ಜಿಲ್ಲೆ

ಕುರಿ ಮಾಂಸ ಮಾರಾಟ ವಾಹನಕ್ಕೆ ಹಸಿರು ನಿಶಾನೆ

ಚಿತ್ರದುರ್ಗ: ರಾಜ್ಯಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಂಚಾರಿ ಮಾಂಸಾಹಾರಿ ಕ್ಯಾಂಟಿನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಂಗಳವಾರ ಡಿಸಿ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸಿದರು. ನಿಗಮವು ಪ್ರತಿ ತಾಲೂಕಿಗೆ ಒಬ್ಬ ಫಲಾನುಭವಿಯನ್ನು ವಾಹನ ಸಹಿತ ಮೊಬೈಲ್ ಕ್ಯಾಂಟಿನ್‌ಗೆ ಆಯ್ಕೆ ಮಾಡಿದೆ.

ಹೈದರಾಬಾದ್‌ನಲ್ಲಿ ಅಗತ್ಯ ತರಬೇತಿಯ ಕೊಡಿಸಿದ್ದು, ನಗರದಲ್ಲಿ ಸದ್ಯವೇ ವಾಹನ ಸಂಚಾರದ ಪಾಯಿಂಟ್‌ಗಳನ್ನು ಗುರುತಿಸಲಾಗುವುದು. ಪೋನ್ ಮಾಡಿದರೆ ಮಾಂಸವನ್ನು ಮನೆಗೆ ತಲುಪಿಸುವ ವ್ಯವಸ್ಥೆಗೂ ಚಾಲನೆ ಸಿಗಲಿ ಎಂದು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ತಿಳಿಸಿದರು.

ಈ ವೇಳೆ ಹಾಜರಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಖಾದ್ಯ ಹಾಗೂ ಮಾಂಸದ ಗುಣಮಟ್ಟ ಕಾಪಾಡಿಕೊಳ್ಳುವಂತೆ ತಾಕೀತು ಮಾಡಿದರು.