ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಬಿ.ಟಿ. ಕುಮಾರಸ್ವಾಮಿ, ವೆಂಕಟೇಶ್‌ನಾಯ್ಕ್, ಪಿ.ಕೆ. ದಿನಕರ್, ಎಂ.ಆರ್. ಮಂಜುನಾಥ್, ಪಿ. ಶ್ರೀನಿವಾಸ್, ಭರತ್‌ಕಾಳಿಸಿಂಗೆ, ಎಸ್.ಲಕ್ಷಿ÷್ಮÃ ಇತರರು ಇದ್ದರು.
- ಅಗತ್ಯ ಸಿದ್ಧತೆಗೆ ಜಿಲ್ಲಾಽಕಾರಿ ತಾಕೀತು
- ಸಾಧಕ ಸರ್ಕಾರಿ ನೌಕರರಿಗೆ ಸನ್ಮಾನ
- ಪೂರ್ವಭಾವಿ ಸಭೆ
ಚಿತ್ರದುರ್ಗ: ನಗರದ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಜ.೨೬ರಂದು ಬೆಳಗ್ಗೆ ೯ಕ್ಕೆ ಗಣರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಸಂಭ್ರಮದಿAದ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಟಿ. ವೆಂಕಟೇಶ್ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಣರಾಜ್ಯೋತ್ಸವ ದಿನಾಚರಣೆ ದೇಶ ಪ್ರೇಮ, ದೇಶಭಕ್ತಿ ಹಾಗೂ ಭಾರತ ಸಂವಿಧಾನ ಆಚರಣÉಯ ಪ್ರತೀಕವಾಗಿದೆ. ಅರ್ಥಪೂರ್ಣ ಆಚರಣೆಗೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರಾಷ್ಟ ಧ್ವಜಾರೋಹಣ ನೆರವೇರಿಸುವರು.ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಿಸಬೇಕು. ಅಽಕಾರಿಗಳು ಖುದ್ದು ತೆರಳಿ ಜನಪ್ರತಿನಿಽಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮೈದಾನವನ್ನು ಸ್ವಚ್ಛಗೊಳಿಸಿ ಸಿಂಗರಿಸಬೇಕು.
ಕುಡಿಯುವ ನೀರಿನ ಟ್ಯಾಂಕರ್ ಬದಲು ಕಾರ್ಯಕ್ರಮದ ಸ್ಥಳದಲ್ಲಿ ಹತ್ತಾರು ಕಡೆ ಶುದ್ಧ ಕುಡಿಯುವ ನೀರಿನ ಕ್ಯಾನ್‌ಗಳು, ಲೋಟ ಗಳನ್ನು ಇಟ್ಟಿರಬೇಕು. ಗಣರಾಜ್ಯೋತ್ಸವದ ಮುನ್ನಾ ದಿನದಂದೇ ನಗರದ ಪ್ರಮುಖ ವÊತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದರು.
ಸಮಾರAಭದ ಪರೇಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೂರು ತಂಡಗಳಿಗೆ ವೇದಿಕೆಯಲ್ಲಿ ಪ್ರಶಸ್ತಿ ಪತ್ರ, ನೆನಪಿನ ಕಾಣಕೆ ನೀ ಡಿ ಗೌರವಿಸಲಾಗುವುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ೩ ನÊತ್ಯರೂಪಕಗಳನ್ನು ಪ್ರಸ್ತತ ಪಡಿಸಲು ಶಾಲಾ ಮಕ್ಕಳ ತಂಡಗಳನ್ನು ಆಯ್ಕೆ ಮಾಡಬೇಕು. ಸಂಜೆ ದೇಶಭಕ್ತಿ ಬಿಂಬಿಸುವ ಹಾಡು, ನÊತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಡಿಡಿಪಿಐ ಎಂ. ಆರ್. ಮಂಜುನಾಥ್ ಅವರಿಗೆ ಡಿಸಿ ಸೂಚಿಸಿದರು.
ವಿಶೇಷ ಸೇವೆ ಸಲ್ಲಿಸಿದ ಸರ್ಕಾರಿ ಅಽಕಾರಿ, ಸಿಬ್ಬಂದಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಎಸಿ, ಡಿವೈಎಸ್‌ಪಿ ನೇತ Êತ್ವದ ಆಯ್ಕೆ ಸಮಿತಿ ಸಾಧಕರನ್ನು ಗುರುತಿಸಲಿದೆ ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ವೆಂಕಟೇಶ್‌ನಾಯ್ಕ್, ಡಿವೈಎಸ್‌ಪಿ ಪಿ.ಕೆ. ದಿನಕರ್, ಡಿಆರ್ ಡಿವೈಎಸ್‌ಪಿ ಪಿ. ಶ್ರೀನಿವಾಸ್, ಆರ್‌ಟಿಒ ಭರತ್ ಕಾಳಿಸಿಂಗೆ, ನಗರಸಭೆ ಪೌರಾಯುಕ್ತೆ ಎಸ್. ಲಕ್ಷಿ÷್ಮÃ ಇತರರು ಇದ್ದರು.
ಪೂರ್ವಭಾವಿ ಸಭೆಗೆ ಗೈರಾದ ಜಿಲ್ಲಾ ಮಟ್ಟದ ಅಽಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಡಿಸಿ ನಿರ್ದೇಶಿಸಿದರು. ರಾಷ್ಟೀಯ ಹಬ್ಬಗಳ ಬಗ್ಗೆ ಅಽಕಾರಿಗಳು ತಾತ್ಸಾರ ತೋರುವುದು ಸರಿಯಲ್ಲ. ಗಣರಾಜ್ಯೋತ್ಸವದಲ್ಲಿ ಎಲ್ಲ ಅಽಕಾರಿ, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.