ಜಿಲ್ಲೆ

ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ

Chitradurga

ಚಿತ್ರದುರ್ಗ: ನ್ಯೂಸ್ ಪೇಪರ್ ಹಂಚುವ ವೇಳೆ ತನಗೆ ಸಿಕ್ಕ ಐ-ಫೋನ್‌ನ್ನು ಮಾಲೀಕರಿಗೆ ತಲುಪಿಸುವ ಮೂಲಕ ಪತ್ರಿಕಾ ವಿತಕ ಪ್ರಾ ಮಾಣಿಕತೆ ಮೆರೆದಿದ್ದಾನೆ.

ಫೆ.27ರಂದು ಮುಂಜಾನೆ ನಗರದ ಜೈನ್ ಕಾಲನಿ ಬಳಿ ಪತ್ರಿಕಾ ವಿತರಕ ಸುನೀಲ್ ಅವರಿಗೆ ಫೋನ್ ಸಿಕ್ಕಿತ್ತು. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅದರ ಮಾಲೀಕ, ನಗರದ ಹಳೇ ಅಂಚೆ ಕಚೇರಿ ಬಳಿಯ ನಿವಾಸಿ ಬಾಬುಲಾಲ್ ಅವರಿಗೆ ಎಸ್‌ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಬುಧವಾರ ಫೋನ್ ಹಿಂತಿರುಗಿಸಿ, ಪತ್ರಿಕಾ ವಿತರಕನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕಾ ವಿತರಕ ಸುನೀಲ್, ಸಹೋದರಿ ಆರ್.ಎಂ.ಅಭಿನಯ ಇದ್ದರು.