ಜಿಲ್ಲೆ

ಷಟಲ್ ಬ್ಯಾಡ್ಮಿಂಟನ್​ನಲ್ಲಿ ಪ್ರಥಮ

ಚನ್ನಗಿರಿ: ಚಿತ್ರದುರ್ಗ ಜಿಲ್ಲೆ ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಜೋನಲ್ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಚನ್ನಗಿರಿ ತಾಲೂಕು ಅಜ್ಜಿಹಳ್ಳಿ ಗ್ರಾಮದ ತರಳಬಾಳು ಶಾಲೆಯ ವಿದ್ಯಾರ್ಥಿಗಳಾದ ಎಚ್.ಡಿ. ಮನಮೋಹನ್ ಮತ್ತು ವಿಜಯಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.

ತರಳಬಾಳು ಶಾಲೆಯ ಮುಖ್ಯ ಶಿಕ್ಷಕ ಕಿರಣ್​ಕುಮಾರ್, ಸಂಸ್ಥೆ ಕಾರ್ಯದರ್ಶಿ ಎಂ.ಬಿ.ರಾಜಪ್ಪ ಹಾಗೂ ದೈಹಿಕ ಶಿಕ್ಷಕ ಪ್ರಶಾಂತ್ ಹರ್ಷ ವ್ಯಕ್ತಪಡಿಸಿದ್ದಾರೆ.