ಪ್ರಮುಖ ಮುಖ್ಯಾಂಶಗಳು
ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅವರ ಧ್ವನಿಯನ್ನು ಆಲಿಸಲು ಮಹತ್ವ ನೀಡಬೇಕು. ಈ ನಿಟ್ಟಿನಲ್ಲಿ, ನವೆಂಬರ್ 14 ರಿಂದ ಮುಂದಿನ ಜನವರಿ 24 ರವರೆಗೂ 10 ವಾರಗಳ ಕಾಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಬೇಕು ಎಂದು ಜಾಫರ್ ಷರೀಫ್ ಸುತಾರ್ ಅವರು ಸೂಚಿಸಿದರು.
ಈ ವಿಶೇಷ ಸಭೆಯಲ್ಲಿ ಗ್ರಾಮೀಣ ಮತ್ತು ಕುಡಿಯುವ ನೀರು, ನೈರ್ಮಲ್ಯ ವಿಭಾಗದ ರಾಜ್ಯ ಸಮಾಲೋಚಕ ಆನಂದ್, ರೇಣುಕಾಪುರ ಗ್ರಾ.ಪಂ. ಅಧ್ಯಕ್ಷ ಜಾನಜ್ಜ, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ದೇವಿರಮ್ಮ, ಪಾಲಕ್ಕ, ನರಸಿಂಹಪ್ಪ, ವೆಂಕಟೇಶ್ ಸೇರಿದಂತೆ ಪಿಡಿಒ ಬಿ.ಸಿ.ಶಶಿರಾಜ್ ಮತ್ತು ಹಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಲಾ ಮುಖ್ಯಶಿಕ್ಷಕ ಮಂಜಣ್ಣ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ, ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯದರ್ಶಿ ಜಾಫರ್ ಷರೀಫ್ ಸುತಾರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಜಲಜೀವನ್ ಮಿಷನ್ (JJM) ಯೋಜನೆ ಹಾಗೂ ಕೆಎಸ್‌ಆರ್‌ಎಸ್‌ಡಬ್ಲ್ಯೂಎಸ್‌ಪಿ (KSRSWSP) ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.