ಚಿತ್ರದುರ್ಗದಲ್ಲಿ ಶುಕ್ರವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಸ್‌ಐಆರ್ ಅಂಗವಾಗಿ ಸಿದ್ಧಪಡಿಸಿದ ಎಎಸ್‌ಡಿಡಿಒ ಪಟ್ಟಿಯನ್ನು ರಾ ಜಕೀಯ ಪಕ್ಷಗಳ ಪ್ರತಿನಿಽಗಳಿಗೆ ವಿತರಿಸಿದರು. ಡಿ.ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಜಿ. ಎಚ್.ಮೋಹನ್‌ಕುಮಾರ್, ಎಂ.ರಾಮಪ್ಪ ಇದ್ದರು. 
ಚಿತ್ರದುರ್ಗ

ಮತದಾರರ ಪಟ್ಟಿಯಿಂದ ೧.೪೧ ಲಕ್ಷ ಜನರು ಹೊರಕ್ಕೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಽಕಾರಿ ಟಿ.ವೆಂಕಟೇಶ್ ಮಾಹಿತಿ
  • ರಾಜಕೀಯ ಪಕ್ಷಗಳಿಗೆ ಎಎಸ್‌ಡಿಡಿಒ ಪಟ್ಟಿ ವಿತರಣೆ
  • ಶೇ.೯೦.೧೭ ಗಣತಿ ನಮೂನೆ ಡಿಜಿಟಲೀಕರಣ

ಚಿತ್ರದುರ್ಗ:

ಜಿಲ್ಲೆಯಲ್ಲಿ ಆ.೭ರವರೆಗೆ ಶೇ.೯೦.೧೭ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಮತದಾರರ ಪಟ್ಟಿಯಿಂದ ೧.೪೧ ಲಕ್ಷ ಜನರ ಹೆಸರು ಕೈ ಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ, ಜಿಲ್ಲಾಽಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಡಿಸಿ ಕಚೇರಿಯಲ್ಲಿ ಶುಕ್ರವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ೨೦೨೬ರ ಅಂಗವಾಗಿ ಸಿದ್ಧ ಪಡಿಸಿದ ಎಎಸ್‌ಡಿಡಿಒ(ಗೈರು ಹಾಜರಿ, ಶಾಶ್ವತ ವಲಸೆ, ಮರಣ, ಡಬಲ್ ಎಂಟ್ರಿ, ಇತರೆ) ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಽಗಳಿಗೆ ವಿತರಿಸಿ ಮಾತನಾಡಿದರು.
ಎಸ್‌ಐಆರ್ ಅಂಗವಾಗಿ ಮನೆ, ಮನೆಗೆ ಗಣತಿ ನಮೂನೆ(ಎನ್ಯುಮರೇಷನ್ -Áರ್ಮ್) ವಿತರಿಸಿ, ಅರ್ಹರಿಂದ ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ. ಈ ದತ್ತಾಂಶವನ್ನು ಪ್ರಸ್ತುತ ಕರಡು ಮತದಾರರ ಪಟ್ಟಿ ತಯಾರಿಕೆಗೆ ಕಳುಹಿಸಲಾಗುತ್ತಿದೆ. ಗಣತಿ ನಮೂನೆ ವಿತರಣೆ ನಂತರ ಮಾಹಿತಿ ಸಂಗ್ರಹವಾಗದಿರುವ ಮತದಾರರ ವಿವರಗಳನ್ನು ಒಳಗೊಂಡ ಎಎಸ್‌ಡಿಡಿಒ ಪಟ್ಟಿ ಸಿದ್ಧಪಡಿ ಸಲಾಗಿದೆ ಎಂದರು.
ಕರಡು ಮತದಾರರ ಪಟ್ಟಿಗೆ ಸೇರ್ಪಡೆಯಾಗದು
ಜಿಲ್ಲೆಯಲ್ಲಿ ೧೪,೪೦,೫೩೪ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಈ ಪೈಕಿ ೧೨,೯೮,೯೮೬ ಜನರ ಮಾಹಿತಿ ಡಿ ಜಿಟಲೀಕರಣಗೊಳಿಸಲಾಗಿದೆ. ಉಳಿದ ೩೦,೭೩೦ ಮರಣ, ೭೦,೦೦೭ ಶಾಶ್ವತ ವಲಸೆ, ೨೧,೦೯೫ ಡಬಲ್ ಎಂಟ್ರಿ, ೧೮,೬೯೯ ಗೈರು ಹಾಜರಿ ಹಾಗೂ ೧೦೧೭ ಇತರೆ ಸೇರಿದಂತೆ ೧,೪೧,೫೪೮ ಮತದಾರರ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದ್ದಾರೆ.
ಇವರ ಹೆಸರು ಮುಂದೆ ಪ್ರಕಟವಾಗುವ ಕರಡು ಪಟ್ಟಿಯಲ್ಲಿ ಇರುವುದಿಲ್ಲ. ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆವಾರು ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಽಗಳಿಗೆ ಕೊಡಲಾಗಿದೆ ಎಂದು ಡಿಸಿ ಹೇಳಿದರು.
ಅಪರ ಜಿಲ್ಲಾ ಚುನಾವಣಾಽಕಾರಿ, ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಜಿಲ್ಲೆ ಎಸ್‌ಐಆರ್‌ನಲ್ಲಿ ರಾಜ್ಯದಲ್ಲಿ ೫ನೇ ಸ್ಥಾನ ದಲ್ಲಿದೆ ಎಂದರು. ೧೮ ವರ್ಷ ತುಂಬಿದವರು ಹಾಗೂ ಹೆಸರು ಬಿಟ್ಟು ಹೋಗಿರುವ ಅರ್ಹರು -Áರ್ಮ್-೬ ಸಲ್ಲಿಸಿ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಅಂದಾಜು ೧೯.೯೦ ಲಕ್ಷ ಜಾತಿ ಪ್ರಮಾಣ ಪತ್ರ ಹಾಗೂ ೬.೫ ಲಕ್ಷಕ್ಕೂ ಹೆಚ್ಚು ಪ್ರಮಾಣ ಪತ್ರ ವಿತರಿಸಲಾಗಿದೆ ಎಂದರು.
ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕರ‍್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕರ‍್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಬಿಜೆಪಿ ಜಿಲ್ಲಾ ಕರ‍್ಯದರ್ಶಿ ಜಿ.ಎಚ್.ಮೋಹನ್‌ಕುಮಾರ್, ಎಎಪಿ ಜಿಲ್ಲಾ ಕರ‍್ಯದರ್ಶಿ ಎಂ.ರಾಮಪ್ಪ ಇದ್ದರು.
ಆ.೮- ಎನ್ಯುಮರೇಷನ್ -Áರ್ಮ್ ಸ್ವೀಕಾರಕ್ಕೆ ಅಂತಿಮ ದಿನ
ಆ. ೧೭- ಕರಡು ಪಟ್ಟಿ ಪ್ರಕಟ
ಆ.೧೭ - ಸೆ.೧೬ರವರೆಗೆ ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆಗೆ ಅವಕಾಶ
ಅ.೧೫ - ಸಲ್ಲಿಕೆಯಾದ ಆಕ್ಷೇಪಣೆಗಳ ವಿಲೇವಾರಿ
ಅ. ೧೯- ಅಂತಿಮ ಮತದಾರರ ಪಟ್ಟಿ ಪ್ರಕಟ