ಬಿಜೆಪಿ ಸಂಸದ ಗೋವಿಂದ ಎಂ.ಕಾರಜೋಳ ಅವರು ಚಿತ್ರದುರ್ಗದ ತಮ್ಮ ನಿವಾಸದಲ್ಲಿ ಶುಕ್ರವಾರ ಬಿಹಾರ ವಿಧಾನಸಭಾ ಚುನಾ ವಣೆ ಗೆಲುವಿನ ಹಿನ್ನೆಲೆ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ,ಸಂಪತ್‌ಕುಮಾರ್,ರವೀAದ್ರಪ್ಪ ಇತರರು ಇದ್ದರು.
- ಗೋವಿಂದ ಎಂ.ಕಾರಜೋಳ ಅಭಿಮತ
- ಸಿಹಿ ಹಂಚಿ ಸಂಭ್ರಮಿಸಿದ ಸಂಸದರು
ಚಿತ್ರದುರ್ಗ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ದೊರೆತಿರುವ ಮೂರನೇ ಎರಡರಷ್ಟು ಬಹುಮತ,ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತಕ್ಕೆ ಬಿಹಾರ ಜನರ ಒಪ್ಪಿಗೆಯ ಮುದ್ರೆಯಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು. ಎನ್‌ಡಿಎ ಜಯಭೇರಿ ಹಿನ್ನೆಲೆಯಲ್ಲಿ ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಪಕ್ಷದ ಕರ‍್ಯಕರ್ತರು,ಅಭಿಮಾನಿಗಳಿಗೆ ಸಿಹಿ ಹಂಚಿ ಸಂಸದರು ಸುದ್ದಿ ಗಾರರೊಂದಿಗೆ ಮಾತನಾಡಿದರು.
ಗುಜರಾತ್ ಸಿಎಂ,ಪ್ರಧಾನಿ ಆಗಿ ಮೋದಿ ಅವರು ಈವರೆಗೆ ಕಳಂಕ ರಹಿತ ಆಡಳಿತ ಕೊಟ್ಟಿದ್ದಾರೆ. ಇದನ್ನು ಮೆಚ್ಚಿದ ಬಿಹಾರ ಜನರು ಎನ್‌ಡಿಎ ಮೈತ್ರಿ ಕೂಟವನ್ನು ಮತ್ತೊಮ್ಮೆ ಅಽಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ನಾಯಕರು ಮೋದಿ ಹಾಗೂ ಸಾಂವಿಧಾನಿಕ ಸಂಸ್ಥೆ ವಿರುದ್ಧ ಹೊರೆಸಿದ ಸುಳ್ಳು ಆರೋಪಗಳನ್ನು ಗಮನಿಸಿದ ದೇಶದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಬುದ್ಧಿ ಕಲಿಯದ ಕಾಂಗ್ರೆಸ್ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶ ಶೇ.೭೦ ಯುವ ಜನರು ಈ ನಡೆಯನ್ನು ಗಮ ನಿಸಿದ್ದರಿಂದಾಗಿ ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯಾಗಿದೆ.
ಆರ್‌ಜೆಡಿ ಸ್ವತಂತ್ರವಾಗಿ ಸ್ಪಽðಸಿದ್ದರೆ ಮತ್ತಷ್ಟು ಸ್ಥಾನಗಳು ಲಭಿಸುತ್ತಿದ್ದವು. ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್ ಗಾಂಽ ಅವರನ್ನುನಂಬಿ ಘಟಬಂಧನ್ ಸೋಲು ಅನುಭವಿಸಿದೆ. ನದಿಯಲ್ಲಿ ಧುಮುಕಿ ಮೀನು ಹಿಡಿದಿದ್ದ ರಾಹುಲ್‌ಗಾಂಽ ಅಂದೇ ದೇಶಕ್ಕೆ ಸೋಲಿನ ಸೂ ಚನೆ ನೀಡಿದ್ದರು. ಮುಂಬರಲಿರುವ ವಿವಿಧ ರಾಜ್ಯಗಳ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ನಮ್ಮ ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಸೋನಿಯಾ ಗಾಂಽ, ಪ್ರಿಯಾಂಕಾಗಾAಽ,ರಾಹುಲ್‌ಗಾAಽ ಅವರು ಅಽಕಾರ ನಡೆಸುತ್ತಿದ್ದಾರೆ. ಕುರ್ಚಿ ಕಾಳಗ ನಡೆಯುತ್ತಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಶೀಘ್ರ ಪಥನವಾಗಲಿದೆ ಎಂದು ಭವಿಷ್ಯ ನುಡಿದರು.