ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರಾಷ್ಟç ಧ್ವಜಾರೋಣ ನೆರವೇರಿಸಿದರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಎಂಎಲ್‌ಸಿ ಕೆ.ಎಸ್. ನವೀನ್, ಇನ್ನಿತರ ಗಣ್ಯರು ಇದ್ದರು.
- ಮಾರ್ಚ್ವೊಳಗೆ ಗೋನೂರುವರೆಗೆ ಭದ್ರಾ ನೀರು
- ಗ್ಯಾರಂಟಿಗಳಿAದ ಜನರ ಜೀವನ ಮಟ್ಟ ಸುಧಾರಣೆ
- ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
ಚಿತ್ರದುರ್ಗ: ನಮ್ಮ ಸಂವಿಧಾನ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಮಾನ ಬದುಕನ್ನು ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಜಿಲ್ಲಾಡಳಿತ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಭಾತೃತ್ವದ ನೆಲೆಗಟ್ಟಿನ ಮೇಲೆ ಸಂವಿಧಾನ ರಚನೆ ಆಗಿದೆ ಎಂದರು.
ಸ್ವತAತ್ರ ಭಾರತವನ್ನು ಮುನ್ನಡೆಸುವ ನೀತಿ, ನಿಯಮ, ಸಮಾನ ಹಕ್ಕುಗಳ ಪ್ರತಿಪಾದನೆಗೆ ಸಂವಿಧಾನದ ಅಗತ್ಯವಿತ್ತು. ಅದಕ್ಕಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ನಮ್ಮ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಇದ್ದದ್ದು ನಮಗೆ ಹೆಮ್ಮೆ ತರುವಂಥದ್ದು ಎಂದರು.
ಸಂವಿಧಾನದ ಪಿತಾಮಹ ಅಂಬೇಡ್ಕರ್ ಅವರು ಅಧ್ಯಯನ ಮಾಡಿ ದೇಶಕ್ಕೆ ಕೊಟ್ಟಿರುವ ಅತಿ ದೊಡ್ಡ ಸಂವಿಧಾನವು ಸಮಾಜದ ತಳ ವರ್ಗದವರ ಧ್ವನಿಯಾಗಿ ಸಮತೆ, ಮಮತೆ, ಮಾನವೀಯತೆ ನೆಲೆಯಲ್ಲಿ ರೂಪುಗೊಂಡಿದೆ. ಉತ್ತಮ ಪ್ರಜೆಗಳಾಗಲು ಸಂವಿಧಾನವನ್ನು ಗೌರವಿಸಬೇಕಿದೆ. ಇದು ಭಾರತೀಯ ಆದರ್ಶ ಹಾಗೂ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಗ್ಯಾರAಟಿಗಳು ಜನರ ಜೀವನ ಮಟ್ಟ ಸುಧಾರಿಸಿವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ -ೆಬ್ರವರಿ ಅಥವಾ ಮಾರ್ಚ್ ಅಂತ್ಯ ದೊಳಗೆ ಗೋನೂರುವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಇದೆ. ಈ ಯೋಜನೆ ಬಾಕಿ ಕಾಮಗಾರಿಗಳಿಗೆ ೨೦೦ ಕೋಟಿ ರೂ.ಬಿಡು ಗಡೆಗೆ ಸರ್ಕಾರ ಭರವಸೆ ನೀಡಿದೆ. ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲೂಕುಗಳ ೭೩,೯೪೬ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ೨೬೭೭ ಕೋಟಿ ರೂ. ವೆಚ್ಚದ ಬೃಹÀತ್ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ಜಿಲ್ಲೆಯ ರೈತರ ಸಾಧನೆ ಶ್ಲಾಘಿಸಿದ ಸಚಿವರು, ೨೦೨೫-೨೬ನೇ ಸಾಲಿನಲ್ಲಿ ೪೮,೬೮೨ ಟನ್ ಸಿರಿಧಾನ್ಯ ಉತ್ಪಾದನೆ ಮೂಲಕ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ತೋಟಗಾರಿಕೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಮೂಲಕ ಸಾವಿರಾರು ರೈತರಿಗೆ ಕೋಟ್ಯಂತರ ರೂ. ಸೌಲಭ್ಯ ಒದಗಿಸಲಾಗಿದೆ.
ಹಿರಿಯೂರು ತಾಲೂಕು ಮೇಟಿಕುರ್ಕಿ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗಕ್ಕಾಗಿ ಸರ್ಕಾರ ೧,೨೧೧ ಎಕರೆ ಜಮೀನು ಹಸ್ತಾಂತರಿಸಿದೆ. ಡಿಸೆಂಬರ್ ೨೦೨೭ರ ವೇಳೆಗೆ ಈ ಯೋಜನೆ ಪೂರ್ಣ ಗೊಂಡು ರೈಲು ಸಂಚಾರ ಆರಂಭವಾಗಲಿದೆ ಎಂದರು.
ಪೊಲೀಸ್ ಕಾನ್ಸ್ಟೇಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು. ಕ್ರೀಡಾ ಇಲಾಖೆಯಿಂದ ಸರ್ಕಾರಿ ಶಾಲೆಗಳಿಗೆ ನೀಡಿರುವ ಕ್ರೀಡಾ ಪರಿಕರ, ಸ್ವಾವಲಂಬಿ ಸಾರಥಿ ಯೋಜನೆಯಡಿ -Àಲಾನುಭವಿಗಳಿಗೆ ವಾಹನಗಳ ಕೀ ಹಸ್ತಾಂತರಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ನೀಡಿದರು. ರಾಜ್ಯರಸ್ತೆ ಸಾರಿಗೆ ನಿಗಮದಲ್ಲಿ ಸತತ ೫ವರ್ಷ ಅಪಘಾತ, ಅಪರಾಧ ರಹಿತ ಸೇವೆಗಾಗಿ ಸಂಸ್ಥೆಯ ಬೆಳ್ಳಿ ಪದಕ, ಪ್ರಶಸ್ತಿಪತ್ರ ಹಾಗೂ ನಗದು ಪುರಸ್ಕಾರವನ್ನು ಚಿತ್ರದುರ್ಗ ಘಟಕದ ಚಾಲಕ ಆರ್. ಮನೋಹರ್ ಅವರಿಗೆ ವಿತರಿಸಿ ಗೌರವಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಽಕಾರಿಗಳು, ನೌಕರರು ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗೆ ಭಾಜನರಾದ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಪೊಲೀಸ್, ಗೃಹ ರಕ್ಷಕ, ಅರಣ್ಯಇಲಾಖೆ ತುಕಡಿಗಳು, ಎನ್‌ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಪೊಲೀಸ್ ಬ್ಯಾಂಡ್ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ತುರುವನೂರು ಇಂದಿರಾ ಗಾಂಽ ವಸತಿ ಶಾಲೆ, ನಗರದ ಕೆ.ಕೆ. ನ್ಯಾಷನಲ್ ಸ್ಕೂಲ್, ರಿಜನಲ್ ಮತ್ತು ಕ್ರೆಸೆಂಟ್ ಶಾಲೆ ಮಕ್ಕಳು ದೇಶಭಕ್ತಿ, ವೈವಿಧ್ಯತೆ ಬಿಂಬಿಸುವ ನÊತ್ಯ ರೂಪಕಗಳನ್ನು ಪ್ರಸ್ತುತ ಪಡಿಸಿದರು.
ಪಥ ಸಂಚಲನದಲ್ಲಿ ಭಾಗವಹಿಸಿದ್ದ ಮೆದೇಹಳ್ಳಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ(ಪ್ರ), ಗೂಳಯ್ಯನಹಟ್ಟಿ ಮುರಾರ್ಜಿ ದೇಸಾಯಿ(ದ್ವಿ) ಹಾಗೂ ಮಲ್ಲಾಡಿಹಳ್ಳಿ ಗಾರ್ಡಿಯನ್ ಏಂಜಲ್ ಶಾಲಾ ತಂಡ ತÊತೀಯ ಸ್ಥಾನ ಪಡೆಯಿತು.
ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಎಂಎಲ್‌ಸಿ ಕೆ.ಎಸ್. ನವೀನ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾ ಥ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ. ರಾಮಪ್ಪ, ರಾಜ್ಯ ಸ-Áಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಯೋಜನೆ ಪ್ರಾಽಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್. ಆಕಾಶ್, ಎಸ್‌ಪಿ ರಂಜಿತ್‌ಕುಮಾರ್‌ಬAಡಾರು, ಎಸಿ ವೆಂಕಟೇಶ್‌ನಾಯಕ್, ತಹಸೀಲ್ದಾರ್ ಗೋವಿಂದರಾಜ್, ನಗರಸಭೆ ಆಯುಕ್ತೆ ಎಸ್. ಲಕ್ಷಿ÷್ಮÃ ಸೇರಿ ನಾನಾ ಅಽಕಾರಿಗಳು, ಗಣ್ಯರು ಇದ್ದರು.