ್ಕಾಗಿ ಲಿಂಗಾಯತ ಧರ್ಮ ಕಟ್ಟಿದರು. ಈ ನೆಲದಲ್ಲಿ ಇಂದಲ್ಲ ನಾಳೆ ಅವರ ಕಲ್ಯಾಣದ ನಾಡು ಬಂದೇ ಬರುತ್ತದೆ ಎಂಬ ಸರ್ವಜ್ಞನ ಮಾತುಗಳು ನಿಜವಾಗುತ್ತಿದೆ. ಲಿಂಗ, ವರ್ಣ ಭೇದವಿಲ್ಲದೆ ಸಮಾಜ ಕಟ್ಟುವುದು ನಮ್ಮೆಲ್ಲರ ಆಶಯ ಆಗಬೇಕಾಗಿದೆ ಎಂದು ಸಲಹೆ ನೀಡಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಜನಸಾಮಾನ್ಯರಲ್ಲಿ ನಾವಿಂದು ಬಸವಾದಿ ಶಿವಶರಣರ ವಚನಗಳು, ಬದುಕಿನ ಆ ಶಯಗಳು ಹಾಗೂ ಸಮ ಸಮಾಜದೆಡೆ ಜಾಗೃತಿ ಮೂಡಿಸುವಂಥ ಕೆಲಸ ಮಾಡಬೇಕಿದೆ ಎಂದರು. ಹೊಳಲ್ಕೆರೆಯ ಡಾ.ಜಿ.ವಿ. ಮಂಜುನಾಥ್, ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿದರು.
ಇದೇ ವೇಳೆ ಪತ್ರಿಕಾ ವಿತರಕ ತಿಪ್ಪೇಸ್ವಾಮಿ ಸೇರಿ ೨೩ ಮಂದಿ ಸಾಧಕರಿಗೆ `ಬಸವ ಬಂಧು ಅಭಿದಾನ' ಪ್ರದಾನ ಮಾಡ ಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಾಲ್ಯ ವಿವಾಹ ಮುಕ್ತ ಜಿಲ್ಲೆ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.
ಡಾ. ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಹಡಿ ಶಿವಮೂರ್ತಿ, ಸಿದ್ದಪ್ಪ, ಹನುಮಲಿ ಷಣ್ಮುಖಪ್ಪ, ಎಚ್.ಎಂ. ತಿಪ್ಪೇಸ್ವಾಮಿ, ಶಿವಪ್ರಕಾಶ್, ಎಸ್.ವಿ. ನಾಗರಾಜಪ್ಪ, ಎಸ್. ಷಡಕ್ಷರಯ್ಯ, ಪುಷ್ಪಾ, ಇಂದಿರಾ, ಕೆ.ಟಿ. ಗಂಗಾಧರ, ಶೈಲಾ, ಪಿ. ವೀರೇಂದ್ರಕುಮಾರ್ ಇದ್ದರು. ಡಾ.ಕೆ.ಎಂ. ವೀರೇಶ್ ಸ್ವಾಗತಿಸಿದರು. ಶೈಲಜಾ ವಂದಿಸಿದರು.
ರAಗೋಲಿ ಸ್ಪರ್ಧೆ, ಬಹುಮಾನ ವಿತರಣೆ
ಚುಕ್ಕಿ ರಂಗೋಲಿ ಸ್ಪರ್ಧೆ: ಪಿ. ಪುಷ್ಪಾ (ಪ್ರ), ಸಿ.ಜೆ. ಉಷಾ (ದ್ವಿ), ಶಾಂತಮ್ಮ (ತೃ), ರಾಽಕಾ ರಾಜೀವ್ ಪೃಥ್ವಿ (ಸಮಾಧಾನಕರ). ಚಿತ್ರ ರಂಗೋಲಿ: ಆರ್. ವೀರೇಂದ್ರ (ಪ್ರ), ಜಿ.ಎಸ್. ಯಶೋದಾ (ದ್ವಿ), ಜಿ.ಎನ್. ನವಿತಾ (ತೃ), ಜ್ಯೋತಿ ಬಸವರಾಜ್(ಸಮಾಧಾನಕರ). ವೇಷ ಭೂಷಣ (೧೮ ವರ್ಷದೊಳಗಿನವರಿಗೆ ಸ್ಪರ್ಧೆ): ಜೆ.ಎನ್. ನಮಿತಾ (ಪ್ರ), ಚೇತನಾ (ದ್ವಿ), ದೀಪ್ತಿ (ತೃ), ವರ್ಷಿತಾ (ಸಮಾಧಾನಕರ).
೧೮ ವರ್ಷ ಮೇಲ್ಪಟ್ಟು: ಭಾಗ್ಯಲಕ್ಷಿ÷್ಮÃ (ಪ್ರ), ರಾಽಕಾ ರಾಜೀವ್(ದ್ವಿ), ಜ್ಯೋತಿಲಕ್ಷಿ÷್ಮÃ (ತೃ) ಹಾಗೂ ಕವಿತಾ ಸಿದ್ದೇಶ್ ಸಮಾಧಾನಕರ ಬಹುಮಾನ ಪಡೆದರು.