ಚಿತ್ರದುರ್ಗ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಸಹಯೋಗದಲ್ಲಿ, ಮಹಿಳೆಯರ ಸಮಾನತೆಗಾಗಿ ನಡಿಗೆ-ಬೃಹತ್ ವಾಕಥಾನ್ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 6.30ಕ್ಕೆ ನಗರದಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ, ಮಣಪ್ಪುರಂ ರಿತಿ ಜ್ಯುಯಲರ್ಸ್, ಇಂಡಿಯಾನಾ ಎಸ್‌ಜೆಎಂ ಹಾರ್ಟ್ ಸೆಂಟರ್ ಪ್ರಾಯೋಜಕತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಮಹಿಳಾ ಸಂಘಟನೆಗಳ ಸಹಕಾರದೊಂದಿಗೆ ವಾಕಥಾನ್ ಆಯೋಜನೆಯಾಗಿದೆ. ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಬಿ.ಡಿ. ರಸ್ತೆ, ಡಿಸಿ ವೃತ್ತದ ಮೂಲಕ ಸಾಗುವ ಜಾಥಾ, ಡಿಸಿಸಿ ಬ್ಯಾಂಕ್ ಆವರಣದಲ್ಲಿ ಅಂತ್ಯಗೊಳ್ಳಲಿದೆ. ನೂರಾರು ಮಹಿಳೆಯರು ಹೆಜ್ಜೆ ಹಾಕಲಿದ್ದಾರೆ.
ಬೆಳಗ್ಗೆ 8 ಗಂಟೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ. ನಂದಿನಿದೇವಿ, ಸಿಪಿಒ ಗಾಯತ್ರಿ, ಎಸ್ಪಿ ಕೆ. ಪರಶುರಾಮ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ, ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹಾದೇವಿ ಎಂ.ಮರಕಟ್ಟಿ, ಗೃಹರಕ್ಷಕದಳ ಕಮಾಂಡೆಂಟ್ ಸಿ.ಕೆ. ಸಂಧ್ಯಾ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಮತಾ, ಅಂಗವಿಕಲರ ಇಲಾಖೆ ಕಲ್ಯಾಣಾಧಿಕಾರಿ ವೈಶಾಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ ಭಾಗವಹಿಸುವರು.
ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಪೊಟ್ಯಾಟೋ ರೇಸ್, ಕುಕಿಂಗ್ ವಿಥೌಟ್ ಫೈರ್, ಮೊದಲಾದವುಗಳ ವಿಜೇತರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುತ್ತದೆ. ವಾಕಥಾನ್‌ನಲ್ಲಿ ಭಾಗವಹಿಸುವ ಆಸಕ್ತ ಮಹಿಳೆಯರು ಮೊ.ಸಂ. 8884432545 ಅಥವಾ 8884432247 ಇಲ್ಲಿಗೆ ಸಂಪರ್ಕಿಸಬಹುದು.