ಜಿಲ್ಲೆ

ಪತ್ರಿಕಾ ಸಂಪಾದಕರ ಸಂಘಕ್ಕೆ ಆಯ್ಕೆ

ಚಿತ್ರದುರ್ಗ: ತುಮಕೂರಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ ಶಿವಮೊಗ್ಗದ ಎನ್.ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೊಪ್ಪಳದ ಗಿರೀಶ್‌ಕುಲಕರ್ಣಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ಸಂಘದ ಚಿತ್ರದುರ್ಗದ ಜಿಲ್ಲಾಧ್ಯಕ್ಷರಾಗಿ ಜಿ.ಓ.ಎನ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ನವೀನ್ ಕುಮಾರ್, ಖಜಾಂಚಿಯಾಗಿ ಗೊಂಡಬಾಳ್ ಬಸವರಾಜ್ ಆಯ್ಕೆಯಾಗಿದ್ದಾರೆ. ಎಸ್.ಶ್ರೀನಿವಾಸ್, ಜಯವಿಜಯ ಕುಮಾರ್, ತಿಪ್ಪೇಸ್ವಾಮಿ ಸಂಪಿಗೆ ಮತ್ತಿತರರು ಇದ್ದರು.