ಎಸ್‌ಐಆರ್ ಕುರಿತಂತೆ ಮತದಾರರ ಜಾಗೃತಿಗೆ ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸೈಕಲ್‌ಜಾಥಾ, ವಾಕ್‌ಥಾನ್‌ಗೆ ಜಿಪಂ ಸಿಇಒ ಡಾ.ಎಸ್.ಆಕಾಶ್ ಚಾಲನೆ ನೀಡಿದರು. ಎಂ. ಬಾಬು, ಸಿ.ಎಸ್. ಗಾಯತ್ರಿ, ಸುಮಾ, ಎಂ.ಆರ್. ಮಂಜುನಾಥ್ ಇತರರು ಇದ್ದರು.
- ಮನೆಗೆ ಬಂದ ಗಣತಿ ನಮೂನೆ ಭರ್ತಿ ಮಾಡಿ ಬಿಎಲ್‌ಒಗೆ ಕೊಡಿ
- ಮತದಾರರಿಗೆ ಜಿಪಂ ಸಿಇಒ ಡಾ.ಎಸ್.ಆಕಾಶ್ ಮನವಿ
- ನಗರದಲ್ಲಿ ಜಾಗೃತಿಗಾಗಿ ಸೈಕಲ್‌ಜಾಥಾ,ವಾಕಥಾನ್
ಚಿತ್ರದುರ್ಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್-೨೦೨೬)ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದ್ದು, ಅರ್ಹ ಮತ ದಾರರೆಲ್ಲರೂ ತಮ್ಮ ಮನೆಗೆ ಬಂದಿರುವ ಗಣತಿ ನಮೂನೆ ಸರಿಯಾಗಿ ಭರ್ತಿ ಮಾಡಿ, ಮತಗಟ್ಟೆ ಅಽಕಾರಿಗಳಿಗೆ (ಬಿಎಲ್‌ಒ)ಸಲ್ಲಿಸಬೇಕು ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಮತದಾರರಿಗೆ ಮನವಿ ಮಾಡಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಎಸ್‌ಐಆರ್ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ನಗರದ ಜಿಪಂ ಆವರಣದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾ ಹಾಗೂ ವಾಕಥಾನ್ ಉದ್ಘಾಟಿಸಿ ಅವರು ಮಾತನಾಡಿ, ೨೦೦೨ರ ನಂತರದಲ್ಲಿ ಬÊಹತ್ ಮಟ್ಟದಲ್ಲಿ ಈಗ ಮತ್ತೊಮ್ಮೆ ಎಸ್‌ಐಆರ್ ನಡೆಯುತ್ತಿದೆ.
ಇದು ಮತದಾರರ ಪಟ್ಟಿಯಲ್ಲಿರುವ ದೋಷ ಸರಿಪಡಿಸಲು ದೊರೆತಿರುವ ಸುವರ್ಣಾವಕಾಶ. ಮತ ಚಲಾಯಿಸಲು ಅರ್ಹರಾಗಿ ರುವ ಎಲ್ಲರ ಮನೆಗೂ ಈಗಾಗಲೇ ಅರ್ಜಿ ತಲುಪಿರಬಹುದು. ಒಂದು ವೇಳೆ ತಲುಪದಿದ್ದರೆ ಶೀಘ್ರದಲ್ಲೇ ತಲುಪಲಿದೆ. ಮತ ದಾರರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ವಾಪಸ್ ನೀಡಬೇಕು ಎಂದು ವಿನಂತಿಸಿದರು.
ಮನೆಗಳಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕು. ತಂದೆ, ತಾಯಿ, ಕುಟುಂಬ ವರ್ಗದವರು ಹಾಗೂ ಮತ ದಾನದ ಹಕ್ಕು ಹೊಂದಿರುವ ನೆರೆಹೊರೆಯವರಿಗೆ ಎಸ್‌ಐಆರ್ ಬಗ್ಗೆ ತಿಳಿಸಬೇಕು. ಮನೆಗೆ ಬಂದಿರುವ ಅರ್ಜಿಯನ್ನು ಭರ್ತಿ ಮಾಡಿ ಬಿಎಲ್‌ಒಗೆ ನೀಡುವಂತೆ ಒತ್ತಾಯಿಸುವಂತೆ ವಿದ್ಯಾರ್ಥಿಗಳನ್ನು ಕೋರಿದರು.
ಜಿಪಂದಿಂದ ಆರಂಭವಾದ ಜಾಥಾ ಸ್ಟೇಡಿಯಂ ರಸ್ತೆ, ಬಿಡಿರಸ್ತೆ ಮೂಲಕ ಸಾಗಿ ಮದಕರಿ ನಾಯಕ ವÊತ್ತ, ಡಾ.ಬಿ.ಆರ್. ಅಂಬೇ ಡ್ಕರ್ ವÊತ್ತದ ಮೂಲಕ ಗಾಂಽ ವÊತ್ತದವರೆಗೂ ಸಾಗಿ ಒನಕೆ ಓಬವ್ವ ವÊತ್ತದಲ್ಲಿ ಸಮಾಪನಗೊಂಡಿತು.
ಜಿಪಂ ಡಿಎಸ್ ಎಂ. ಬಾಬು, ಮುಖ್ಯಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಸಹಾಯಕ ಯೋಜನಾಽಕಾರಿ ಸುಮಾ, ಡಿಡಿಪಿಐ ಎಂ.ಆರ್. ಮಂಜುನಾಥ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ರೇಖಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ.ವೈಶಾಲಿ, ಬಿಸಿಎಂ ಇಲಾಖೆ ಜಿಲ್ಲಾಽಕಾರಿ ಪುಷ್ಪಲತಾ ಭಾವಿಮಠ.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ಚಿತ್ರದುರ್ಗ ತಾಪಂ ಇಒ ರವಿಕುಮಾರ್, ಜಿಲ್ಲಾ ನರೇಗಾ ಐಇಸಿ ಸಮಾಲೋಚಕ ಎಂ. ಎಸ್. ರವೀಂದ್ರನಾಥ್, ಜಿಲ್ಲಾ ವಾಶ್ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್, ಅಗ್ನಿಶಾಮಕದಳದ ಅಽಕಾರಿ ಸೋಮಶೇಖ ರ್‌ಅಗಡಿ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಽಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು. ಎಸ್‌ಐಆರ್ ಕುರಿತು ಜಾಗೃತಿ ಘೋಷಣೆಗಳಿದ್ದ ಫಲಕಗಳನ್ನು ವಿದ್ಯಾರ್ಥಿಗಳು ಜಾಥಾದಲ್ಲಿ ಪ್ರದರ್ಶಿಸಿದರು.