ಚಿತ್ರದುರ್ಗ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ 2020ನೇ ಸಾಲಿನಲ್ಲಿ ಆಯ್ಕೆಯಾದ ಗ್ರಾಪಂ ಸದಸ್ಯರ 2ನೇ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲು ನಿಗದಿಪಡಿಸಲಾಗಿದೆ.
ಚಿತ್ರದುರ್ಗ ತಾಲೂಕಿನ 38 ಗ್ರಾಪಂಗಳ ಪೈಕಿ 13 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 7 ಮಹಿಳೆ. 10 ಅನುಸೂಚಿತ ಪಂಗಡ, ಇದರಲ್ಲಿ 5 ಮಹಿಳೆ. 15 ಸಾಮಾನ್ಯ ಹಾಗೂ ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಚಳ್ಳಕೆರೆ ತಾಲೂಕಿನ 40 ಗ್ರಾಪಂಗಳ 11 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 6 ಮಹಿಳೆ. 14 ಅನುಸೂಚಿತ ಪಂಗಡ ಇದರಲ್ಲಿ 7 ಮಹಿಳೆ. 15 ಸಾಮಾನ್ಯ ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಮೊಳಕಾಲ್ಮೂರು ತಾಲೂಕಿನ 16 ಗ್ರಾಪಂಗಳಲ್ಲಿ 4 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 2 ಮಹಿಳೆ. 8 ಅನುಸೂಚಿತ ಪಂಗಡ ಇದರಲ್ಲಿ 4 ಮಹಿಳೆ. 4 ಸಾಮಾನ್ಯ ಇದರಲ್ಲಿ 2 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಹಿರಿಯೂರು ತಾಲೂಕಿನ 33 ಗ್ರಾಪಂಗಳ ಪೈಕಿ 10 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 5 ಮಹಿಳೆ. 4 ಅನಸೂಚಿತ ಪಂಗಡ ಇದರಲ್ಲಿ 2 ಮಹಿಳೆ. 2 ಹಿಂದುಳಿದ ಅ ವರ್ಗಕ್ಕೆ ಇ ದರಲ್ಲಿ 1 ಮಹಿಳೆ. 17 ಸಾಮಾನ್ಯ, ಇದರಲ್ಲಿ 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.
ಹೊಳಲ್ಕೆರೆ ತಾಲೂಕಿನ 29 ಗ್ರಾಪಂಗಳಲ್ಲಿ 9 ಅನುಸೂಚಿತ ಜಾತಿ, ಇದರಲ್ಲಿ 5 ಮಹಿಳೆ. 4 ಅನುಸೂಚಿತ ಪಂಗಡ, ಇದರಲ್ಲಿ 2 ಮಹಿಳೆ, 1 ಹಿಂದುಳಿದ ಅ ವರ್ಗದ ಮಹಿಳೆ. 15 ಸಾಮಾನ್ಯ, ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲು.
ಹೊಸದುರ್ಗ ತಾಲೂಕಿನ 33 ಗ್ರಾಪಂ ಪೈಕಿ 7 ಅನುಸೂಚಿತ ಜಾತಿ, ಇದರಲ್ಲಿ 4 ಮಹಿಳೆ. 3 ಅನುಸೂಚಿತ ಪಂಗಡ, ಇದರಲ್ಲಿ 2 ಮಹಿಳೆ. 5 ಹಿಂದುಳಿದ ಅ ವರ್ಗಕ್ಕೆ, ಇದರಲ್ಲಿ 2 ಮಹಿಳೆ, 1 ಹಿಂದುಳಿದ ಬ ವರ್ಗದ ಮಹಿಳೆ. 17 ಸಾಮಾನ್ಯ ಇದರಲ್ಲಿ 8 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಗ್ರಾಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಕಾರ‌್ಯಕ್ರಮ ಆಯಾ ತಾಲೂಕು ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ.
ಜೂ.19 ಬೆಳಗ್ಗೆ 11 ಗಂಟೆ-ಮೊಳಕಾಲ್ಮೂರು ಗುರುಭವನ. ಮಧ್ಯಾಹ್ನ 3-ಚಳ್ಳಕೆರೆ ಗುರು ರಾಘವೇಂದ್ರ ಕಲ್ಯಾಣ ಮಂಟಪ. 20ರ ಬೆಳಗ್ಗೆ 11-ಹೊಳಲ್ಕೆರೆ ವಾಲ್ಮೀಕಿ ಸಮುದಾಯ ಭವನ. ಮಧ್ಯಾಹ್ನ 3 ಗಂಟೆಗೆ ಹೊಸದುರ್ಗ ಗೌಸಿಯಾ ಶಾದಿ ಮಹಲ್.
21ರ ಬೆಳಗ್ಗೆ 11ಕ್ಕೆ ಹಿರಿಯೂರು ತಹಾ ಕಲ್ಯಾಣ ಮಂಟಪ. ಮಧ್ಯಾಹ್ನ 3ಕ್ಕೆ ಚಿತ್ರದುರ್ಗದ ತಿರುಮಲ ಕಲ್ಯಾಣ ಮಂಟಪದಲ್ಲಿ ಮೀಸಲು ನಿಗದಿ ಕಾರ‌್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗ್ರಾಪಂ ಸದಸ್ಯರು ತಪ್ಪದೆ ಹಾಜರಿರುವಂತೆ ಜಿಲ್ಲಾಧಿಕಾರಿ ಜಿಆರ್‌ಜಿ ದಿವ್ಯಾಪ್ರಭು ಅವರು ತಿಳಿಸಿದ್ದಾರೆ.