ಖಾಸಗಿ ಕಂಪನಿಯೊAದರಿAದ ಬಹುಕೋಟಿ ರೂ. ವಂಚನೆಗೆ ಒಳಗಾದವರು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡರು. ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ವಿವೇಕ್, ಇತರರು ಇದ್ದರು.
- ೪೭೦ಕ್ಕೂ ಹೆಚ್ಚು ಮಂದಿಯಿAದ ಠೇವಣಿ ಸಂಗ್ರಹ
- ಮೋಸ ಹೋದವರಲ್ಲಿ ಮಹಿಳೆಯರೇ ಅಽಕ
- ಎಸ್‌ಪಿಗೆ ದೂರು
ಚಿತ್ರದುರ್ಗ: ಖಾಸಗಿ ಕಂಪನಿಯೊAದು ಜಿಲ್ಲೆಯಲ್ಲಿ ೭೦ ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದ್ದು, ನ್ಯಾಯ ದೊರಕಿಸಿ ಕೊಡುವಂತೆ ನಗರದ ಪ್ರವಾಸಿ ಮಂದಿರದ ಬಳಿ ಗುರುವಾರ ವಂಚನೆಗೊಳಗಾದವರು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಬಳಿ ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ೪೭೦ಕ್ಕೂ ಹೆಚ್ಚು ಮಂದಿ ಮೋಸ ಹೋಗಿದ್ದು, ಎಸ್‌ಎಲ್‌ವಿ ಮಹಿಳಾ ಮಾರ್ಟ್ ಪ್ರೆÊವೇಟ್ ಲಿಮಿಟೆಡ್ ಕಂಪನಿ ತಮ್ಮನ್ನು ವಂಚಿಸಿದೆ ಎಂದು ನೂರಾರು ಮಹಿಳೆಯರು ಆರೋಪಿಸಿದರು.
ಠೇವಣಿ ಹೂಡಿ ಹಣ ಕಳೆದುಕೊಂಡವರಲ್ಲಿ ಪುರುಷರು ಇದ್ದು, ಈ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಭದ್ರತಾ ಠೇವಣಿಯನ್ನಾಗಿ ಒಬ್ಬೊಬ್ಬರಿಂದ ಲಕ್ಷಾಂತರ ರೂ. ಸಂಗ್ರಹಿಸಲಾಗಿದೆ. ಅಂದಾಜು ೩೦ ಲಕ್ಷ ರೂ. ವರೆಗೂ ಕಂಪನಿಯ ಚಿತ್ರದುರ್ಗ ಶಾಖೆಗೆ ಪಾವ ತಿಸಿದವರೂ ಇದ್ದಾರೆ.
ಕಂಪನಿ ಎಂಡಿ ಬೊಮ್ಮಲ ರಾಜೇಶ್, ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಹೇಮಂತ್‌ರಾಜ್ ಮತ್ತು ಕೃಷ್ಣಮೂರ್ತಿ ಎಂಬುವರ ವಿರು ದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ. ಹೇಳಿದಂತೆ ಹೂಡಿಕೆಯ ಅಸಲು ಹಣವನ್ನು ಪ್ರತಿ ತಿಂಗಳು ಇಂ ತಿಷ್ಟ ಎಂದು ಹಾಗೂ ಅದರೊಟ್ಟಿಗೆ ಮಾಸಿಕ ವೇತನ ನೀಡಲಾಗುವುದು.
೨೦ ಸಾವಿರ ರೂ.ಕ್ಕೆ ೫೬೦೦ ರೂ. ೧ ಲಕ್ಷ ರೂ. ಭದ್ರತಾ ಠೇವಣಿ ಪಾವತಿಸಿದರೆ ಮಾಸಿಕ ೨೮ ಸಾವಿರ ರೂ., ವೇತನ ಹಾಗೂ ಕಂತುಗಳಲ್ಲಿ ಹಣ ಮರಳಿಸುವುದು ಸೇರಿ ಹೆಚ್ಚಿನ ಆದಾಯ ಸಿಗಲಿದೆ ಎಂದು ನಂಬಿಸಿತ್ತು ಎಂದು ಮಾಹಿತಿ ಹಂಚಿಕೊAಡರು.
ಕೂಲಿಕಾರ್ಮಿಕರು, ಆಟೋ ಚಾಲಕರು, ಗೃಹಿಣಿಯರು ಒಳಗೊಂಡು ಹಲವರು ಇದನ್ನು ನಂಬಿ ತಮ್ಮ ಬಂಗಾರ ಅಡವಿಟ್ಟು, ಸೈಟ್ ಮಾರಿ, ಧರ್ಮಸ್ಥಳ ಸಂಸ್ಥೆ, ಸ್ವಹಾಯ ಸಂಘಗಳು, ಕೈಗಡ ಹೀಗೆ ಲಕ್ಷಾಂತರ ರೂ.ಗಳನ್ನು ಕಂಪನಿಗೆ ಕಟ್ಟಿದ್ದರು.
ಆದರೆ, ಕಳೆದ ಜನವರಿಯಿಂದ ಕಚ್ಛಾವಸ್ತುಗಳನ್ನು ಹಾಗೂ ವೇತನ, ಕಟ್ಟಿದ ಹಣ ಹಿಂತಿರುಗಿಸುವುದನ್ನು ನಿಲ್ಲಿಸಿದ್ದ ಕಂಪನಿ ಮೇ ೩೦ರೊಳಗೆ ಎಲ್ಲವೂ ಸರಿ ಹೋಗಲಿದೆ ಎಂದು ಭರವಸೆ ನೀಡಿತ್ತು. ಅಲ್ಲಿಯವರೆಗೆ ತಾಳ್ಮೆಯಿಂದ ಕಾದಿದ್ದ ನೊಂದವರು ಎಸ್‌ಪಿಗೆ ದೂರು ಸಲ್ಲಿಸಿದರು.
ವಂಚನೆಗೊಳಗಾದವರನ್ನು ಸಂಘಟಿಸಿದ್ದ ಕೂಡ್ಲಿಗಿ ವಿವೇಕ್ ಮಾತನಾಡಿ, ಬೆಂಗಳೂರು, ಚಿತ್ರದುರ್ಗ ಸೇರಿ ೯ ಕಡೆಗಳಲ್ಲಿ ಕಂಪನಿ ಯ ಶಾಖೆಗಳಿವೆ. ತುಮಕೂರಿನಲ್ಲಿ ವಿಶೇಷ ಪ್ಯಾಕೇಜ್ ಕೊಟ್ಟಿದ್ದು, ವಿವಿಧ ಆಫರ್‌ಗಳ ಹೆಸರಲ್ಲಿ ಜನರಿಂದ ಹಣ ಪಡೆದಿದ್ದಾರೆ.
ಬೆಂಗಳೂರು, ತುಮಕೂರು ಹಾವೇರಿ ಹಾಗೂ ಹೊಸಕೋಟೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗಕ್ಕೆ ಸಂಬAಽಸಿದAತೆ ಕಂಪನಿ ಎಂಡಿ ಆಂಧ್ರಪ್ರದೇಶದ ರಾಜೇಶ್ ಬೊಮ್ಮಾಲು, ಇತರರು ಕೊಟ್ಟಿದ್ದ ಗಡುವು ಮುಕ್ತಾಯವಾಗಿದೆ.
ವಿಚಾರಿಸೋಣವೆಂದರೆ ಅವರೆಲ್ಲರ ಪೋನ್‌ಗಳು ಸ್ವಿಚ್ ಆಫ್ ಆಗಿವೆ. ೨೦೨೩ರಿಂದ ೨೦೨೬ವರೆಗೆ ಎಲ್ಲವೂ ಸರಿಯಾಗಿತ್ತು. ವೇ ತನವನ್ನೂ ಕೊಡುತ್ತಿದ್ದರು. ಸಂಗ್ರಹಿಸಿದ್ದ ಠೇವಣಿಗೆ ಸಿಪಿಸಿ ವೋಚರ್ ಕೂಡ ಕೊಟ್ಟಿದ್ದಾರೆ. ಚಿತ್ರದುರ್ಗದ ಭೀಮಸಮುದ್ರ ರಸ್ತೆಯ ಲ್ಲಿ ಇದರ ಶಾಖೆ ಇದೆ ಎಂದು ತಿಳಿಸಿದರು.
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಈ ವಂಚನೆ ಕುರಿತಂತೆ ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ದೂರು ಕೊಡಲು ತಿಳಿಸಿದ್ದಾರೆ. ಅನೇಕರು ಈ ಕಂಪನಿಯಿAದ ಮೋಸ ಹೋಗಿದ್ದಾರೆ. ಚಿತ್ರದುರ್ಗದ ೬೦-೭೦ ಕೋಟಿ ರೂ.ಗಳೊಂದಿಗೆ ರಾಜ್ಯಾದ್ಯಂತ ಅಂದಾಜು ೮೬೬ ಕೋಟಿ ರೂ.ವಂಚನೆ ಆಗಿದೆ ಎಂದು ಹೇಳಿದರು.
ಕಂಪನಿ ಎಂಡಿ ಬೊಮ್ಮಲ ರಾಜೇಶ್, ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಹೇಮಂತ್‌ರಾಜ್ ಮತ್ತು ಕೃಷ್ಣಮೂರ್ತಿ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.
"
೧೩ ಲಕ್ಷ ರೂ. ಸೈಟ್, ೬ ಲಕ್ಷ ರೂ. ಬಂಗಾರ ಮಾರಿ, ೩ ಲಕ್ಷ ರೂ. ಕೈಗಡ ಸಾಲ ಸೇರಿ ಒಟ್ಟು ೨೨ ಲಕ್ಷ ರೂ. ಈ ಕಂಪನಿಗೆ ಪಾವತಿಸಿದ್ದೆ. ಬಂದ ಹಣದಲ್ಲಿ ಮನೆ ಕಟ್ಟುವ ಕನಸು ಹೊಂದಿದ್ದೆ. ಆದರೀಗ ವಂಚನೆ ಎಂದು ತಿಳಿದು ದಿಗ್ಭಾçಂತನಾಗಿದ್ದೇನೆ.
— | ಉಮೇಶ್, ಆಟೋ ಚಾಲಕ