ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾಽಕಾರಿ ಟಿ. ವೆಂಕಟೇಶ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ ಇದ್ದಾರೆ. 
ಚಿತ್ರದುರ್ಗ

ಜಿಲ್ಲೆಯಲ್ಲಿ ಶೇ.೯೬.೯೪ ಮತದಾರರ ಮ್ಯಾಪಿಂಗ್ ಪೂರ್ಣ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಪಾರದರ್ಶಕವಾಗಿರಲಿದೆ ಎಸ್‌ಐಆರ್
  • ಯಾವೊಬ್ಬ ಮತದಾರನ ಹಕ್ಕಿಗೆ ಆಗಲ್ಲ ಧಕ್ಕೆ
  • ಜಿಲ್ಲಾಽಕಾರಿ ಟಿ. ವೆಂಕಟೇಶ್ ವಿಶ್ವಾಸ
ಚಿತ್ರದುರ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕ ರಣೆ (ಎಸ್‌ಐಆರ್)ಗೆ ಪೂರಕವಾಗಿ ಶೇ.೯೬.೯೪ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ವ್ಯವಸ್ಥಿತ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆಗಳಾಗಿವೆ. ಎಸ್‌ಐ ಆರ್ ಕುರಿತಂತೆ ಸದ್ಯ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಸಾರ್ವಜನಿಕರಲ್ಲಿರುವ ಗೊಂದಲ ನಿವಾರಿಸಲು ಹಾಗೂ ಅರ್ಹ ಯಾವೊಬ್ಬ ಮತದಾರನೂ ಮತದಾನದ ಹಕ್ಕಿನಿಂದ ವಂಚಿತರಾಗದAತೆ ಎಸ್‌ಐಆರ್ ಪಾರದರ್ಶಕವಾಗಿ ನಡೆಯಲಿದೆ ಎಂದರು.
ಇದಕ್ಕಾಗಿ ಕಳೆದ ೬ ತಿಂಗಳಿAದ ನಿರಂತರ ಸಿದ್ಧತೆಗಳಾಗಿವೆ. ೨೦೦೨ರ ಮತ ಪಟ್ಟಿ ಮಾನದಂಡವಾಗಿಟ್ಟುಕೊAಡು, ೨೦೨೫ರ ಮತ ಪಟ್ಟಿ ಜತೆ ಹೋಲಿಕೆ ಹಾಗೂ ಮ್ಯಾಪಿಂಗ್ ನಡೆಸಲಾಗಿದೆ. ೨೦೨೫ರ ಜಿಲ್ಲೆಯ ಮತ ಪಟ್ಟಿ ಪ್ರಕಾರ ೧೪,೪೦,೩೧೬ ಅರ್ಹ ಮತದಾರರಿದ್ದು, ಈ ಪೈಕಿ ೧೩,೯೬,೨೮೪ ಮತದಾರರನ್ನು ಬಿಎಲ್‌ಒಗಳು ಮನೆ, ಮನೆ ಭೇಟಿ ನೀಡಿ ಪರಿಶೀಲಿಸಿ ಮ್ಯಾಪಿಂಗ್ ಮಾಡಿದ್ದಾರೆ ಎಂದರು.
ಮ್ಯಾಪಿAಗ್ ಆಗದವರ ಪೈಕಿ ಕೆಲವರು ಬೇರೆಡೆಗೆ ಕಾಯಂ ಆಗಿ ವಲಸೆ ಹೋಗಿರಬಹುದು, ಮÊತರಾಗಿರಬಹುದು ಅಥವಾ ಮತ ಪಟ್ಟಿಯಲ್ಲಿ ೨ ಬಾರಿ ಹೆಸರು ಸೇರಿರಬಹುದು. ಆದರೆ, ಯಾರ ಹೆಸರನ್ನೂ ಏಕಾಏಕಿ ಪಟ್ಟಿಯಿಂದ ಕೈ ಬಿಡುವುದಿಲ್ಲ. ಗುರುತಾಗದ ಮತದಾರರಿಗೆ ನೋಟಿಸ್ ನೀಡಿ ಪರಿಶೀಲಿಸಲಾಗುವುದು.
ಮÊತಪಟ್ಟವರ ಮರಣ ಪ್ರಮಾಣಪತ್ರ ಸಿಗುವವರೆಗೂ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದು ಹಾಕುವುದಿಲ್ಲ. ಮತದಾರರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮನೆ, ಮನೆ ಸಮೀಕ್ಷೆ ಮುಗಿದಿದೆ. ಮುಂದೆ ಪ್ರತಿ ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳ ಮೂಲಕ ಅರ್ಧದಷ್ಟು ಮಾಹಿತಿ ಭರ್ತಿಯಾಗಿರುವ ಗಣತಿ ನಮೂನೆ ತಲುಪಿಸಲಾಗುವುದು. ಇದರಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬAಽ ಕರ ಹಾಗೂ ವಿಧಾನಸಭಾ ಕ್ಷೇತ್ರದ ಹೆಸರು ಇರಲಿವೆ.
ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ೩ ಬಾರಿ ಭೇಟಿ ನೀಡಿ, ಗಣತಿ ನಮೂನೆಗಳನ್ನು ತಲುಪಿಸಲು ಪ್ರಯತ್ನಿಸಲಿದ್ದಾರೆ. ನಂತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತದಾರರಿಂದ ದೃಢೀಕರಿಸಿ ಬಿಎಲ್‌ಒಗಳು ಮರಳಿ ಪಡೆಯಲಿದ್ದಾರೆ. ನಮೂನೆ ಹಿಂತಿರುಗಿಸದಿದ್ದರೆ ಮತಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ರಾಜಕೀಯ ಪಕ್ಷಗಳು ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ಡಿಸಿ ಕೋರಿದರು.
ಮ್ಯಾಪಿಂಗ್ ಆಗದೆ ಇರುವವರು ಮನೆ ಗಣತಿ -Áರಂ ಜತೆ ಚುನಾವಣಾ ಆಯೋಗ ನಿಗದಿಪಡಿಸಿದ ನಾನಾ ದಾಖಲೆಗಳು, ಆಧಾ ರ್ ಕಾರ್ಡ್ ಗುರುತಿನ ಪುರಾವೆಯಾಗಿ ನೀಡಿದರೆ ಮತಪಟ್ಟಿಗೆ ಸೇರಿಸಲಾಗುವುದು. ಯಾವುದೇ ಮತಗಟ್ಟೆ ವ್ಯಾಪ್ತಿಯಲ್ಲಿ ೧೨೦೦ ಕ್ಕಿಂತ ಹೆಚ್ಚು ಮತದಾರರಿದ್ದರೆ, ಅಂತಹ ಕಡೆಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
ಜುಲೈ ೨೯ರ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಅಂತಿಮ ಪಟ್ಟಿ ಪ್ರಕಟಣೆ ನಂತರ ಈಗ ಜಾರಿಯಲ್ಲಿರುವ ಎಲ್ಲ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ರದ್ದಾಗಲಿದೆ ಎಂದು ಜಿಲ್ಲಾಽಕಾರಿ ಸ್ಪಷ್ಟಪಡಿಸಿದರು.
ಪ್ರತಿ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರನ್ನು ತಕ್ಷಣವೇ ನೇಮಕ ಮಾಡಿ ಎಸ್‌ಐಆರ್‌ಗೆ ಸಹರಿಸುವಂತೆ ಮನವಿ ಮಾಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಡಾ.ಕೆ.ಜೆ. ಕಾಂತರಾಜ್, ವಿಶೇಷ ಭೂ ಸ್ವಾಽÃನಾಽಕಾರಿ ವೆಂಕಟೇಶ್‌ನಾಯ್ಕ್, ಚುನಾವಣಾ ತಹಸೀಲ್ದಾರ್ ಬೀ.ಬೀ. ಫಾತೀಮಾ, ಶಿರಸ್ತೆದಾರ್ ಮಲ್ಲಿಕಾರ್ಜುನ ನಾಯಕ ಇತರರು ಇದ್ದರು.
ಎಂದು, ಏನು?
ಜೂ.೨೦ ರಿಂದ ೨೯ ರವರೆಗೆ ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ
೩೦ ರಿಂದ ಜುಲೈ ೨೯ರವರೆಗೆ ಬಿಎಲ್‌ಒಗಳು ಮನೆ, ಮನೆ ಭೇಟಿ
ಆಗಸ್ಟ್ ೫ರಂದು ಕರಡು ಮತದಾರರ ಪಟ್ಟಿ ಪ್ರಕಟ
ಅಕ್ಟೋಬರ್ ೩ ರೊಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಅಕ್ಟೋಬರ್ ೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
ಹಿರಿಯೂರು ಉಪಚುನಾವಣೆ
ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಸ್ತುತ ಇರುವ ೨೦೨೫ರ ಮತಪಟ್ಟಿ ಆಧರಿಸಿಯೇ ಉಪ ಚುನಾವಣೆ ನಡೆಯಲಿದೆ. ಆಯೋಗ ಎಂದು ಚುನಾವಣೆ ದಿನಾಂಕ ಘೋಷಿಸಿದರೂ ಅದಕ್ಕೆ ಜಿಲ್ಲಾ ಚುನಾವಣಾ ಆಯೋಗ ಸಜ್ಜಾಗಿದೆ ಎಂದು ಡಿಸಿ ಹೇಳಿದರು.