ಚಿತ್ರದುರ್ಗ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಕಾರ್ಣಗೊಂಡಿದ್ದು, ೧೩,೧೭,೦೨೫ ಮತದಾರರ ಅಂತಿಮ ಪಟ್ಟಿ ಪ್ರಕಟಿ ಸಲಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಈ ಅಂತಿಮ ಪಟ್ಟಿ ತಾಲೂಕು ಕಚೇರಿಗಳು, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿದೆ. ಅಽಕೃತ ರಾಜಕೀಯ ಪಕ್ಷಗಳಿಗೆ ಈ ಪಟ್ಟಿ ಕೊಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೦೨ರ ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿ ಆಧರಿಸಿ, ೨೦೨೬ರ ಜೂನ್ ೧೬ರಂದು ಪ್ರಕಟಿಸಿದ್ದ ಪಟ್ಟಿಯಂತೆ ಜಿಲ್ಲೆಯಲ್ಲಿ ೧೪,೪೦,೫೩೪ ಮತದಾರರು ಇದ್ದರು. ನಂತರ ಬಿಎಲ್ಒಗಳ ಮೂಲಕ ೧೪,೦೪,೨೧೯ ಮತದಾರರ ಮ್ಯಾಪಿಂಗ್(ಶೇ.೯೭.೪೮)ಕಾರ್ಯ ಪೂರ್ಣಗೊಳಿಸಲಾಗಿತ್ತು.
ಮ್ಯಾಪಿಂಗ್ ಆದವರ ಪೈಕಿ ೧೨,೯೭,೭೮೯ ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣವಾಗಿದ್ದು, ಈ ವೇಳೆ ಜಿಲ್ಲೆಯಲ್ಲಿ ೩೦,೮೫೪ ಮರಣ, ೭೦,೫೨೫ ಶಾಶ್ವತ ವಲಸೆ, ೨೧,೫೩೭ ಡಬಲ್ಎಂಟ್ರಿ, ೧೮,೮೩೭ ಗೈರು ಹಾಜರಿ ಹಾಗೂ ಇತರೆ ಕಾರಣಗಳಿಂದ ೯೯೨ ಸೇರಿ ಒಟ್ಟು ೧,೪೨,೭೪೫ ಮತದಾರರನ್ನು(ಎಎಸ್ಡಿಡಿಒ ಅಡಿ)ಗುರುತಿಸಲಾಗಿತ್ತು.
೨೪ ಆಗಸ್ಟ್ ೨೦೨೬ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಜಿಲ್ಲೆಯಲ್ಲಿ ೧೨,೯೭,೭೮೯ ಮತದಾರರು ಇದ್ದರು. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಕಾಶದ ಸಂದರ್ಭದಲ್ಲಿ ೨೨,೭೫೧ ಅರ್ಹ ಮತದಾರರ ಸೇರ್ಪಡೆಯಾಗಿದೆ. ಇದೇ ವೇಳೆ ನಿಧನ, ನಿವಾಸ ಸ್ಥಳ ಬದಲಾವಣೆೆ ಹಾಗೂ ಡಬಲ್ಎಂಟ್ರಿ ಇದ್ದ ೩,೫೧೫ ಮತದಾರರ ಹೆಸರನ್ನು ನಮೂನೆ-೭ರಡಿ ಕೈಬಿಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತದಾರರು ಹೆಚ್ಚು
ಪ್ರಕಟಿತ ಅಂತಿಮ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು ೧೩,೧೭,೦೨೫ ಮತದಾರರಿದ್ದಾರೆ. ಇವರಲ್ಲಿ ೬,೫೫,೨೨೦ ಪುರುಷ, ೬,೬೧,೭೩೭ ಮಹಿಳಾ ಮತದಾರರು ಹಾಗೂ ೬೮ ಇತರೆ ಮತದಾರರಿದ್ದಾರೆ. ಮತದಾರರ ಲಿಂಗಾನುಪಾತ ಪ್ರತಿ ೧೦೦೦ ಪುರುಷರಿಗೆ ೧೦೧೦ ಮಹಿಳಾ ಮತದಾರರು ಇದ್ದು, ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಜಿಲ್ಲೆಯ ಅಂದಾಜು ೧೮,೭೧,೫೪೩ ಜನಸಂಖ್ಯೆಯಲ್ಲಿ ಶೇ.೭೦.೩೭ಜನರು ಮತದಾರರಾಗಿದ್ದಾರೆ. ೧೮ರಿಂದ ೧೯ ವರ್ಷದ ಒಳಗಿನ ೨೬,೨೨೮, ೮೫ ವರ್ಷ ವಯಸ್ಸು ಮೀರಿದ ೧೧,೩೯೪, ಅಂಗವಿಕಲ ೨೩,೭೭೪, ಸೇವಾ ಮತದಾರರು ೩೬೦, ಹಾಗೂ ೯ ಎನ್ಆರ್ಐ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಪ್ರಸ್ತುತ ೧೦೩ ಹೆಚ್ಚಳದೊಂದಿಗೆ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ ೧೭೬೪ಕ್ಕೆ ಏರಿಕೆಯಾಗಿದೆ ಎಂದು ಎಡಿಸಿ ವಿವರಿಸಿದರು.
ಜಿಲ್ಲಾಡಳಿತ ಪಾರದರ್ಶಕವಾಗಿ ಎಸ್ಐಆರ್ ಪೂರ್ಣಗೊಳಿಸಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಽಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರು ಮಂಗಳವಾರ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಸಭೆ ನಡೆಸಿ ಅಂತಿಮ ಮತದಾರರ ಪಟ್ಟಿ ಪ್ರಚುರಪಡಿಸಿದರು.
ಹೆಸರು ಸೇರ್ಪಡೆ ನಿರಂತರ
ಮತದಾರರ ಪಟ್ಟಿಗೆ ಆಧಾರ್ಸಂಖ್ಯೆ, ಹೆಬ್ಬೆರಳ ಗುರುತು ಲಿಂಕ್ ವ್ಯವಸ್ಥೆ ಜಾರಿಗೆ ತಂದರೆ ನಕಲಿ ಮತದಾನ ತಡೆಯಲು ಸಾಧ್ಯವಾಗಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಽಗಳು ಸಲಹೆ ನೀಡಿದರು. ಕುಮಾರಸ್ವಾಮಿ ಅವರು ಮಾತನಾಡಿ, ಮತದಾರರ ಪಟ್ಟಿ ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದೆ. ಅರ್ಹರು ನಮೂನೆ-೬ರಡಿ ಹೆಸರು ಸೇರಿಸಬಹುದು. ೨೦೨೭ ಜನವರಿ ೧, ಏಪ್ರಿಲ್ ೧, ಜುಲೈ ೧ಮತ್ತು ಅಕ್ಟೋಬರ್ ಒಂದರAದು ೧೮ ವರ್ಷ ಪೂರ್ಣಗೊಳ್ಳುವವರು, ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು, ಮಾಹಿತಿ ತಿದ್ದುಪಡಿ, ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಲು ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಮತದಾನ ಕೇಂದ್ರ, ತಾಲೂಕು ಕಚೇರಿಗಳು, ಮತದಾರರ ನೋಂದಣಾಽಕಾರಿ ಕಾರ್ಯಾಲಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದರು.
ಚುನಾವಣಾ ತಹಸೀಲ್ದಾರ್ ಬೀಬಿ -Áತೀಮಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್. ಪ್ರಕಾಶ್, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಸಿಪಿಐ(ಎಂ)ಡಿಒಸಿ ಸಿ.ಕೆ. ಗೌಸ್ಪೀರ್, ಎಎಪಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಪಿ.ಎಂ. ಮಂಜುನಾಥ್ ಇತರರು ಇದ್ದರು.
ವಿಧಾನಸಭಾ ಕ್ಷೇತ್ರ/ಮತಗಟ್ಟೆ ಸಂಖ್ಯೆ/ಪುರುಷ/ಮಹಿಳೆ/ಇತರೆ/ ಒಟ್ಟು ಮತದಾರರು(ಅಂತಿಮಪಟ್ಟಿ)
ಮೊಳಕಾಲ್ಮೂರು-೩೧೧-೧೧೮೮೨೯-೧೧೭೧೫೫-೧೬-೨೩೬೦೦೦
ಚಳ್ಳಕೆರೆ-೨೭೮-೧೦೦೯೫೯-೧೦೧೯೮೫-೯-೨೦೨೯೫೩
ಚಿತ್ರದುರ್ಗ-೩೦೨-೧೧೪೬೪೯-೧೧೯೧೮೧-೨೪-೨೩೩೮೫೪
ಹಿರಿಯೂರು-೩೦೦-೧೧೧೭೪೯-೧೧೪೨೭೫-೧೦-೨೨೬೦೩೪
ಹೊಸದುರ್ಗ-೨೫೮-೯೫೯೫೬-೯೬೨೬೩-೨-೧೯೨೨೨೧
ಹೊಳಲ್ಕೆರೆ-೩೧೫-೧೧೩೦೭೮-೧೧೨೮೭೮-೭-೨೨೫೯೬೩
----