ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಎಚ್‌ಪಿವಿ ಲಸಿಕಾಕರಣ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಡಾ. ಎಸ್. ಆಕಾಶ್, ಡಾ.ಡಿ.ಎಂ. ಅಭಿನವ್, ಡಾ. ರಂಗಸ್ವಾಮಿ, ಡಾ.ಜಿ.ಪಿ. ರೇಣುಪ್ರಸಾದ್, ರವಿಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಎಚ್‌ಪಿವಿ ಲಸಿಕಾಕರಣ ಅಭಿಯಾನದಲ್ಲಿ ಶೇ.೧೦೦ ಪ್ರಗತಿ ಸಾಽಸಿ

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳಿಗೆ ಜಿಪಂ ಸಿಇಒ ತಾಕೀತು
  • ಲಸಿಕೆಯಿಂದ ಅರ್ಹರು ವಂಚಿತವಾಗಬಾರದು
  • ಶಿಕ್ಷಕರ,ಪಾಲಕರ ಸಭೆಗೆ ನಿರ್ದೇಶನ
ಚಿತ್ರದುರ್ಗ: ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಎಚ್‌ಪಿವಿ(ಹ್ಯೂ ಮನ್ ಪ್ಯಾಪಿಲೋಮಾ ವೈರಸ್)ಲಸಿಕಾಕರಣ ಅಭಿಯಾನ ನಿಗದಿತ ಸಮಯದೊಳಗೆ ಶೇ.೧೦೦ ಪ್ರಗತಿಯಾಗ ಬೇಕು ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಅಽಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಮಟ್ಟದ ಎಚ್‌ಪಿವಿ ಲಸಿಕಾಕರಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಅ ಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಶಿಕ್ಷಣ, ನಗರಾಭಿವÊದ್ಧಿ, ಗ್ರಾಮೀಣಾಭಿವೃದ್ಧಿ ಮ ತ್ತು ಪಂಚಾಯತ್‌ರಾಜ್ ಯುವ ಸಬಲೀಕರಣ ಮತ್ತು ಕ್ರೀಡೆ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಽಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಯಾವುದೇ ಅರ್ಹ -Àಲಾನುಭವಿ ಲ ಸಿಕೆಯಿಂದ ವಂಚಿತವಾಗಬಾರದು ಎಂದು ತಾಕೀತು ಮಾಡಿದರು.
ಶಿಕ್ಷಕರ, ಪಾಲಕರ ಸಭೆ ನಡೆಸಿ: ಎಚ್‌ಪಿವಿ ಲಸಿಕೆ ಮಹತ್ವ ಹಾಗೂ ಜಾಗÊತಿ ಕುರಿತಂತೆ ಮೇ ೨೫-೩೦ ರವರೆಗೆ ಶಿಕ್ಷಕರು ಹಾ ಗೂ ಪಾಲಕರ ಸಭೆ ನಡೆಸುವಂತೆ ಸಿಇಒ ಡಿಡಿಪಿಐ ಎಂ.ಆರ್. ಮಂಜುನಾಥ್ ಅವರಿಗೆ ಸೂಚಿಸಿದರು. ೧೪ ವರ್ಷದೊಳಗಿನ ಅರ್ಹ ಹೆಣ್ಣು ಮಕ್ಕಳ ಸಂಖೆ್ಯ ಗುರುತಿಸಲು ಶಾಲೆಗಳ ಲೈನ್‌ಲಿಸ್ಟ್ನೊಂದಿಗೆ ವಿದ್ಯಾರ್ಥಿನಿಯರ ಪಟ್ಟಿ ಸಿದ್ದಪಡಿಸಿಕೊಳ್ಳಬೇಕು.
ಜಿಲ್ಲೆಯ ಎಲ್ಲ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆಗಳು ಹಾಗೂ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೮ ಮತ್ತು ೯ನೇ ತರಗತಿ ವಿದ್ಯಾರ್ಥಿನಿಯರ ಪಾಲಕರ ಹಾಗೂ ಶಿಕ್ಷಕರ ಸಭೆ ನಡೆಸಿ ಜಾಗÊತಿ ಮೂಡಿಸಬೇಕು.ಶಿ ಕ್ಷಕರು, ಪಾಲಕರ ಸಭೆಗೂ ಮುನ್ನ ಮೇ ೧೬ ರಂದು ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆ ಮುಖ್ಯ ಶಿಕ್ಷಕ ರಿಗೆ ಓರಿಯಂಟೇಷನ್ ಕಾ ರ್ಯಾಗಾರ ಆಯೋಜಿಸಬೇಕೆಂದರು ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ. ಅಭಿನವ್ ಮಾತನಾಡಿ, ಈ ಅಭಿಯಾನ ಈಗಾಗಲೇ ಜಿಲ್ಲೆಯಲ್ಲಿ ಕಳೆದ ಮಾರ್ಚ್ನಿಂದ ಪ್ರಾರಂಭವಾಗಿದೆ. ಪ್ರಸ್ತುತ ೧೪-೧೫ ವರ್ಷ ವಯೋಮಿತಿ ಒಳಗಿರುವ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ.
ಜಿಲ್ಲೆಯ ಅಂದಾಜು ಶೇ.೧ ಜನಸಂಖ್ಯೆ ಈ ವಯೋಮಿತಿಯಲ್ಲಿದ್ದು, ೧೮ ಸಾವಿರ -Àಲಾನುಭವಿಗಳ ಲಸಿಕಾಕರಣದ ಗುರಿ ಇದೆ.
ಪ್ರಸ್ತುತ ಶೇ.೪೩ ಪ್ರಗತಿಯಾಗಿದೆ. ರಾಜ್ಯದಲ್ಲಿ ಚಿತ್ರದುರ್ಗ ೧೫ನೇ ಸ್ಥಾನದಲ್ಲಿದೆ. ರಾಜ್ಯ ಮತ್ತು ಪ್ರಾದೇಶಿಕ ಕೇಂದ್ರಗಳ ಮೂಲಕ ಜಿಲ್ಲೆಗೆ ಲಸಿಕೆ ಸರಬರಾಜು ಆಗುತ್ತಿದೆ.
ಲಸಿಕಾಕರಣದ ಪಾರದರ್ಶಕತೆಗಾಗಿ ಯುವಿನ್ ಪೋರ್ಟಲ್ ಮತ್ತು ಇವಿನ್ ತಂತ್ರಜ್ಞಾನ ಬಳಸಲಾಗುತ್ತಿದೆ. ಇದರಿಂದ ಲಸಿಕೆ ದಾಸ್ತಾನು ಮತ್ತು -Àಲಾನುಭವಿಗಳ ವಿವರಗಳ ಮೇಲ್ವಿಚಾರಣೆ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅಭಿಯಾನ ಮಂದಗತಿಯಲ್ಲಿ ಸಾಗಿದೆ. ಜೂನ್ ಮೊದಲ ವಾರದೊಳಗೆ ಹೆಚ್ಚಿನ ಪ್ರಗತಿ ಸಾಽಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಸಾಂಖ್ಯಿಕ ಅಽಕಾರಿ ರವಿಕುಮಾರ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ರೇಖಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ಎಚ್. ದಿವಾಕರ್, ಜಿಲ್ಲಾ ಕಾ ರ್ಯಕ್ರಮ ಅನುಷ್ಠಾನಾಽಕಾರಿ ಡಾ.ಎನ್. ಕಾಶಿ,ಟಿಎಚ್‌ಒ ಡಾ.ಬಿ.ವಿ. ಗಿರೀಶ್ ಮತ್ತಿತರ ಅಽಕಾರಿಗಳು ಇದ್ದರು.