ಜಿಲ್ಲೆ

30ರ ವರೆಗೆ ಬಿಎಸ್-4 ವಾಹನ ನೋಂದಣಿ

Chitradurga

ಚಿತ್ರದುರ್ಗ: 2020 ಮಾರ್ಚ್ 31ರ ವರೆಗೆ ಮಾರಾಟವಾದ ಬಿಎಸ್-4 ಮೋಟಾರ್ ಸೈಕಲ್, ಕಾರು ಮತ್ತು ಸಾರಿಗೆ ವಾಹನಗಳ ನೋಂದಣಿಗೆ ಏ.30ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್‌ಟಿಒ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.

ವಾಹನ ಮಾಲೀಕರು ಆನ್‌ಲೈನ್ ಶುಲ್ಕ ಮತ್ತು ತೆರಿಗೆ ಪಾವತಿಸಬೇಕಾಗಿರುತ್ತದೆ. ನಗದು ಸಂದಾಯಕ್ಕೆ ಅವಕಾಶವಿಲ್ಲ. ಟ್ರಾಕ್ಟರ್-ಟ್ರೈಲರ್ ಮತ್ತು ನಿರ್ಮಾಣ ವಾಹನಗಳಾದ ಜೆಸಿಬಿ ಹಾಗೂ ಇತರೆ ವಾಹನಗಳನ್ನು ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ತೆರವು ಬಳಿಕ ನೋಂದಾಯಿಸಲಾಗುವುದು.

ಎಲ್‌ಎಲ್‌ಆರ್, ಡಿಎಲ್, ವಾಹನದ ಮಾಲೀಕತ್ವದ ವರ್ಗಾವಣೆ ಹಾಗೂ ಇತರೆ ಸೇವೆಗಳು ಸದ್ಯಕ್ಕೆ ಲಭ್ಯ ಇರುವುದಿಲ್ಲ ಎಂದು ತಿಳಿಸಿದ್ದಾರೆ.