ಜಿಲ್ಲೆ

ರಾಯಣ್ಣ ವೃತ್ತಕ್ಕೆ ಅಲಂಕಾರ ಮಾಡಿ

ಚಿತ್ರದುರ್ಗ: ಗಣ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ವೀರ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಜ.25, 26ರಂದು ಎರಡು ದಿನ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಲು ಮುಂದಾಗಬೇಕು ಎಂದು ರಾಯಣ್ಣ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಅವರಿಗೆ ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಟಿ.ಆನಂದ್ ನೇತೃತ್ವದಲ್ಲಿ ಬುಧವಾರ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಸಂಗೊಳ್ಳಿ ರಾಯಣ್ಣ ವೃತ್ತವನ್ನು ವಿಶೇಷವಾಗಿ ಅಲಂಕಾರ ಮಾಡಬೇಕು. ಜತೆಗೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡ ಜಿ.ರಾಘವೇಂದ್ರ, ಅಣ್ಣಪ್ಪ ಇತರರಿದ್ದರು.