ನ್ಯಾಯಾಲಯ ತೀರ್ಪು  
ಚಿತ್ರದುರ್ಗ

ಕಳವು ಪ್ರಕರಣ ಅಪರಾಽಗೆ ೭ವರ್ಷ ಶಿಕ್ಷೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಂಪುರ ಪೊಲೀಸ್ ಠಾಣೆ
  • ಶ್ರೀ ಹರಿಹರೇಶ್ವರ ಸ್ವಾಮಿ ದೇಗುಲ
  • ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ
ಚಿತ್ರದುರ್ಗ: ದೇಗುಲವೊಂದರ ಬಾಗಿಲಿಗೆ ಬೆಂಕಿ ಹಚ್ಚಿ ಕಳವು ಮಾಡಲು ಯತ್ನಿಸಿದ್ದ ಅಪರಾಽಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೭ ವರ್ಷ ಸಾದಾ ಶಿಕ್ಷೆ, ೫೦ ಸಾವಿರ ರೂ. ದಂಡ ವಿಽಸಿ ಮಂಗಳವಾರ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿ¯್ಲೆ ಸಿಂಗಟಗೆರೆ ಗ್ರಾಮದ ಗಾರೆ ಕೆಲಸಗಾರ ಖಲಂದರ್ ಆಲಿಯಾಸ್ ಖಲಂದರ್ ಸಾವೇಲಿ ಶಿಕ್ಷೆಗೆ ಗುರಿಯಾದವನು.
ಘಟನೆ ಹಿನ್ನೆಲೆ:
ಹೊಸದುರ್ಗ ತಾಲೂಕಿನ ಕಾರೇಹಳ್ಳಿಯ ಶ್ರೀ ಹರಿಹರೇಶ್ವರ ಸ್ವಾಮಿ ದೇಗುಲದ ಬಾಗಿಲಿಗೆ ೨೦೨೩ರ ಡಿ. ೨೬ರಂದು ದುಷ್ಕರ್ಮಿ ಬೆಂಕಿ ಹಚ್ಚಿ ಕಳವು ಮಾಡಲು ಯತ್ನಿಸಿದ್ದ. ಅರ್ಚಕ ಸುರೇಶ್ ಪೂಜೆಗೆ ಬಂದಾಗ ವಿಷಯ ಬೆಳಕಿಗೆ ಬಂದಿತ್ತು. ಗಾಬರಿಗೊಂಡ ಅರ್ಚಕರು ದೇಗುಲ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ಅವರಿಗೆ ವಿಷಯ ತಿಳಿಸಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಽಕಾರಿ ಪಿ.ಬಿ. ಮಧು ದುಷ್ಕರ್ಮಿಯನ್ನು ಪತ್ತೆ ಹಚ್ಚಿ, ಘಟನೆಯಿಂದ ದೇಗುಲಕ್ಕೆ ೫೦ ಸಾವಿರ ರೂ. ನಷ್ಟ ಸಂಭವಿಸಿದೆ ಎಂಬುದನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಽÃಶ ರೋಣಾ ವಾಸುದೇವ್ ಅವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ೭ ವರ್ಷ ಶಿಕ್ಷೆ, ದೇಗುಲಕ್ಕೆ ೪೦ ಸಾವಿರ ರೂ, ಸರ್ಕಾರಕ್ಕೆ ೧೦ ಸಾವಿರ ರೂ.ಸೇರಿಸಿ ೫೦ ಸಾವಿರ ರೂ. ದಂಡ ಪಾವತಿಸಲು ಆದೇಶಿಸಿ ದ್ದಾರೆ. ಕಟ್ಟದಿದ್ದಲ್ಲಿ ೫ ತಿಂಗಳ ಸಾದಾ ಶಿಕ್ಷೆ ವಿಽಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎನ್.ಎಸ್. ಮಲ್ಲಯ್ಯ ವಾದ ಮಂಡಿಸಿದ್ದರು.