ಚಿತ್ರದುರ್ಗದಲ್ಲಿ ಮಂಗಳವಾರ ಜರುಗಿದ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವದಲ್ಲಿ ಹುರುಳಿ ಎಂ.ಬಸ ವರಾಜ್, ಆರ್.ಶಿವಣ್ಣ, ಎಂ.ಎ. ಸೇತುರಾಮ್, ಗೋವಿಂದರಾಜ್, ಎಂ.ಜಿ. ಸೂರ್ಯನಾರಾಯಣ, ಪ್ರಹ್ಮಾದ್, ಸೋಮಶೇಖರ್ ಇತರರು ಇದ್ದರು. -----------
- ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಭರವಸೆ
- ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
- ಶ್ರೀ ಯೋಗಿ ನಾರೇಯಣ ಯತ್ರೀಂದ್ರರ ಜಯಂತಿ ಆಚರಣೆ
ಚಿತ್ರದುರ್ಗ: ಶ್ರೀ ಯೋಗಿ ನಾರೇಯಣ ಯತೀಂದ್ರರು(ಕೈವಾರ ತಾತಯ್ಯ)ಸಾಮಾಜಿಕ ಕಳಕಳಿ ಹೊಂದಿದ್ದ ಮಹಾನ್ ಪುರುಷ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ .ಬಸವರಾಜ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕೈವಾರ ತಾತಯ್ಯ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಜನಿಸುತ್ತಲೇ ತಂದೆ
ತಾಯಿಯನ್ನು ಕಳೆದುಕೊಂಡಿದ್ದ ತಾತಯ್ಯ ಅವರು, ಸಂಸಾರಿಕ ಜೀವನ ತೊರೆದು ಅಧ್ಯಾತ್ಮದ ಮಾರ್ಗದಲ್ಲಿ ಸಾಗಿದರು. ತೆಲುಗು, ಕನ್ನಡದಲ್ಲಿ ಹಲವು ಕೃತಿ ರಚನೆಯೊಂದಿಗೆ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಮುನ್ಸೂಚಿಸುವ ಕಾಲಜ್ಞಾನ ಕೃತಿಯನ್ನೂ ರಚಿಸಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಕೈವಾರ ಕ್ಷೇತ್ರದ ಅಂತಾ ರಾಷ್ಟಿçÃಯ ಪ್ರಸಿದ್ಧಿಗೆ ಅಲ್ಲಿನ ಗದ್ದುಗೆ ಮತ್ತು ತಾತಯ್ಯನವರ ತತ್ವಗಳೇ ಕಾರಣ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವುದು ಪಾಲಕರ ಜಬಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಈ ಹಿಂದೆ ಸಾಂಪ್ರದಾಯಕ ಬಳೆಗಾರ ವೃತ್ತಿಗೆ ಸೀಮಿತ ವಾಗಿದ್ದ ಬಲಿಜ ಸಮಾಜದ ಪರಿಸ್ಥಿತಿ ಇಂದು ಬದಲಾಗಿದೆ. ಶಿಕ್ಷಣ ಪಡೆದು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭಿವÊದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಶ್ರೀ ಯೋಗಿನಾರಾಯಣ ಯತೀಂದ್ರ ಬಲಿಜ ಸಂಘದ ಅಧ್ಯಕ್ಷ ಎಂ.ಎ. ಸೇತುರಾಮ್ ಮಾತನಾಡಿ, ಪ್ರತಿ ವರ್ಷವೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಒಗ್ಗೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಸಮಿತಿ ರಚಿಸಲಾಗುವುದು. ಆರ್ಥಿಕವಾಗಿ ಹಿಂದುಳಿರುವ ಸಮಾಜದ ವಿದ್ಯಾರ್ಥಿಗಳು ಸಂಘಕ್ಕೆ ಮನವಿ ಸಲ್ಲಿಸಿದರೆ,ಗರಿಷ್ಠ ಆರ್ಥಿಕ ನೆರವು ನೀಡಲಾಗುವುದೆಂದು ಭರ ವಸೆ ನೀಡಿದರು.
ಎಸ್‌ಎಸ್‌ಎಲ್‌ಸಿ, ಸೆಕೆಂಡ್ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ ಸ್ವಾಗತಿಸಿದರು. ಚಿತ್ರದುರ್ಗದ ಹರೀಶ್ ತಂಡದವರು ಗೀತ ಗಾಯನ ನಡೆಸಿಕೊಟ್ಟರು. ಡಾ.ನವೀನ್‌ಮಸ್ಕಲ್ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಕೈವಾರ ತಾತಯ್ಯ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗಾಂಽವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ ಮೂಲಕ ಮೆರವಣಿಗೆ ವಾಲ್ಮೀಕಿ ಭವನ ತಲುಪಿತು.
ಕೈವಾರ ತಾತಯ್ಯ ಭಾವಚಿತ್ರದೊಂದಿಗೆ ಜ್ಯೋತಿಬಾ -ÀÅಲೆ, ಸಾವಿತ್ರಿಬಾಯಿ ಫುಲೆ, ಶ್ರೀ ಕÊಷ್ಣದೇವರಾಯ ಹಾಗೂ ಬಲಿಚಕ್ರವರ್ತಿ ಭಾ ವಚಿತ್ರಗಳ ಮೆರವಣಿಗೆಯೂ ಜರುಗಿತು.
ತಾಲೂಕು ಯೋಗಿನಾರಾಯಣ ಯತೀಂದ್ರ ಬಲಿಜ ಸಂಘದ ಅಧ್ಯಕ್ಷ ಎಂ.ಜಿ.ಸೂರ್ಯನಾರಾಯಣ,ಯೋಗಿನಾರಾಯಣ ಸೌಹಾ ರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಹ್ಲಾದ್,ಬೊಮ್ಮೇನಹಳ್ಳಿ ಶ್ರೀ ಯೋಗಿನಾರಾಯಣ ಯತೀಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಎಸ್. ಸೋಮಶೇಖರ್,ಜಿಪಂ ಸಹಾಯಕ ನಿರ್ದೇಶಕ ದಾದಾಪೀರ್ ಹಾಗೂ ಸಣ್ಣಯಲ್ಲಪ್ಪ,ವಿರೂಪಾಕ್ಷಪ್ಪ ಬೊಮ್ಮೇನಹಳ್ಳಿ ಮತ್ತಿತರ ಬಲಿಜ ಸಂಘದ ಮುಖಂಡರು,ಸೇರಿದAತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಯೋಗಿ ನಾರೇಯಣರ ಬದುಕು ಸಮಾಜಕ್ಕೆ ಮಾದರಿ
ಕಾಲe್ಞÁನಿ ಎಂದೇ ಹೆಸರಾದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಮಂಗಳವಾರ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ೩೦೦ನೇ ವರ್ಷದ ಯೋಗಿ ನಾರೇಯಣ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಕಾಲಮಾನ ೧೮ನೇ ಶತಮಾನ ಎನ್ನಲಾಗಿದೆ. ಲೌಕಿಕ e್ಞÁನ ಮತ್ತು ಅವರು ಬರೆದ ಕಾಲe್ಞÁನದ ಮೂಲಕ ಸಮಾಜದಲ್ಲಿ ಚಿರಪರಿಚಿತರಾಗಿದ್ದಾರೆ. ಈ ದೇಶವನ್ನು ಪರಕೀಯರು ಆಳುತ್ತಾರೆ ಎನ್ನುವ ಅವರ ಭವಿಷ್ಯ ಸತ್ಯವಾಗಿದೆ ಎಂದರು.
ಜಗತ್ತಿನಲ್ಲಿ ಅಽಕಾರ ನಡೆಸಿದವರು ಕಾಲಕ್ರಮೇಣ ಜನಮನದಿಂದ ಮರೆಯಾಗುತ್ತಾರೆ. ಆದರೆ, ಸಾಧಕರು ಮತ್ತು ಲೋಕದ ಬದುಕನ್ನು ಅರ್ಥೈಸಿಕೊಂಡ ಮಹನೀಯರನ್ನು ಸಮಾಜ ಸ್ಮರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮೊದಲ ಬಾರಿಗೆ ಶಾಸಕನಾದ ಅವಽಯಲ್ಲಿ ಯೋಗಿ ನಾರೇಯಣ ಯತೀಂದ್ರ ಭವನ ನಿರ್ಮಾಣಕ್ಕೆ ೫೦ ಲಕ್ಷ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ಈಗಾಗಲೇ ೧೦ ಲಕ್ಷ ರೂ.ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲಾಗಿದೆ. ಕೂಡಲೇ ಉಳಿದ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ರೇಹಾನ್ ಪಾಷ, ತಾಲೂಕು ಯೋಗಿ ನಾರೇಯಣ ಯತೀಂದ್ರ ಸಮಿತಿ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿದರು. ತಾಪಂ ಇಒ ಎಚ್. ಶಶಿಧರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ರೈತ ಮುಖಂಡ ಕರೀಕೆರೆ ತಿಪ್ಪೇಸ್ವಾಮಿ, ಬಿ.ಸಿ. ಚಿದಾನಂದ ಮೂರ್ತಿ, ವೆಂಕಟೇಶ್ ಮೂರ್ತಿ, ನಿರಂಜನ ಮೂರ್ತಿ, ಸುರೇಶ್ ಬಾಬು ಇದ್ದರು.