ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘ ರಾಜೇಂದ್ರ (ಎಸ್‌ಜೆಎಂ) ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕ್ ಆವರಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಮಹಮ್ಮದ್ ಯೂನಸ್ ಪರ್ವೀಜ್ ಘೋಷಿಸಿದರು.
ಉಪಾಧ್ಯಕ್ಷರಾಗಿ ಎ.ಜೆ.ಪರಮಶಿವಯ್ಯ, ನಿರ್ದೇಶಕರಾಗಿ ಎಂ.ಜಿ.ದೊರೆಸ್ವಾಮಿ, ಎನ್.ತಿಪ್ಪಣ್ಣ, ಬಿ.ಎಂ.ಜಗದೀಶ್, ಬಿ.ಜಿ. ನಾಗರಾಜ್, ಎನ್.ಗಂಗಾಧರ, ಡಾ.ಆರ್.ಗೌರಮ್ಮ, ಡಾ.ಸವಿತಾ, ಪಿ.ವೀರೇಂದ್ರಕುಮಾರ್, ಪ್ರೊ.ಸಿ.ಬಸವರಾಜಪ್ಪ, ಎನ್.ಜಿ.ಶ್ರೆನಿವಾಸ್, ಎಚ್.ಪ್ರಕಾಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಶರಣರನ್ನು ಗೌರವಿಸಿದರು. ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ್ ಇದ್ದರು.